Year Ender 2023: ಈ ವರ್ಷ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್​ಗಳು ಇವರೇ ನೋಡಿ

Virat Kohli: 2023ರಲ್ಲಿ ಭಾರತ ತಂಡದ ಪರವಾಗಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಈ ವರ್ಷ 34 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇವರ ಖಾತೆಯಿಂದ ಒಟ್ಟು 8 ಶತಕಗಳು ಬಂದಿವೆ.

Year Ender 2023: ಈ ವರ್ಷ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್​ಗಳು ಇವರೇ ನೋಡಿ
Gill Kohli and Rohit

Updated on: Dec 28, 2023 | 8:01 AM

2023 ವರ್ಷ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಹೊಸ ವರ್ಷದ ಆರಂಭಕ್ಕೂ ಮುನ್ನ ಈ ವರ್ಷ ಭಾರತೀಯ ಕ್ರಿಕೆಟ್ ಲೋಕದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರು ಯಾರು ಎಂಬುದನ್ನು ನೋಡೋಣ. ಈ ವರ್ಷ ಒಟ್ಟು 9 ಬ್ಯಾಟ್ಸ್‌ಮನ್‌ಗಳು ಟೀಮ್ ಇಂಡಿಯಾ ಪರ ಕ್ರಿಕೆಟ್‌ನ ವಿವಿಧ ಸ್ವರೂಪಗಳಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಕೆಲವರು ಶತಕದ ಅಂಚಿನಲ್ಲಿ ಎಡವಿದ್ದಾರೆ. 2023ನೇ ವರ್ಷ ವಿರಾಟ್ ಕೊಹ್ಲಿಗೆ (Virat Kohli) ಅಮೋಘ ವಾಗುತ್ತು. ಇವರು ಅತಿ ಹೆಚ್ಚು ಶತಕಗಳನ್ನು ಹೊಂದಿದ್ದಾರೆ. ಈ ಲಿಸ್ಟ್‌ನಲ್ಲಿ ಯಾರೆಲ್ಲ ಇದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

  • 2023ರಲ್ಲಿ ಭಾರತ ತಂಡದ ಪರವಾಗಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಈ ವರ್ಷ 34 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಇವರ ಖಾತೆಯಿಂದ ಒಟ್ಟು 8 ಶತಕಗಳು ಬಂದಿವೆ.
  • ಈ ಲಿಸ್ಟ್​ನಲ್ಲಿ ಎರಡನೇಯವರಾಗಿ ಶುಭ್​ಮನ್ ಗಿಲ್ ಇದ್ದಾರೆ. ಈ ವರ್ಷ ಈ ಯುವ ಬ್ಯಾಟ್ಸ್‌ಮನ್ ಭಾರತ ತಂಡದ ಪರವಾಗಿ 7 ಶತಕಗಳನ್ನು ಬಾರಿಸಿದ್ದಾರೆ. ಅವರು ಒಟ್ಟು 47 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.
  • ಈ ರೇಸ್‌ನಲ್ಲಿ ರೋಹಿತ್ ಶರ್ಮಾ ಕೂಡ ಹಿಂದೆ ಸರಿಯಲಿಲ್ಲ. ಇವರು 2023 ರಲ್ಲಿ 34 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು 4 ಶತಕಗಳನ್ನು ಗಳಿಸಿದರು.
  • ಶ್ರೇಯಸ್ ಅಯ್ಯರ್​ಗೆ ಕೂಡ ಈ ವರ್ಷ ಅದ್ಭುತವಾಗಿತ್ತು. ಅಮೋಘ ಫಾರ್ಮ್​ನಲ್ಲಿದ್ದ ಇವರು 25 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು 3 ಶತಕಗಳನ್ನು ಗಳಿಸಿದ್ದಾರೆ.
  • ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಈ ವರ್ಷ ತಲಾ 2 ಶತಕ ಸಿಡಿಸಿದ್ದಾರೆ. ಈ ವರ್ಷ ಯಶಸ್ವಿ 17, ಕೆಎಲ್ ರಾಹುಲ್ 29 ಮತ್ತು ಸೂರ್ಯಕುಮಾರ್ ಯಾದವ್ 40 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು.
  • ಇನ್ನು ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ತಲಾ ಒಂದು ಶತಕ ಬಾರಿದ್ದಾರೆ. ಈ ವರ್ಷ ರುತುರಾಜ್ 15 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ, ಸಂಜು ಸ್ಯಾಮ್ಸನ್ 13 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Follow Us