ಡಬ್ಲ್ಯೂಪಿಎಲ್ 2027: 5 ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿ

2027 ರ ಡಬ್ಲ್ಯೂಪಿಎಲ್ ಮಿನಿ ಹರಾಜುಗೂ ಮುನ್ನ, ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರ್ತಿಯರ ಅಂತಿಮ ಪಟ್ಟಿ ಬಹಿರಂಗಪಡಿಸಿವೆ. ಹಲವು ಪ್ರಮುಖ ಆಟಗಾರ್ತಿಯರನ್ನು ಕೈಬಿಡಲಾಗಿದೆ, ಇದು ಆಶ್ಚರ್ಯ ಮೂಡಿಸಿದೆ. ಯಾವ ತಂಡ ಎಷ್ಟು ಆಟಗಾರ್ತಿಯರನ್ನು ಉಳಿಸಿಕೊಂಡಿದೆ ಮತ್ತು ಬಿಡುಗಡೆ ಮಾಡಿದೆ ಎಂಬುದರ ಸಂಪೂರ್ಣ ವಿವರಗಳನ್ನು ಇಲ್ಲಿ ಪಡೆಯಿರಿ.

ಡಬ್ಲ್ಯೂಪಿಎಲ್ 2027: 5 ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರ್ತಿಯರ ಪಟ್ಟಿ
ಡಬ್ಲ್ಯೂಪಿಎಲ್ 2027

Updated on: Sep 28, 2026 | 6:41 PM

2027 ರ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿಗೂ ಮುನ್ನ ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಲ್ಲಿ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಿವೆ. ಅಕ್ಟೋಬರ್ 28 ರಂದು ಡಬ್ಲ್ಯೂಪಿಎಲ್ ಮಿನಿ ಹರಾಜು ನಡೆಯಲಿದ್ದು, ಹೀಗಾಗಿ ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಬಿಸಿಸಿಐಗೆ ತಮ್ಮ ಅಂತಿಮ ಪಟ್ಟಿಯನ್ನು ನೀಡಬೇಕಿತ್ತು. ಅದರಂತೆ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಅಂತಿಮ ತಂಡಗಳನ್ನು ಬಿಸಿಸಿಐಗೆ ವರದಿ ಮಾಡಿವೆ. ಎಲ್ಲಾ ಫ್ರಾಂಚೈಸಿಗಳು ಹಲವಾರು ಪ್ರಮುಖ ಮತ್ತು ಪ್ರಮುಖ ಆಟಗಾರ್ತಿಯರನ್ನು ಕೈಬಿಟ್ಟು ಅಚ್ಚರಿಯನ್ನುಂಟು ಮಾಡಿವೆ. ಹಾಗಿದ್ದರೆ, ಯಾವ ತಂಡದಿಂದ ಎಷ್ಟು ಆಟಗಾರ್ತಿರು ಹೊರಬಿದ್ದರು ಮತ್ತು ಎಷ್ಟು ಆಟಗಾರ್ತಿಯರು ಉಳಿದುಕೊಂಡರು ಎಂಬುದರ ಪೂರ್ಣ ವಿವರ ಇಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ನಾಲ್ವರನ್ನು ಬಿಡುಗಡೆ ಮಾಡಿದೆ

ಬಿಡುಗಡೆ ಮಾಡಿದ ಆಟಗಾರ್ತಿಯರು: ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಡಿ ಹೇಮಲತಾ, ಗೌತಮಿ ನಾಯಕ್

ಉಳಿಸಿಕೊಂಡಿರುವ ಆಟಗಾರ್ತಿಯರು: ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರತ್ಯೋಶಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕ ಪಾಟೀಲ್, ಸ್ಮೃತಿ ಮಂಧಾನ.

ಯುಪಿ ವಾರಿಯರ್ಸ್: 9 ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ

ಬಿಡುಗಡೆ ಮಾಡಿದ ಆಟಗಾರ್ತಿಯರು: ಆಮಿ ಜೋನ್ಸ್, ಚಾರ್ಲಿ ನಾಟ್, ಕ್ಲೋಯ್ ಟ್ರಯಾನ್, ಡಿಯಾಂಡ್ರಾ ಡಾಟಿನ್, ಆಶಾ ಸೋಭ್ನ, ಜಿ ತ್ರಿಶಾ, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ಸುಮನ್ ಮೀನಾ.

