Virat Kohli: ಬೇಕೆಂದೇ ಕೊಹ್ಲಿಗೆ ಡಿಕ್ಕಿ ಹೊಡೆದ ಸ್ಟೊಯಿನಿಸ್: ಕೋಪದಲ್ಲಿ ವಿರಾಟ್ ಏನು ಮಾಡಿದ್ರು ನೋಡಿ

|

Updated on: Mar 23, 2023 | 8:49 AM

India vs Australia 3rd ODI: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಆಸೀಸ್ ಆಲ್ರೌಂಡರ್​ ಮಾರ್ಕಸ್ ಸ್ಟೊಯಿನಿಸ್ ನಡುವೆ ದೊಡ್ಡ ಜಗಳ ನಡೆಯುವುದರಲ್ಲಿತ್ತು. ಇಲ್ಲಿದೆ ನೋಡಿ ಈ ಕುರಿತ ಮಾಹಿತಿ.

Virat Kohli: ಬೇಕೆಂದೇ ಕೊಹ್ಲಿಗೆ ಡಿಕ್ಕಿ ಹೊಡೆದ ಸ್ಟೊಯಿನಿಸ್: ಕೋಪದಲ್ಲಿ ವಿರಾಟ್ ಏನು ಮಾಡಿದ್ರು ನೋಡಿ
Virat Kohli and Marcus Stoinis
Follow us on

ಭಾರತ ಪ್ರವಾಸ ಬೆಳೆಸಿದ್ದ ಆಸ್ಟ್ರೇಲಿಯಾ (India vs Australia) ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಹಿಂತಿರುಗಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಕಳೆದುಕೊಂಡಿದ್ದಕ್ಕೆ ಸೇಡುಕೂಡ ತೀರಿಸಿಕೊಂಡಿದೆ. ಬುಧವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ಆಸೀಸ್ ಭರ್ಜರಿ ಪ್ರದರ್ಶನ ತೋರಿ 21 ರನ್​ಗಳ ಜಯ ದಾಖಲಿಸಿ 2-1 ಅಂತರದಿಂದ ಸರಣಿ ತನ್ನದಾಗಿಸಿತು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ ನಂ.1 ಪಟ್ಟಕ್ಕೇರಿತು. ಇತ್ತ 2019ರ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ಸೋತ ಮೊದಲ ಒಡಿಐ ಸರಣಿ ಇದಾಯಿತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಮೈ ಜುಮ್ ಎನಿಸುವ ಕೆಲ ಘಟನೆಗಳೂ ನಡೆದವು.

ಮುಖ್ಯವಾಗಿ ವಿರಾಟ್ ಕೊಹ್ಲಿ ಹಾಗೂಆಸೀಸ್ ಆಲ್ರೌಂಡರ್​ ಮಾರ್ಕಸ್ ಸ್ಟೊಯಿನಿಸ್ ನಡುವೆ ದೊಡ್ಡ ಜಗಳ ನಡೆಯುವುದರಲ್ಲಿತ್ತು. ಭಾರತದ ಬ್ಯಾಟಿಂಗ್ ಇನ್ನಿಂಗ್ಸ್​ನ 21ನೇ ಓವರ್​ನಲ್ಲಿ ಸ್ಟೊಯಿನಿಸ್ ಅವರು ಕೆಎಲ್ ರಾಹುಲ್​ಗೆ ಡಾಟ್ ಬಾಲ್ ಎಸೆದರು. ಮಾರ್ಕಸ್ ಚೆಂಡು ಎಸೆದು ಹಿಂತಿರುಗಿ ಬರುವಾಗ ಅತ್ತ ನಾನ್ ಸ್ಟ್ರೈಕರ್​ನಲ್ಲಿದ್ದ ವಿರಾಟ್ ಕೊಹ್ಲಿ ಕೂಡ ರಾಹುಲ್ ಜೊತೆ ಮಾತನಾಡಲು ಮುಂದೆ ಬಂದರು. ಆಗ ಸ್ಟೊಯಿನಿಸ್ ಬೇಕೆಂದೇ ಕೊಹ್ಲಿ ಅವರ ಎದೆಗೆ ಡಿಕ್ಕಿ ಹೊಡೆದಿದ್ದಾರೆ. ಆದರೆ, ಕೊಹ್ಲಿ ಒಂದಿಂಚು ಅಲ್ಲಾಡದೆ ಸ್ಟೊಯಿನಿಸ್ ಅವರನ್ನು ಕೋಪದಲ್ಲಿ ದಿಟ್ಟಿಸಿ ನೋಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
Rohit Sharma: ಪಂದ್ಯ ಮುಗಿದ ಬಳಿಕ ತಂಡದ ಸೋಲಿಗೆ ನಾಯಕ ರೋಹಿತ್ ಶರ್ಮಾ ನೀಡಿದ ಕಾರಣವೇನು ಗೊತ್ತೇ?
IPL 2023: ರಾಜಸ್ಥಾನ್ ರಾಯಲ್ಸ್​ ಕ್ಯಾಂಪ್​ನಲ್ಲಿ ಕಾಣಿಸಿಕೊಂಡ ಹೊಸ ಆಟಗಾರ
Suryakumar Yadav: ಡಕ್ ಗೋಲ್ಡನ್ ಡಕ್…ಅನಗತ್ಯ ದಾಖಲೆ ಬರೆದ ಸೂರ್ಯ..!
India vs Australia: ಟೀಮ್ ಇಂಡಿಯಾಗೆ ಸೋಲುಣಿಸಿ ನಂಬರ್ 1 ಸ್ಥಾನಕ್ಕೇರಿದ ಆಸ್ಟ್ರೇಲಿಯಾ

