ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ (IPL 2024) 17 ನೇ ಆವೃತ್ತಿ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಕುರಿತು ಬಿಗ್ ಅಪ್ಡೇಟ್ ಹೊರಬಿದ್ದಿದೆ. ಅದರಂತೆ ಬಹು ನಿರೀಕ್ಷಿತ ಈ ಚುಟುಕು ಸಮರದ ಮೊದಲ 17 ದಿನಗಳ ಅಂದರೆ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿದೆ. ವೇಳಾಪಟ್ಟಿಯ ಪ್ರಕಾರ ಈ ಟೂರ್ನಿ ಮುಂದಿನ ತಿಂಗಳು ಅಂದರೆ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಸಿಎಸ್ಕೆಯ ತವರು ನೆಲ ತಮಿಳುನಾಡಿನ ಎಂ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2 ಹಂತಗಳಲ್ಲಿ ವೇಳಾಪಟ್ಟಿ ಬಿಡುಗಡೆಯಾಗಲಿದ್ದು, ಮೊದಲ ಹಂತವನ್ನು ಈಗ ಪ್ರಕಟಿಸಲಾಗಿದೆ. ಅದರಂತೆ ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ನ ಮೊದಲ ಹಂತ ಏಪ್ರಿಲ್ 7 ರ ವರೆಗೆ ನಡೆಯಲ್ಲಿದೆ. ಅಂದರೆ ಮೊದಲ ಹಂತದ ಐಪಿಎಲ್ 17 ದಿನಗಳವರೆಗೆ ನಡೆಯಲ್ಲಿದೆ. ಈ ಅವದಿಯಲ್ಲಿ 21 ಪಂದ್ಯಗಳು ನಡೆಯಲ್ಲಿವೆ. ಐಪಿಎಲ್ನ ದ್ವಿತೀಯಾರ್ಧದ ವೇಳಾಪಟ್ಟಿಯನ್ನು ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ನಂತರವಷ್ಟೇ ನಿರ್ಧಾರವಾಗಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಈ ಹಿಂದೆಯೇ ತಿಳಿಸಿದ್ದರು. ಅದರಂತೆ ಐಪಿಎಲ್ನ ಉಳಿದಾರ್ಧದ ವೇಳಾಪಟ್ಟಿ ಲೋಕಸಬೆ ಚುನಾವಣೆ ದಿನಾಂಕ ಪ್ರಕಟವಾದ ಬಳಿಕ ಹೊರಬರಲಿದೆ.
🚨 𝗦𝗧𝗢𝗣 𝗧𝗛𝗘 𝗣𝗥𝗘𝗦𝗦 – TATA #IPL2024 Schedule is HERE! 🤩
Get ready for the thrill, excitement and fun to begin! Save this post so you don’t have to search for it again 🔍
It’s #CSKvRCB, @msdhoni 🆚 @imVkohli in the opener! Who’s your pick ? 👀#IPLSchedule #IPLonStar pic.twitter.com/oNLx116Uzi
— Star Sports (@StarSportsIndia) February 22, 2024
ಪಂದ್ಯ ಸಂಖ್ಯೆ | ದಿನಾಂಕ | ಮುಖಾಮುಖಿ | ಸಮಯ | ಸ್ಥಳ |
