ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಆಟಗಾರರಿಗೆ ವೀಸಾ ನಿರಾಕರಣೆ

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಕೆಲವು ಟೀಮ್​ಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರು ಇರುವುದು ಇದೀಗ ಹೊಸ ಸಮಸ್ಯೆಗೆ ಕಾರಣವಾಗಿದೆ. ಅಂದರೆ ಪಾಕ್ ಮೂಲದ ಕ್ರಿಕೆಟಿಗರಿಗೆ ಭಾರತದ ವೀಸಾ ಪಡೆಯುವುದು ಸಮಸ್ಯೆಯಾಗಿ ಮಾರ್ಪಟ್ಟಿದೆ.

ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಆಟಗಾರರಿಗೆ ವೀಸಾ ನಿರಾಕರಣೆ
ಸಾಂದರ್ಭಿಕ ಚಿತ್ರ

Updated on: Jan 14, 2026 | 10:25 AM

ಬಹುನಿರೀಕ್ಷಿತ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿದೆ. ಈ ತಂಡಗಳಲ್ಲಿ ಕೆಲ ಟೀಮ್​ಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕೆ ಮುಖ್ಯ ಕಾರಣ ತಮ್ಮ ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರು ಇರುವುದು.

ಭಾರತದಲ್ಲಿ ನಡೆಯಲಿರುವ ಟಿ20 ಪಂದ್ಯಗಳಿಗೆ ಯುಎಸ್​ಎ ಆಟಗಾರರು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ನಾಲ್ವರು ಪಾಕಿಸ್ತಾನ್ ಮೂಲದ ಅಮರಿಕನ್ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ. ಅದರಲ್ಲೂ ಪಾಕಿಸ್ತಾನ್ ಮೂಲದ ಯುಎಸ್​ಎ ವೇಗಿ ಅಲಿ ಖಾನ್ ಭಾರತಕ್ಕೆ ಪ್ರಯಾಣಿಸಲು ವೀಸಾ ನಿರಾಕರಿಸುವುದನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.

ಸಂಕಷ್ಟದಲ್ಲಿ 15 ಕ್ಕೂ ಹೆಚ್ಚು ಆಟಗಾರರು:

ಟಿ20 ವಿಶ್ವಕಪ್​​ನಲ್ಲಿ ಭಾಗವಹಿಸಲಿರುವ ಹಲವು ತಂಡಗಳಲ್ಲಿ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ. ಅದರಲ್ಲೂ ಯುಎಇ ತಂಡದಲ್ಲಿರುವ ಬಹುತೇಕರು ಪಾಕಿಸ್ತಾನ್ ಮೂಲದವರು. ಯುಎಇ ತಂಡದ ನಾಯಕ ಮುಹಮ್ಮದ್ ವಾಸಿಮ್ ಸೇರಿದಂತೆ 7 ಆಟಗಾರರು ಪಾಕಿಸ್ತಾನದಲ್ಲಿ ಜನಿಸಿದವರು. ಹೀಗಾಗಿ ವೀಸಾ ನಿರಾಕರಣೆಯಿಂದ ಯುಎಇ ತಂಡವು ಹೆಚ್ಚಿನ ತೊಂದರೆಯನ್ನು ಎದುರಿಸಲಿದೆ.

ಯುಎಇ ಜೊತೆಗೆ, ಇಂಗ್ಲೆಂಡ್, ಒಮಾನ್, ಇಟಲಿ, ಕೆನಡಾ, ಝಿಂಬಾಬ್ವೆ ಮತ್ತು ನೆದರ್‌ಲೆಂಡ್ಸ್​ ತಂಡಗಳಲ್ಲೂ ಪಾಕಿಸ್ತಾನ್ ಮೂಲದ ಆಟಗಾರರಿದ್ದಾರೆ.  ಅಂದರೆ 15 ಕ್ಕೂ ಹೆಚ್ಚು ಪಾಕಿಸ್ತಾನ್ ಮೂಲದ ಆಟಗಾರರು  ಭಾರತಕ್ಕೆ ವೀಸಾ ಪಡೆಯುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪರಿಣಾಮ, ಪಂದ್ಯಾವಳಿಯಲ್ಲಿ ಅವರ ಭಾಗವಹಿಸುವಿಕೆ ಅನಿಶ್ಚಿತವಾಗಿದೆ.

ಐಸಿಸಿಯ ಸಹಾಯ ಕೇಳಿದ ಮಂಡಳಿಗಳು:

ಭಾರತದ ವೀಸಾ ಕಾನೂನುಗಳಿಂದಾಗಿ ಬೆದರಿಕೆಗಳನ್ನು ಎದುರಿಸುತ್ತಿರುವ ಕ್ರಿಕೆಟ್ ಮಂಡಳಿಗಳು ಇದೀಗ ಐಸಿಸಿಯ ಸಹಾಯವನ್ನು ಕೋರಿವೆ. ಈ ಎಲ್ಲಾ ತಂಡಗಳ ಆಟಗಾರರಿಗೆ ವೀಸಾ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ. ಆದರೆ ಉನ್ನತ ಮಟ್ಟದ ಹಸ್ತಕ್ಷೇಪವಿಲ್ಲದೆ ಸಕಾಲಿಕ ಅನುಮೋದನೆ ಅಸಂಭವವಾಗಿದೆ.

ಇದನ್ನೂ ಓದಿ: ಹೊಸ ತವರು ಮೈದಾನ: 2 ಸ್ಟೇಡಿಯಂಗಳಲ್ಲಿ ಕಣಕ್ಕಿಳಿಯಲಿದೆ RCB

ಸಕಾಲಿಕ ಪರಿಹಾರವನ್ನು ಕಂಡುಕೊಳ್ಳದಿದ್ದರೆ, ಹಲವಾರು ಪ್ರಮುಖ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಇದು ಪಂದ್ಯಾವಳಿಯ  ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸರಳವಾಗಿ ಹೇಳುವುದಾದರೆ, ಭಾರತದ ವೀಸಾ ಕಾನೂನು ಇದೀಗ ಐಸಿಸಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದು ಕೂಡ ಅನಿವಾರ್ಯವಾಗಿದೆ.