ಉಳಿಸಿಕೊಂಡಿರುವ ಆಟಗಾರ್ತಿಯರು: ಮೆಗ್ ಲ್ಯಾನಿಂಗ್, ಫೋಬೆ ಲಿಚ್‌ಫೀಲ್ಡ್, ಸೋಫಿ ಎಕ್ಲೆಸ್ಟೋನ್, ತಾರಾ ನಾರ್ರಿಸ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಪ್ರತೀಕ್ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್.

ಮುಂಬೈ ಇಂಡಿಯನ್ಸ್: 6 ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ

ಬಿಡುಗಡೆ ಮಾಡಿದ ಆಟಗಾರ್ತಿಯರು: ಮಿಲಿ ಇಲ್ಲಿಂಗ್‌ವರ್ತ್, ಜಿ ಕಮಲಿನಿ, ಕ್ರಾಂತಿ ರೆಡ್ಡಿ, ಪೂನಂ ಖೇಮ್ನಾರ್, ಸೈಕಾ ಇಶಾಕ್, ತ್ರಿವೇಣಿ ವಶಿಷ್ಟ್

ಉಳಿಸಿಕೊಂಡಿರುವ ಆಟಗಾರ್ತಿಯರು: ಮೆಲ್ಲಿ ಕೆರ್, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ನಿಕೋಲಾ ಕ್ಯಾರಿ, ಅಮನ್ಜೋತ್ ಕೌರ್, ಹರ್ಮನ್ಪ್ರೀತ್ ಕೌರ್, ರಹಿಲಾ ಫಿರ್ದೌಸ್, ಎಸ್ ಸಜ್ನಾ, ಸಂಸ್ಕೃತಿ ಗುಪ್ತಾ, ಶಬ್ನಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ.

ಗುಜರಾತ್ ಜೈಂಟ್ಸ್: ನಾಲ್ವರನ್ನು ಬಿಡುಗಡೆ ಮಾಡಿದೆ

ಬಿಡುಗಡೆ ಮಾಡಿದ ಆಟಗಾರ್ತಿಯರು: ಡ್ಯಾನಿ ವ್ಯಾಟ್-ಹಾಡ್ಜ್, ಆಯುಷಿ ಸೋನಿ, ಟಿಟಾಸ್ ಸಾಧು, ಶಿವಾನಿ ಸಿಂಗ್

ಉಳಿಸಿಕೊಂಡಿರುವ ಆಟಗಾರ್ತಿಯರು: ಆಶ್ಲೀಗ್ ಗಾರ್ಡನರ್, ಬೆತ್ ಮೂನಿ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಭಾರ್ತಿ ಫುಲ್ಮಾಲಿ, ಹ್ಯಾಪಿ ಕುಮಾರಿ, ಜಿಂತಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವಿ ಗೌತಮ್, ರಾಜೇಶ್ವರಿ ಗಾಯಕ್‌ವಾಡ್, ರೇಣುಕಾ ಸಿಂಗ್, ತನುಜಾ ಕನ್ವರ್, ಯಸ್ತಿಕಾ ಭಾಟಿಯಾ.

ದೆಹಲಿ ಕ್ಯಾಪಿಟಲ್ಸ್: 6 ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ

ಬಿಡುಗಡೆಯಾದ ಆಟಗಾರ್ತಿಯರು: ಅಲಾನಾ ಕಿಂಗ್, ಲಿಜೆಲ್ಲೆ ಲೀ, ಸ್ನೇಹ ರಾಣಾ, ತಾನಿಯಾ ಭಾಟಿಯಾ, ಪ್ರಗತಿ ಸಿಂಗ್, ಎಡ್ಲಾ ಶ್ರುಜಾನಾ

ಉಳಿಸಿಕೊಂಡಿರುವ ಆಟಗಾರ್ತಿಯರು: ಅನ್ನಾಬೆಲ್ ಸದರ್‌ಲ್ಯಾಂಡ್, ಚಿನೆಲ್ಲೆ ಹೆನ್ರಿ, ಲಾರಾ ವೊಲ್ವಾರ್ಡ್, ಲೂಸಿ ಹ್ಯಾಮಿಲ್ಟನ್, ಮರಿಜಾನ್ನೆ ಕಪ್, ದಿಯಾ ಯಾದವ್, ಜೆಮಿಮಾ ರಾಡ್ರಿಗಸ್, ಮಮತಾ, ಮಿನ್ನು ಮಣಿ, ಎನ್ ಶ್ರೀ ಚರಣಿ, ನಂದನಿ ಶರ್ಮಾ, ನಿಕಿ ಪ್ರಸಾದ್, ಶಫಾಲಿ ವರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Mon, 28 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us