ಮುಂಬೈನಲ್ಲಿ ಜಿಮ್​ಗೆ ಬಂದ ವಿರಾಟ್ ಕೊಹ್ಲಿ: ಏಷ್ಯಾಕಪ್​ಗೆ ತಯಾರಿ ಆರಂಭ

|

Updated on: Aug 15, 2023 | 9:54 AM

Virat Kohli back in gym: ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ​ಗೆ ಆಗಸ್ಟ್ 30 ರಂದು ಚಾಲನೆ ಸಿಗಲಿದೆ. ಈ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿ ಟೀಮ್ ಇಂಡಿಯಾ ಇನ್ನಷ್ಟೆ ಹೆಸರಿಸಬೇಕಿದೆ. ಇದರ ನಡುವೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಭ್ಯಾಸ ಶುರುಮಾಡಿಕೊಂಡಿದ್ದಾರೆ. ಕೊಹ್ಲಿ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಫೋಟೋ ವೈರಲ್ ಆಗುತ್ತಿದೆ.

ಮುಂಬೈನಲ್ಲಿ ಜಿಮ್​ಗೆ ಬಂದ ವಿರಾಟ್ ಕೊಹ್ಲಿ: ಏಷ್ಯಾಕಪ್​ಗೆ ತಯಾರಿ ಆರಂಭ
Virat Kohli Gym
Follow us on

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ ಬಳಿಕ ತವರಿಗೆ ಮರಳಿದ್ದ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದರು. ಇದೀಗ ವಿಶ್ರಾಂತಿಯಿಂದ ಹೊರಬಂದಿರುವ ಕೊಹ್ಲಿ ಮುಂಬರುವ ಏಷ್ಯಾಕಪ್ 2023 ಕ್ಕಾಗಿ ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಆಗಸ್ಟ್ 30 ರಂದು ಏಷ್ಯಾಕಪ್​ಗೆ ಚಾಲನೆ ಸಿಗಲಿದ್ದು, ಈ ಬಾರಿ ಹೈಬ್ರಿಡ್ ಮಾದರಿಯಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ. ಇದೀಗ ಈ ಪಂದ್ಯಾವಳಿಗೆ ಸಜ್ಜಾಗಲು ಕೊಹ್ಲಿ ಮುಂಬೈನಲ್ಲಿ ಜಿಮ್‌ಗೆ ಬಂದಿದ್ದು, ಬೆವರಿ ಹರಿಸುತ್ತಿದ್ದಾರೆ. ಕೊಹ್ಲಿ ಜಿಮ್‌ನಲ್ಲಿ ಸಮಯ ಕಳೆಯುತ್ತಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಇನ್ನಷ್ಟೆ ಪ್ರಕಟವಾಗಬೇಕಿದೆ. ಈ ವಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಸಭೆ ಕರೆದು ಆಟಗಾರರನ್ನು ಫೈನಲ್ ಮಾಡಲಿದೆ. ಆದರೆ, ಇದಕ್ಕೂ ಮುನ್ನವೇ ಅನೇಕ ಆಟಗಾರರು ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಏಷ್ಯಾಕಪ್‌ನಲ್ಲಿ ಏಕದಿನ ಮಾದರಿಯ ಪಂದ್ಯಾವಳಿ ನಡೆದಾಗ ಕೊಹ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ವಿರಾಟ್ ಒಟ್ಟು 11 ಪಂದ್ಯಗಳಲ್ಲಿ 61.3 ಸರಾಸರಿಯಲ್ಲಿ 3 ಶತಕ ಮತ್ತು 1 ಅರ್ಧಶತಕದೊಂದಿಗೆ 613 ರನ್‌ಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ
ಸಿಎಸ್​ಕೆ ಆಟಗಾರನಿಂದ ಮ್ಯಾಚ್ ಫಿಕ್ಸಿಂಗ್ ಆರೋಪ: ವಿದೇಶ ಪ್ರವಾಸಕ್ಕೆ ನಿಷೇಧ
ಟೀಮ್ ಇಂಡಿಯಾ ಸೇರಲು ರಾಹುಲ್-ಅಯ್ಯರ್ ಹರಸಾಹಸ: ಇಂದು ನಿರ್ಧಾರವಾಗುತ್ತಾ ಇವರ ಭವಿಷ್ಯ?
ಇಂಗ್ಲೆಂಡ್ ತಂಡಕ್ಕೆ ‘ಬೆನ್​’ಬಲ: ನಿವೃತ್ತಿ ಹಿಂಪಡೆದ ಸ್ಟೋಕ್ಸ್​..!
400 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ

ಜಿಮ್​ನಲ್ಲಿ ಸಮಯ ಕಳೆಯುತ್ತಿರುವ ವಿರಾಟ್ ಕೊಹ್ಲಿ:

 

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಏಷ್ಯಾಕಪ್‌ನಲ್ಲಿ 22 ಪಂದ್ಯಗಳಲ್ಲಿ 46.56 ಸರಾಸರಿಯಲ್ಲಿ 1 ಶತಕ ಮತ್ತು 6 ಅರ್ಧಶತಕಗಳೊಂದಿಗೆ 745 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಭಾರತದ ಮಾಜಿ ನಾಯಕ ಎಂಎಸ್ ಧೋನಿ 19 ಪಂದ್ಯಗಳಲ್ಲಿ 1 ಶತಕ ಮತ್ತು 3 ಅರ್ಧಶತಕಗಳೊಂದಿಗೆ 648 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಸೌತ್ ಆಫ್ರಿಕಾ ಏಕದಿನ ತಂಡ ಪ್ರಕಟ: ಯುವ ಸ್ಪೋಟಕ ದಾಂಡಿಗ ಎಂಟ್ರಿ

ಏಷ್ಯಾಕಪ್​ನಲ್ಲಿ ಭಾರತವು ಎ ಗುಂಪಿನಲ್ಲಿದೆ. ಭಾರತ ಜೊತೆ ಪಾಕಿಸ್ತಾನ ಮತ್ತು ನೇಪಾಳ ಕೂಡ ಇದೆ. ಬಿ ಗುಂಪು ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನವನ್ನು ಒಳಗೊಂಡಿದೆ. ಪಾಕಿಸ್ತಾನದ ಮುಲ್ತಾನ್‌ನಲ್ಲಿ ಆಗಸ್ಟ್ 30 ರಂದು ಪಾಕಿಸ್ತಾನ ಮತ್ತು ನೇಪಾಳ ಮುಖಾಮುಖಿ ಆಗುವ ಮೂಲಕ ಪಂದ್ಯಾವಳಿ ಪ್ರಾರಂಭವಾಗಲಿದೆ. ಭಾರತ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಸೂಪರ್ ಫೋರ್ ಹಂತದ ಪಂದ್ಯಗಳು ಸೆಪ್ಟೆಂಬರ್ 6 ರಂದು ಲಾಹೋರ್‌ನಲ್ಲಿ ಆಯಾ ಗುಂಪುಗಳಲ್ಲಿ A1 ಮತ್ತು B2 ತಂಡಗಳ ನಡುವೆ ನಡೆಯಲಿದೆ. ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ಫೈನಲ್ ಏರ್ಪಡಿಸಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