
ಚೀನಾದ ಹುಲುನ್‌ಬುಯಿರ್‌ನಲ್ಲಿ ನಡೆದ 2026 ರ AHF ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು ಮಣಿಸಿದ ಭಾರತದ ಜೂನಿಯರ್ ಮಹಿಳಾ ಹಾಕಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಆತಿಥೇಯ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿದ ಭಾರತ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದರೊಂದಿಗೆ, ಭಾರತ ಸತತ ಮೂರನೇ ಬಾರಿಗೆ ಜೂನಿಯರ್ ಏಷ್ಯಾಕಪ್ ಗೆದ್ದುಕೊಳ್ಳುವ ಮೂಲಕ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಸಾಧನೆಯನ್ನು ಮಾಡಿತು. ಈ ಐತಿಹಾಸಿಕ ಪ್ರಶಸ್ತಿ ಗೆಲುವಿನೊಂದಿಗೆ, ಭಾರತ ತಂಡವು ಮುಂಬರುವ FIH ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಅಂತಿಮ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಆತಿಥೇಯ ಚೀನಾ ತಂಡಕ್ಕೆ ತವರಿನ ಅಭಿಮಾನಿಗಳಿಂದ ಅದ್ಭುತ ಬೆಂಬಲ ದೊರೆಯಿತು, ಆದರೆ ಭಾರತದ ರಕ್ಷಣಾ ಮತ್ತು ಫಾರ್ವರ್ಡ್ ಲೈನ್ ಅಮೋಘ ಪ್ರದರ್ಶನ ನೀಡಿತು. ಪಂದ್ಯದ ಎರಡನೇ ಕ್ವಾರ್ಟರ್‌ನ 17 ನೇ ನಿಮಿಷದಲ್ಲಿ ಭಾರತೀಯ ಸ್ಟ್ರೈಕರ್ ಸಾನಿಕಾ ಚಂದ್ರಕಾಂತ್ ಮಾನೆ ಎದುರಾಳಿ ಗೋಲ್‌ಕೀಪರ್‌ರನ್ನು ವಂಚಿಸಿ ಫೀಲ್ಡ್ ಗೋಲ್ ದಾಖಲಿಸಿದರು.
ನಂತರ ಚೀನಾ ತಂಡವು ಸಮಬಲ ಸಾಧಿಸಲು ಹಲವಾರು ಆಕ್ರಮಣಕಾರಿ ಪ್ರಯತ್ನಗಳನ್ನು ಮಾಡಿತು, ಆದರೆ ಭಾರತದ ರಕ್ಷಣಾ ಮತ್ತು ಗೋಲ್‌ಕೀಪರ್ ಭೇದಿಸಲಾಗದ ಗೋಡೆಯಂತೆ ಕಾರ್ಯನಿರ್ವಹಿಸಿ, ಚೀನಾದ ಎಲ್ಲಾ ಯೋಜನೆಗಳನ್ನು ವಿಫಲಗೊಳಿಸಿದರು. ಈ ಪ್ರಬಲ ಪ್ರದರ್ಶನದೊಂದಿಗೆ, ಭಾರತ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸತತ ಮೂರನೇ ಬಾರಿಗೆ ಪ್ರಶಸ್ತಿ ಗೆದ್ದ, ಭಾರತ ಯುವ ಮಹಿಳಾ ತಂಡಕ್ಕೆ ಹಾಕಿ ಇಂಡಿಯಾ ಪ್ರಶಸ್ತಿಗಳ ಸುರಿಮಳೆಗೈದಿದೆ. ಚಾಂಪಿಯನ್ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ತಲಾ 3 ಲಕ್ಷ ರೂ ಬಹುಮಾನ ನೀಡಲಾಗುವುದು ಎಂದು ಹಾಕಿ ಇಂಡಿಯಾ ಪ್ರಕಟಿಸಿದೆ. ಹಾಗೆಯೇ ತಂಡದ ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೂ ತಲಾ 1.5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದು ಪ್ರಕಟಿಸಿದೆ.
𝗔 𝗪𝗘𝗟𝗟-𝗗𝗘𝗦𝗘𝗥𝗩𝗘𝗗 𝗥𝗘𝗪𝗔𝗥𝗗! 🏆🇮🇳
Hockey India rewards the Indian Junior Women’s Team for their title-winning campaign at the AHF Junior Asia Cup 2026!
₹3 lakh to each player and ₹1.5 lakh to each of the support staff. 🥇🔥
The title win also confirms a spot… pic.twitter.com/CO5kP3pFJP
— Hockey India (@TheHockeyIndia) September 13, 2026
ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ತಂಡವನ್ನು 7-0 ಅಂತರದಿಂದ, ಮಲೇಷ್ಯಾವನ್ನು 11-1 ರಿಂದ ಮತ್ತು ದಕ್ಷಿಣ ಕೊರಿಯಾವನ್ನು 4-1 ಅಂತರದಿಂದ ಸೋಲಿಸುವ ಮೂಲಕ ಗೆಲುವಿನ ಆರಂಭವನ್ನು ಪಡೆದುಕೊಂಡಿತು. ಹಾಗೆಯೇ ಪಂದ್ಯಾವಳಿಯ ಹಿಂದಿನ ಮುಖಾಮುಖಿಯಲ್ಲಿ ಆತಿಥೇಯ ಚೀನಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು. ನಂತರ ಪಾಕಿಸ್ತಾನವನ್ನು 19-0 ಅಂತರದಿಂದ ಸೋಲಿಸಿ ಸೆಮಿಫೈನಲ್ ತಲುಪಿದ್ದ ಭಾರತ ತಂಡ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು ಮಣಿಸಿತ್ತು.
Published On - 5:38 pm, Sun, 13 September 26