1 | ಮಾರ್ಚ್ 22 | ಸಿಎಸ್ಕೆ vs ಆರ್ಸಿಬಿ | ಸಂಜೆ 7:30 | ಚೆನ್ನೈ |
2 | ಮಾರ್ಚ್ 23 | ಪಂಜಾಬ್ vs ಡೆಲ್ಲಿ | ಮಧ್ಯಾಹ್ನ 3:30 | ಮೊಹಾಲಿ |
3 | ಮಾರ್ಚ್ 23 | ಕೋಲ್ಕತ್ತಾ vs ಹೈದರಾಬಾದ್ | ಸಂಜೆ 7:30 | ಕೋಲ್ಕತ್ತಾ |
4 | ಮಾರ್ಚ್ 24 | ರಾಜಸ್ಥಾನ್ vs ಲಕ್ನೋ | ಮಧ್ಯಾಹ್ನ 3:30 | ಜೈಪುರ |
5 | ಮಾರ್ಚ್ 24 | ಗುಜರಾತ್ vs ಮುಂಬೈ | ಸಂಜೆ 7:30 | ಅಹಮದಾಬಾದ್ |
6 | ಮಾರ್ಚ್ 25 | ಆರ್ಸಿಬಿ vs ಪಂಜಾಬ್ | ಸಂಜೆ 7:30 | ಬೆಂಗಳೂರು |
7 | ಮಾರ್ಚ್ 26 | ಚೆನ್ನೈ vs ಗುಜರಾತ್ | ಸಂಜೆ 7:30 | ಚೆನ್ನೈ |
8 | ಮಾರ್ಚ್ 27 | ಹೈದರಾಬಾದ್ vs ಮುಂಬೈ | ಸಂಜೆ 7:30 | ಹೈದರಾಬಾದ್ |
9 | ಮಾರ್ಚ್ 28 | ರಾಜಸ್ಥಾನ್ vs ಡೆಲ್ಲಿ | ಸಂಜೆ 7:30 | ಜೈಪುರ |
10 | ಮಾರ್ಚ್ 29 | ಆರ್ಸಿಬಿ vs ಕೋಲ್ಕತ್ತಾ | ಸಂಜೆ 7:30 | ಬೆಂಗಳೂರು |
11 | ಮಾರ್ಚ್ 30 | ಲಕ್ನೋ vs ಪಂಜಾಬ್ | ಸಂಜೆ 7:30 | ಲಕ್ನೋ |
12 | ಮಾರ್ಚ್ 31 | ಗುಜರಾತ್ vs ಹೈದರಾಬಾದ್ | ಮಧ್ಯಾಹ್ನ 3:30 | ಅಹಮದಾಬಾದ್ |
13 | ಮಾರ್ಚ್ 31 | ಡೆಲ್ಲಿ vs ಚೆನ್ನೈ | ಸಂಜೆ 7:30 | ವೈಜಾಗ್ |
14 | ಏಪ್ರಿಲ್ 1 | ಮುಂಬೈ vs ರಾಜಸ್ಥಾನ್ | ಸಂಜೆ 7:30 | ಮುಂಬೈ |
15 | ಏಪ್ರಿಲ್ 2 | ಆರ್ಸಿಬಿ vs ಲಕ್ನೋ | ಸಂಜೆ 7:30 | ಬೆಂಗಳೂರು |
16 | ಏಪ್ರಿಲ್ 3 | ಡೆಲ್ಲಿ vs ಕೆಕೆಆರ್ | ಸಂಜೆ 7:30 | ವೈಜಾಗ್ |
17 | ಏಪ್ರಿಲ್ 4 | ಗುಜರಾತ್ vs ಪಂಜಾಬ್ | ಸಂಜೆ 7:30 | ಅಹಮದಾಬಾದ್ |
18 | ಏಪ್ರಿಲ್ 5 | ಹೈದರಾಬಾದ್ vs ಚೆನ್ನೈ | ಸಂಜೆ 7:30 | ಹೈದರಾಬಾದ್ |
19 | ಏಪ್ರಿಲ್ 6 | ರಾಜಸ್ಥಾನ್ vs ಆರ್ಸಿಬಿ | ಸಂಜೆ 7:30 | ಜೈಪುರ |
20 | ಏಪ್ರಿಲ್ 7 | ಮುಂಬೈ vs ಡೆಲ್ಲಿ | ಮಧ್ಯಾಹ್ನ 3:30 | ಮುಂಬೈ |
21 | ಏಪ್ರಿಲ್ 7 | ಲಕ್ನೋ vs ಗುಜರಾತ್ | ಸಂಜೆ 7:30 | ಲಕ್ನೋ |
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Thu, 22 February 24