Euro Cup 2024: ಯುರೋ ಕಪ್​ ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿ

|

Updated on: Jul 07, 2024 | 8:27 AM

Euro Cup 2024 Semi final: ಜರ್ಮನಿಯಲ್ಲಿ ನಡೆಯುತ್ತಿರುವ ಯುರೋ ಕಪ್​ ಟೂರ್ನಿಯು ಮುಕ್ತಾಯದ ಹಂತಕ್ಕೆ ತಲುಪಿದೆ. ಈಗಾಗಲೇ ಕ್ವಾರ್ಟರ್ ಫೈನಲ್​ವರೆಗಿನ ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಫ್ರಾನ್ಸ್, ನೆದರ್​ಲೆಂಡ್ಸ್​, ಇಂಗ್ಲೆಂಡ್ ಮತ್ತು ಸ್ಪೇನ್ ತಂಡಗಳು ನಾಕೌಟ್ ಹಂತಕ್ಕೇರಿದೆ. ಅದರಂತೆ ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ.

Euro Cup 2024: ಯುರೋ ಕಪ್​ ಸೆಮಿಫೈನಲ್​ಗೆ 4 ತಂಡಗಳು ಎಂಟ್ರಿ
Euro Cup 2024
Follow us on

ಪ್ರತಿಷ್ಠಿತ ಯುರೋ ಕಪ್ (Euro Cup 2024) ಫುಟ್​ಬಾಲ್ ಟೂರ್ನಿಯು ಸೆಮಿಫೈನಲ್ ಹಂತಕ್ಕೆ ಬಂದು ನಿಂತಿದೆ. 24 ತಂಡಗಳೊಂದಿಗೆ ಶುರುವಾದ ಟೂರ್ನಿಯಲ್ಲಿ ಇದೀಗ ಉಳಿದಿರುವುದು ಕೇವಲ 4 ತಂಡಗಳು ಮಾತ್ರ. ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಗೆದ್ದು ಫ್ರಾನ್ಸ್, ಇಂಗ್ಲೆಂಡ್, ನೆದರ್​ಲೆಂಡ್ಸ್ ಮತ್ತು ಸ್ಪೇನ್ ತಂಡಗಳು ನಾಕೌಟ್ ಹಂತಕ್ಕೇರಿದೆ.

  • ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ 2-1 ಅಂತರದಿಂದ ಗೆದ್ದು ಸ್ಪೇನ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿತ್ತು.
  • ಎರಡನೇ ಕ್ವಾರ್ಟರ್ ಫೈನಲ್​ನಲ್ಲಿ ಪೋರ್ಚುಗಲ್ ವಿರುದ್ಧ ಪೆನಾಲ್ಟಿ ಶೂಟೌಟ್​ನಲ್ಲಿ 5-3 ಅಂತರದಿಂದ ಗೆಲ್ಲುವ ಮೂಲಕ ಫ್ರಾನ್ಸ್ ಸೆಮೀಸ್​ಗೆ ಎಂಟ್ರಿ ಕೊಟ್ಟಿದೆ.
  • ಮೂರನೇ ಕ್ವಾರ್ಟರ್​ ಫೈನಲ್​ನಲ್ಲಿ ಇಂಗ್ಲೆಂಡ್ ಮತ್ತು ಸ್ವಿಟ್ಜರ್ಲೆಂಡ್ 1-1 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯ ಪೆನಾಲ್ಟಿ ಶೂಟೌಟ್​ನತ್ತ ಸಾಗಿತು. ಪೆನಾಲ್ಟಿ ಶೂಟೌಟ್​ನಲ್ಲಿ ಸ್ವಿಟ್ಜರ್ಲೆಂಡ್ ತಂಡವನ್ನು 5-3 ಅಂತರದಿಂದ ಮಣಿಸಿ ಇಂಗ್ಲೆಂಡ್ ಸೆಮಿಫೈನಲ್​ಗೆ ಪ್ರವೇಶಿಸಿದೆ.
  • ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟರ್ಕಿ ತಂಡವನ್ನು 2-1 ಅಂತರದಿಂದ ಮಣಿಸುವ ಮೂಲಕ ನೆದರ್​ಲೆಂಡ್ಸ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದೆ.

ಅದರಂತೆ ಈ ಬಾರಿಯ ಯುರೋ ಕಪ್ ಸೆಮಿಫೈನಲ್​ ಪಂದ್ಯಗಳಲ್ಲಿ ಫ್ರಾನ್ಸ್. ಸ್ಪೇನ್, ನೆದರ್​ಲೆಂಡ್ಸ್ ಮತ್ತು ಇಂಗ್ಲೆಂಡ್ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ.

  • ಜುಲೈ 10 (ಮೊದಲ ಸೆಮಿಫೈನಲ್): ಫ್ರಾನ್ಸ್ vs ಸ್ಪೇನ್
  • ಜುಲೈ 11 (ಎರಡನೇ ಸೆಮಿಫೈನಲ್): ನೆದರ್​ಲೆಂಡ್ಸ್ vs ಇಂಗ್ಲೆಂಡ್

ಈ ಎರಡು ಪಂದ್ಯಗಳು ಭಾರತೀಯ ಕಾಲಮಾನ ಮಧ್ಯರಾತ್ರಿ 12.30 AM ಗೆ ಶುರುವಾಗಲಿದೆ. ಅಲ್ಲದೆ ಈ ಪಂದ್ಯಗಳನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ಚಾನೆಲ್​ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲೂ ಪಂದ್ಯದ ನೇರ ಪ್ರಸಾರ ಇರಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!

ಫೈನಲ್ ಪಂದ್ಯ ಯಾವಾಗ?

ಯುರೋ ಕಪ್ ಫೈನಲ್ ಪಂದ್ಯವು ಜುಲೈ 15 ರಂದು ನಡೆಯಲಿದೆ. ಸೆಮಿಫೈನಲ್​ನಲ್ಲಿ ಗೆಲ್ಲುವ 2 ತಂಡಗಳು ಸೋಮವಾರ (ಭಾರತದಲ್ಲಿ) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಮುಖಾಮುಖಿಯಾಗಲಿದೆ.

ಹಾಲಿ ಚಾಂಪಿಯನ್ ಯಾರು?

1960 ರಲ್ಲಿ ಶುರುವಾದ ಯುರೋ ಕಪ್​ನ ಹಾಲಿ ಚಾಂಪಿಯನ್ ಇಟಲಿ. 2020ರ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 3-2 ಅಂತರ ಮಣಿಸಿ ಇಟಲಿ ತಂಡ ಚಾಂಪಿಯನ್ ಪಟ್ಟಕ್ಕೇರಿತು. ಆದರೆ ಈ ಬಾರಿ ಇಟಲಿ ತಂಡವು ರೌಂಡ್​-16 ರಲ್ಲೇ ಸೋತು ಹೊರ ಬಿದ್ದಿದೆ. ಇತ್ತ ಕಳೆದ ಬಾರಿಯ ರನ್ನರ್ ಅಪ್ ತಂಡ ಇಂಗ್ಲೆಂಡ್ ಸೆಮಿಫೈನಲ್​ಗೆ ಪ್ರವೇಶಿಸಿದ್ದು, ಈ ಸಲ ಕೂಡ ಫೈನಲ್​ಗೆ ಎಂಟ್ರಿ ಕೊಡುವ ವಿಶ್ವಾಸದಲ್ಲಿದ್ದಾರೆ.

 

Published On - 8:26 am, Sun, 7 July 24