 

Rohit Sharma: 2 ಫೋರ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

ಮೂರನೇ ಏಕದಿನ ಹೇಗಿತ್ತು?:

ಮೂರನೇ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡ ಆಸ್ಟ್ರೇಲಿಯಾ ಪರ ಆರಂಭಿಕರು 68 ರನ್​ನ ಜೊತೆಯಾಟ ಬಿಟ್ಟರೆ ಮತ್ತಾವ ಜೋಡಿ ಬೃಹತ್ ರನ್​ ಕಲೆ ಹಾಕಲಿಲ್ಲ. ಎಲ್ಲ ಆಟಗಾರರು 20 ಮತ್ತು 30 ರನ್​ ಗಳಿಕೆಗೆ ವಿಕೆಟ್​ ಒಪ್ಪಿಸಿದರು. ಟ್ರಾವಿಸ್ ಹೆಡ್ 33 ರನ್​ ಗಳಿಸಿದರೆ ಸ್ಟೀವ್​ ಸ್ಮಿತ್​ ಶೂನ್ಯಕ್ಕೆ ವಿಕೆಟ್​ ನೀಡಿದರು. 47 ರನ್​ ಗಳಿಸಿದ್ದ ಮಿಚೆಲ್ ಮಾರ್ಷ್ 3 ರನ್​ನಿಂದ ಅರ್ಧಶತಕದಿಂದ ವಂಚಿತರಾದರು. ವಾರ್ನರ್ ಆಟ 23ಕ್ಕೆ ಅಂತ್ಯವಾಯಿತು. ಲಾಬುಶೇನ್ 28, ಅಲೆಕ್ಸ್​ ಕ್ಯಾರಿ 38 ರನ್​ ಗಳಿಸಿದರು. ಅಂತಿಮವಾಗಿ ಆಸೀಸ್ 49 ಓವರ್​ಗಳಲ್ಲಿ 269 ರನ್​ಗೆ ಆಲೌಟ್ ಆಯಿತು. ಭಾರತದ ಪರ ಹಾರ್ದಿಕ್​ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್​ ಪಡೆದರು.

ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ನಾಯಕ ರೋಹಿತ್​ ಶರ್ಮಾ (30) ಮತ್ತು ಶುಭ್​ಮನ್ ಗಿಲ್​ (37) ಮೊದಲ ವಿಕೆಟ್​ಗೆ 65 ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು. ನಂತರಲ್ಲಿ ವಿರಾಟ್ ಕೊಹ್ಲಿ (54) ಮತ್ತು ಕೆಎಲ್ ರಾಹುಲ್​ (32), ಹಾರ್ದಿಕ್​ ಪಾಂಡ್ಯ (40) ಅಲ್ಪ ಮೊತ್ತದ ಕಾಣಿಕೆ ನೀಡಿದರೂ ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ. ಟೀಮ್ ಇಂಡಿಯಾ 49.1 ಓವರ್​​ಗಳಲ್ಲಿ 248 ರನ್​ಗಳಿಗೆ ಆಲೌಟ್ ಆಗಿ ಸೋಲುಂಡಿತು. ಆಸ್ಟ್ರೇಲಿಯಾ ಪರ ಆ್ಯಡಂ ಝಂಪಾ 4 ವಿಕೆಟ್ ಪಡೆದರು. 21 ರನ್​ಗಳ ಗೆಲುವಿನೊಂದಿಗೆ ಕಾಂಗರೂ ಪಡೆ ಸರಣಿ ವಶಪಡಿಸಿಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