Virat Kohli: ‘10 ವರ್ಷಗಳ ಪಯಣ’..: ಅಭಿಮಾನಿಗಳ ಎದೆ ನಡುಗಿಸಿದ ಕಿಂಗ್ ಕೊಹ್ಲಿಯ ವೈಟ್ ಬ್ಯಾಕ್ ಗ್ರೌಂಡ್ ಪೋಸ್ಟ್

|

Updated on: Nov 20, 2024 | 4:09 PM

Virat Kohli: ವಿರಾಟ್ ಕೊಹ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕ್ರಿಕೆಟ್ ನಿವೃತ್ತಿಯ ಊಹಾಪೋಹಗಳನ್ನು ಹುಟ್ಟುಹಾಕಿದೆ. ವಾಸ್ತವವಾಗಿ ಕೊಹ್ಲಿ, ಈ ಹಿಂದೆ ತಮ್ಮ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳುವ ಸಮಯದಲ್ಲಿ ಇದೇ ರಿತಿಯ ವೈಟ್ ಬ್ಯಾಕ್ ಗ್ರೌಂಡ್ ಇರುವ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ತಾನು ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದರು. ಕೊಹ್ಲಿಯ ಈ ತತ್​ಕ್ಷಣದ ನಿರ್ಧಾರದ ಪೋಸ್ಟ್​ ಅಭಿಮಾನಿಗಳನ್ನು ಆಘಾತಕ್ಕೆ ತಳ್ಳಿತ್ತು.

Virat Kohli: ‘10 ವರ್ಷಗಳ ಪಯಣ’..: ಅಭಿಮಾನಿಗಳ ಎದೆ ನಡುಗಿಸಿದ ಕಿಂಗ್ ಕೊಹ್ಲಿಯ ವೈಟ್ ಬ್ಯಾಕ್ ಗ್ರೌಂಡ್ ಪೋಸ್ಟ್
ವಿರಾಟ್ ಕೊಹ್ಲಿ
Follow us on

ತನ್ನ ಆಟದ ಮೂಲಕವೇ ಇಡೀ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿರುವ ವಿರಾಟ್ ಕೊಹ್ಲಿಗೆ ಸೋಶಿಯಲ್ ಮೀಡಿಯಾದಲ್ಲೂ ಅಸಂಖ್ಯಾತ ಫಾಲೋವರ್ಸ್​ಗಳಿದ್ದಾರೆ. ಹೀಗಾಗಿ ಕೊಹ್ಲಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಪೋಸ್ಟ್ ಹಂಚಿಕೊಂಡರು ಅದು ಕ್ಷಣ ಮಾತ್ರದಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ಹಾಗೆಯೇ ದಾಖಲೆಯನ್ನು ನಿರ್ಮಿಸುತ್ತದೆ. ಹೀಗಾಗಿಯೇ ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಳ್ಳಲು 15 ಕೋಟಿ ಗೂ ಹೆಚ್ಚಿನ ಮೊತ್ತವನ್ನು ಶುಲ್ಕವಾಗಿ ಪಡೆಯುತ್ತಾರೆ ಎಂಬ ವರದಿ ಇದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುರುವ ಪೋಸ್ಟ್​ವೊಂದು ಅಭಿಮಾನಿಗಳ ಎದೆಯನ್ನು ಕ್ಷಣ ಮಾತ್ರದಲ್ಲಿ ನಡುಗಿಸಿ ಬಿಟ್ಟಿದೆ.

