ವೈಭವ್ ಸೂರ್ಯವಂಶಿಯ ‘ಆರಾ’ ಕಂಡು ಸ್ಟಾರ್ ಕ್ರಿಕೆಟಿಗರೇ ದಂಗು..!

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿಯು ಶುರುವಾಗಲಿದೆ. ಐದು ಪಂದ್ಯಗಳ ಈ ಸರಣಿಯ ಮೂಲಕ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸುವ ಇರಾದೆಯಲ್ಲಿದ್ದಾರೆ. ಒಂದು ವೇಳೆ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಪಾಲಾಗಲಿದೆ.

ವೈಭವ್ ಸೂರ್ಯವಂಶಿಯ ‘ಆರಾ’ ಕಂಡು ಸ್ಟಾರ್ ಕ್ರಿಕೆಟಿಗರೇ ದಂಗು..!
Vaibhav Sooryavanshi
Image Credit source: x.com

Updated on: Jul 02, 2026 | 1:10 PM

ಕ್ರಿಕೆಟ್ ಜಗತ್ತಿನಲ್ಲಿ ಮುಂದಿನ ಸೂಪರ್ ಸ್ಟಾರ್ ಯಾರು? ಈ ಪ್ರಶ್ನೆಗೆ ಸದ್ಯದ ಉತ್ತರ ವೈಭವ್ ಸೂರ್ಯವಂಶಿ. ಏಕೆಂದರೆ ವೈಭವ್ ಈಗಾಗಲೇ ಸ್ಟಾರ್ ಪಟ್ಟವನ್ನು ಅಲಂಕರಿಸಿದ್ದಾರೆ. ಅದು ಕೂಡ ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವ ಮುಂಚಿತವಾಗಿ ಎಂಬುದು ವಿಶೇಷ.

15ರ ಹರೆಯದ ವೈಭವ್ ಸೂರ್ಯವಂಶಿ ಭಾರತ ಹಿರಿಯರ ತಂಡಕ್ಕೆ ಇನ್ನೂ ಅಧಿಕೃತವಾಗಿ ಪಾದಾರ್ಪಣೆ ಮಾಡಿಲ್ಲ. ಆದರೂ ಇವರ ಸುತ್ತಲಿರುವ ಕ್ರೇಝ್ ಮತ್ತು ‘ಆರಾ’ ಯಾವುದೇ ಹಿರಿಯ ಸೂಪರ್‌ಸ್ಟಾರ್ ಆಟಗಾರನಿಗಿಂತ ಕಮ್ಮಿಯಿಲ್ಲ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಇವರನ್ನು ನೋಡಲು ಅಲ್ಲಿನ ಕ್ರೀಡಾಂಗಣಗಳಿಗೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ಕೆಳಗಿನ ವಿಡಿಯೋ.
YouTube video player

ಇಂಗ್ಲೆಂಡ್‌ನಲ್ಲಿ ವೈಭವ್ ಹವಾ:

ಪ್ರಸ್ತುತ ಭಾರತ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ವೈಭವ್ ಅವರ ಕ್ರೇಝ್ ಹೇಗಿದೆ ಎಂದರೆ, ಕೇವಲ ಟೀಮ್ ಹೋಟೆಲ್‌ನಲ್ಲಿ ಇವರನ್ನು ಒಂದು ಝಲಕ್ ನೋಡಲು ಅಥವಾ ನೆಟ್ಸ್‌ನಲ್ಲಿ ಇವರ ಬ್ಯಾಟಿಂಗ್ ವೀಕ್ಷಿಸಲು ಇಂಗ್ಲೆಂಡ್‌ನ ವಿವಿಧ ಭಾಗಗಳಿಂದ ಅಭಿಮಾನಿಗಳು 5-6 ಗಂಟೆ ಡ್ರೈವ್ ಮಾಡಿಕೊಂಡು ಬರುತ್ತಿದ್ದಾರೆ.

ಇತ್ತ ಅಭಿಮಾನಿಗಳು ಮತ್ತು ಪ್ರಾಯೋಜಕರು ವೈಭವ್ ಮೈದಾನಕ್ಕಿಳಿಯುವುದನ್ನು ನೋಡಲು ಕಾತರರಾಗಿದ್ದಾರೆ. ಆದರೆ ಭಾರತ ತಂಡದ ಮ್ಯಾನೇಜ್‌ಮೆಂಟ್ ಈ ಯುವ ಪ್ರತಿಭೆಯನ್ನು ಜಾಗರೂಕತೆಯಿಂದ ನಡೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನು ಕಣಕ್ಕಿಳಿಸಿರಲಿಲ್ಲ.

ಇತಿಹಾಸದ ಹೊಸ್ತಿಲಲ್ಲಿ ವೈಭವ್:

ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಈ 5 ಪಂದ್ಯಗಳ ಟಿ20 ಸರಣಿಯಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಭಾರತ ತಂಡದ ಪರ ಪಾದಾರ್ಪಣೆ ಮಾಡಿದರೆ, ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆ ಬರೆಯಲಿದ್ದಾರೆ. ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 16 ನೇ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು. ಇದೀಗ ಈ ದಾಖಲೆ ಮುರಿಯುವ ಹೊಸ್ತಿಲಲ್ಲಿದ್ದಾರೆ ವೈಭವ್ ಸೂರ್ಯವಂಶಿ.

ಇದನ್ನೂ ಓದಿ: IPLಗೆ ಗುಡ್ ಬೈ ಹೇಳಿದ ಹ್ಯಾರಿ ಬ್ರೂಕ್..!

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ, ಸೂರ್ಯಂಶ್ ಶೆಡ್ಗೆ.

 

Follow Us