ಈ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಮತ್ತು ಏಕದಿನ ಕ್ರಿಕೆಟ್ನಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ ನಿಜ. ಆದ್ರೆ ಟಿಟ್ವೆಂಟಿ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ದುರ್ಬಲ ತಂಡಗಳ ವಿರುದ್ಧ ಜಯಗಳಿಸಿದ್ರೂ, ಬಲಿಷ್ಟ ತಂಡಗಳ ವಿರುದ್ಧ ಮುಗ್ಗರಿಸಿ ನಿರಾಸೆ ಅನುಭವಿಸಿದೆ.
ಈ ವರ್ಷದ ಆರಂಭದಲ್ಲೇ ನ್ಯೂಜಿಲೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯಲ್ಲಿ ಭಾರತ ಮುಗ್ಗರಿಸ್ತು. ನ್ಯೂಜಿಲೆಂಡ್ ಬಳಿಕ ತವರಿನಲ್ಲೇ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳ ಟಿಟ್ವೆಂಟಿ ಸರಣಿಯಲ್ಲೂ ಮುಗ್ಗರಿಸಿದ್ರು. ನಂತರ ಫ್ಲೋರಿಡಾದಲ್ಲಿ ನಡೆದ ವಿಂಡೀಸ್ ವಿರುದ್ಧದ ಎರಡು ಪಂದ್ಯಗಳ ಟಿಟ್ವೆಂಟಿ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ್ರು.
2019ರಲ್ಲಿ ಭಾರತ ತಂಡದ ಸಾಧನೆ:
2019ರಲ್ಲಿ 16ಟಿ-ಟ್ವೆಂಟಿ ಪಂದ್ಯಗಳನ್ನಾಡಿದ್ದ ಭಾರತ 9ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನೂಳಿದ 7ಪಂದ್ಯಗಳಲ್ಲಿ ಟೀಂ ಇಂಡಿಯಾ ಹೀನಾಯ ಸೋಲುಕಂಡಿದೆ.
ಇನ್ನು ನವೆಂಬರ್ 10ರಂದು ನಾಗ್ಪುರದಲ್ಲಿ ನಡೆದ ಬಾಂಗ್ಲಾ ವಿರುದ್ಧದ ಮೂರನೇ ಟಿ-ಟ್ವೆಂಟಿ ಪಂದ್ಯದಲ್ಲಿ ದೀಪಕ್ ಚಹರ್ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ. ಅಷ್ಟೇ ಅಲ್ಲ. ಈ ಪಂದ್ಯದಲ್ಲಿ ಚಹರ್ ಕೇವಲ 7ರನ್ಗೆ 6ವಿಕೆಟ್ ಪಡೆದು ಟಿಟ್ವೆಂಟಿ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯನ್ನೇ ಬರೆದಿದ್ದಾನೆ.
ಟಿಟ್ವೆಂಟಿಯಲ್ಲಿ ಬಲಿಷ್ಟಗೊಳ್ಳಬೇಕು ಭಾರತ!
ಟಿಟ್ವೆಂಟಿಯಲ್ಲಿ ಟೀಮ್ ಇಂಡಿಯಾ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ. ತವರಿನಲ್ಲೇ ಟೀಮ್ ಇಂಡಿಯಾ ಮುಗ್ಗರಿಸಿದೆ. ಹೀಗಾಗಿ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯೋ ಟಿಟ್ವೆಂಟಿ ಸರಣಿಗೆ ಕೆಲವೇ ತಿಂಗಳುಗಳು ಮಾತ್ರ ಬಾಕಿಯಿದೆ. ಹೀಗಾಗಿ ಚುಟುಕು ಸಮರದಲ್ಲಿ ಚಾಂಪಿಯನ್ ಆಗ್ಬೇಕು ಅಂದ್ರೆ, ಬ್ಲೂ ಬಾಯ್ಸ್ ಎಲ್ಲಾ ವಿಭಾಗದಲ್ಲೂ ಇಂಪ್ರೂವ್ ಆಗಲೇಬೇಕು.
ಒಟ್ನಲ್ಲಿ 2019ಭಾರತೀಯ ಕ್ರಿಕೆಟ್ಗೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ಗೆ ಅದೃಷ್ಟದ ವರ್ಷ. ಆದ್ರೆ ಟಿಟ್ವೆಂಟಿ ಕ್ರಿಕೆಟ್ನಲ್ಲಿ ಭಾರತ ಡಲ್ ಆಗಿದೆ ಅನ್ನೋದನ್ನ ಅಂಕಿ ಅಂಶಗಳೇ ಸಾರಿ ಹೇಳುತ್ತಿವೆ.
Published On - 1:18 pm, Mon, 30 December 19