ವಿರಾಟ್ ಕೊಹ್ಲಿ ಪೋಸ್ಟ್

ಪ್ರಸ್ತುತ ವಿರಾಟ್ ಕೊಹ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ವಿರಾಟ್ ಕೊಹ್ಲಿಗೆ ಕಳೆದ ಕೆಲವು ತಿಂಗಳುಗಳು ಉತ್ತಮವಾಗಿಲ್ಲ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಈ ಮಾದರಿಗೆ ವಿದಾಯ ಹೇಳಿದ್ದ ಕೊಹ್ಲಿ, ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲಿ ಆಟ ಮುಂದುವರೆಸುವುದಾಗಿ ಹೇಳಿದ್ದರು. ಆದರೆ ಕೊಹ್ಲಿ ಅಂದುಕೊಂಡಂತೆ ಈ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮುಗಿದ ಬಳಿಕ ಕೊಹ್ಲಿ, ಟೆಸ್ಟ್ ಮಾದರಿಗೆ ವಿದಾಯ ಹೇಳಬಹುದು ಎಂಬ ವದಂತಿ ಎದ್ದಿದೆ. ಇದರ ನಡುವೆ ಕೊಹ್ಲಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ವೈಟ್ ಬ್ಯಾಕ್ ಗ್ರೌಂಡ್ ಇರುವ ಪೋಸ್ಟ್​ವೊಂದನ್ನು ಹಂಚಿಕೊಂಡು ಅಭಿಮಾನಿಗಳಲ್ಲಿ ಆತಂಕ ಮುಡಿಸಿದ್ದಾರೆ. ಆದರೆ ಕೊಹ್ಲಿ ಮಾಡಿರುವ ಪೋಸ್ಟ್​ ಅನ್ನು ಪೂರ್ಣ ಓದಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

10 ವರ್ಷಗಳ ಪಯಣ

ವಾಸ್ತವವಾಗಿ ವಿರಾಟ್ ಕೊಹ್ಲಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಸಹ ಒಡೆತನದ ‘ವ್ರಾಂಗ್‌’ ಹೆಸರಿನ ಇ-ಕಾಮರ್ಸ್ ಫ್ಯಾಷನ್‌ ಸಂಸ್ಥೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸಂಸ್ಥೆ ಶುರುವಾಗಿ 10 ವರ್ಷಗಳಾಗಿದ್ದು, ಈ ಹತ್ತು ವರ್ಷಗಳ ಪಯಣದ ಬಗ್ಗೆ ಕೊಹ್ಲಿ ಬರೆದುಕೊಂಡಿದ್ದಾರೆ. ಆದರೆ ಆರಂಭದಲ್ಲಿ ಕೊಹ್ಲಿಯ ಈ ಪೋಸ್ಟ್ ನೋಡಿದ ಅಭಿಮಾನಿಗಳು, ಈ ಪೋಸ್ಟ್ ಅನ್ನು ಪೂರ್ಣವಾಗಿ ಓದದೆ, ಕೊಹ್ಲಿ ಕ್ರಿಕೆಟ್​ಗೆ ವಿದಾಯ ಹೇಳಿರಬಹುದೆಂದು ಬಾವಿಸಿ, ಕೊಹ್ಲಿ ಮಾಡಿರುವ ಪೋಸ್ಟ್​ಗೆ ತರೆಹವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ.

ವೈಟ್ ಬ್ಯಾಕ್ ಗ್ರೌಂಡ್ ಪೋಸ್ಟ್

ವಾಸ್ತವವಾಗಿ ಅಭಿಮಾನಿಗಳು ಆತಂಕ ಬಿಳಲು ಕಾರಣವೂ ಇದ್ದು, ಈ ಹಿಂದೆ ಕೊಹ್ಲಿ ತಮ್ಮ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳುವು ಸಮಯದಲ್ಲಿ ಇದೇ ರಿತಿಯ ವೈಟ್ ಬ್ಯಾಕ್ ಗ್ರೌಂಡ್ ಇರುವ ಪೋಸ್ಟ್​ವೊಂದನ್ನು ಹಂಚಿಕೊಳ್ಳುವ ಮೂಲಕ ತಾನು ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದರು. ಕೊಹ್ಲಿಯ ಈ ತತ್​ಕ್ಷಣದ ನಿರ್ಧಾರದ ಪೋಸ್ಟ್​ ಅಭಿಮಾನಿಗಳನ್ನು ಆಘಾತಕ್ಕೆ ತಳ್ಳಿತ್ತು. ಇದೀಗ ಇದೇ ರೀತಿಯ ಪೋಸ್ಟ್​ ಮಾಡಿರುವ ಕೊಹ್ಲಿ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಕೊಹ್ಲಿ ಮಾಡಿರುವ ಪೂರ್ಣ ಪೋಸ್ಟ್ ಓದಿದ ಬಳಿಕ ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Wed, 20 November 24