ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ (WPL 2023) ಅದ್ಧೂರಿ ಆರಂಭ ಸಿಕ್ಕಿದೆ. ಅಭಿಮಾನಿಗಳಿಗೆ ಮೊದಲ ಪಂದ್ಯವೇ ಅನಿರೀಕ್ಷಿತ ರೊಚಕತೆ ನೀಡಿದೆ. ಕಳೆದ 15 ವರ್ಷಗಳ ಹಿಂದೆ ಐಪಿಎಲ್ಗೆ (IPL) ಯಾವ ರೀತಿಯ ಆರಂಭ ಸಿಕ್ಕಿತ್ತೋ, ಅದೇ ರೀತಿಯ ಆರಂಭ ಮಹಿಳಾ ಪ್ರೀಮಿಯರ್ ಲೀಗ್ಗೂ ಸಿಕ್ಕಿದೆ. ಅದರಲ್ಲೂ ಈ ಎರಡೂ ಲೀಗ್ಗಳು ಬೇರೆ ಬೇರೆಯಾಗಿದ್ದರೂ, ಎರಡೂ ಲೀಗ್ಗಳ ಆರಂಭಿಕ ಪಂದ್ಯದಲ್ಲಿ ಒಂದೇ ರೀತಿಯ ಫಲಿತಾಂಶ ಹೊರಬಿದ್ದಿದೆ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ನಡೆದ ಡಬ್ಲ್ಯುಪಿಲ್ನ ಮೊದಲ ಪಂದ್ಯವು ಐಪಿಎಲ್ ಇತಿಹಾಸದ ಮೊದಲ ಪಂದ್ಯವನ್ನು ನೆನಪಿಸಿತು. ಅಂದರೆ 2008 ರಲ್ಲಿ ಕೆಕೆಆರ್ ಮತ್ತು ಆರ್ಸಿಬಿ (KKR vs RCB) ನಡುವೆ ನಡೆದ ಪಂದ್ಯದಂತೆಯೇ ಈ ಪಂದ್ಯವೂ ಮುಗಿದು ಹೋಗಿದೆ. ಸರಳವಾಗಿ ಹೇಳುವುದಾದರೆ, ಐಪಿಎಲ್ ಶೈಲಿಯಲ್ಲಿ ಡಬ್ಲ್ಯುಪಿಲ್ ಪ್ರಾರಂಭವಾಗಿದೆ.
ಮಹಿಳಾ ಪ್ರೀಮಿಯರ್ ಲೀಗ್ನ ಮೊದಲ ಸೀಸನ್ನ ಮೊದಲ ಪಂದ್ಯ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಮುಂಬೈನ ಈ ಗೆಲುವು ಮತ್ತು ಗುಜರಾತ್ ಜೈಂಟ್ಸ್ ತಂಡದ ಸೋಲು 2008 ರಲ್ಲಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಮೊದಲ ಪಂದ್ಯದದ ಕ್ಷಣಗಳು ಜನರ ಮನಸ್ಸಲ್ಲಿ ಹಾದುಹೋಗುವಂತೆ ಮಾಡಿದೆ.
ವಾಸ್ತವವಾಗಿ ಐಪಿಎಲ್ನ ಮೊದಲ ಪಂದ್ಯಕ್ಕೂ ಡಬ್ಲ್ಯುಪಿಎಲ್ನ ಮೊದಲ ಪಂದ್ಯಕ್ಕೂ 15 ವರ್ಷಗಳ ಅಂತರವಿದೆ. ಆದರೂ, ಈ ಎರಡು ಪಂದ್ಯಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಹಾಗಾದರೆ ಆ ಎರಡು ಪಂದ್ಯಗಳ ನಡುವಿನ 5 ಸಾಮ್ಯತೆಗಳು ಯಾವು ಎಂಬುದನ್ನು ನೋಡೋಣ.
Published On - 1:30 pm, Sun, 5 March 23