ಚಹಾಲ್-ಧನಶ್ರೀ ದಾಂಪತ್ಯದಲ್ಲಿ ಬಿರುಕು; ಪರಸ್ಪರ ಅನ್​ಫಾಲೋ ಮಾಡಿದ ದಂಪತಿಗಳು

|

Updated on: Jan 04, 2025 | 3:28 PM

Chahal and Dhanashree Divorce Rumors: ಯುಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಹಬ್ಬಿವೆ. ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ ಮತ್ತು ಚಹಾಲ್ ಧನಶ್ರೀಯವರ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ನಿಕಟ ಮೂಲಗಳ ಪ್ರಕಾರ, ವಿಚ್ಛೇದನದ ಸಾಧ್ಯತೆ ಇದೆ. ಆದರೆ ದಂಪತಿಗಳು ಇನ್ನೂ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ.

ಚಹಾಲ್-ಧನಶ್ರೀ ದಾಂಪತ್ಯದಲ್ಲಿ ಬಿರುಕು; ಪರಸ್ಪರ ಅನ್​ಫಾಲೋ ಮಾಡಿದ ದಂಪತಿಗಳು
ಯುಜ್ವೇಂದ್ರ ಚಹಾಲ್- ಧನಶ್ರೀ ವರ್ಮಾ
Follow us on

ಟೀಂ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಅಲ್ಲದೆ ಈ ಇಬ್ಬರೂ ಇಷ್ಟರಲ್ಲೇ ವಿಚ್ಛೇದನವನ್ನು ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಕೂಡ ಎಲ್ಲೆಡೆ ಹಬ್ಬಿದೆ. ಇದೀಗ ಈ ಊಹಾಪೋಹಗಳಿಗೆ ಪುಷ್ಠಿ ನೀಡುವ ಘಟನೆ ನಡೆದಿದ್ದು, ಚಹಾಲ್ ಮತ್ತು ಧನಶ್ರೀ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್​​ಫಾಲೋ ಮಾಡಿದ್ದಾರೆ.

ಪರಸ್ಪರ ಅನ್​ಫಾಲೋ

ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ನಂತರ ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಚಹಾಲ್ ಡಿಲೀಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಈ ಇಬ್ಬರೂ ಇಷ್ಟರಲ್ಲೇ ಬೇರಾಗಲಿದ್ದಾರೆ ಎಂಬುದು ಖಾತ್ರಿಯಾದ್ದಂತ್ತಾಗಿದೆ. ಆದಾಗ್ಯೂ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಚಹಾಲ್ ಆಗಲಿ ಅಥವಾ ಧನಶ್ರೀ ಆಗಲಿ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

ಎನ್‌ಡಿಟಿವಿಯ ವರದಿಯ ಪ್ರಕಾರ, ವಿಚ್ಛೇದನದ ವದಂತಿಗಳು ನಿಜವೆಂದು ದಂಪತಿಗಳ ನಿಕಟ ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ. ಅಲ್ಲದೆ ಈ ಇಬ್ಬರು ಪರಸ್ಪರ ಬೇರೆ ಬೇರೆಯಾಗುವುದಕ್ಕೆ ನಿಖರವಾದ ಕಾರಣಗಳು ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಆದರೆ ದಂಪತಿಗಳು ಪ್ರತ್ಯೇಕ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಈ ಮೊದಲು ಕೂಡ ಚಹಾಲ್ ಮತ್ತು ಧನಶ್ರೀ ವರ್ಮಾ ವಿಚ್ಛೇದನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಆ ಸಮಯದಲ್ಲಿ, ಯುಜುವೇಂದ್ರ ಅವರು ವಿಚ್ಛೇದನದ ವದಂತಿಗಳನ್ನು ತಳ್ಳಿಹಾಕುವ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ವದಂತಿಗಳನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದ್ದರು.

ಈ ವರ್ಷದ ಮೊದಲ ವಿಚ್ಛೇದನ

ಒಂದು ವೇಳೆ ಈಗ ಹರಿದಾಡುತ್ತಿರುವ ಸುದ್ದಿ ನಿಜವಾದರೆ ಈ ವರ್ಷ ವಿಚ್ಛೇದನ ಪಡೆದ ಮೊದಲ ಸ್ಟಾರ್ ಜೋಡಿ ಇದಾಗಲಿದೆ. ಕಳೆದ ವರ್ಷ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ದಂಪತಿಗಳು ವಿಚ್ಛೇದನ ಪಡೆದಿದ್ದರು. ಮಾಜಿ ಕ್ರಿಕೆಟಿಗ ಶಿಖರ್ ಧವನ್ ಕೂಡ ತಮ್ಮ ಮಡದಿಯಿಂದ ಬೇರೆಯಾಗಿದ್ದರು. ಇವರಲ್ಲದೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ಕೂಡ ವಿಚ್ಛೇದನ ಪಡೆದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