
ಜಪಾನ್ನ ಗಿಫು ಪ್ರಿಫೆಕ್ಚರಲ್ ಗ್ರೀನ್ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಗೇಮ್ಸ್ ಮಹಿಳಾ ಹಾಕಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾ ಹಾಗೂ ಭಾರತ ಮಹಿಳಾ ಹಾಕಿ ತಂಡಗಳು ಮುಖಾಮುಖಿಯಾಗಿದ್ದವು. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಈ ಪಂದ್ಯವನ್ನು ಗೆಲ್ಲುವುದು ಭಾರತ ಮಹಿಳಾ ಹಾಕಿ ತಂಡಕ್ಕೆ ಅತ್ಯವಶ್ಯಕವಾಗಿತ್ತು. ಅದರಂತೆ ಚಿನ್ನದ ಪದಕದ ಪಂದ್ಯದಲ್ಲಿ ಚೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಮಹಿಳಾ ಹಾಕಿ ತಂಡ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದರ ಜೊತೆಗೆ ಬರೋಬ್ಬರಿ 44 ವರ್ಷಗಳ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ದಾಖಲೆ ನಿರ್ಮಿಸಿದೆ.
ಲಾಲ್ರೆಮ್ಸಿಯಾಮಿ ಬಾರಿಸಿದ ಏಕೈಕ ಗೋಲು ಇಡೀ ದೇಶವನ್ನೇ ಸಂಭ್ರಮಾಚರಣೆಯಲ್ಲಿ ಮುಳುಗಿಸಿದೆ. ಪಂದ್ಯದ ಮೊದಲ ಕ್ವಾರ್ಟರ್‌ನ 10 ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ, ಚೀನಾದ ರಕ್ಷಣಾ ಪಡೆಯನ್ನು ಧ್ವಂಸಗೊಳಿಸಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ಒಂದೇ ಒಂದು ಗೋಲು ಭಾರತಕ್ಕೆ ಅಜೇಯ ಮುನ್ನಡೆಯನ್ನು ನೀಡಿತು. ಈ ಮುನ್ನಡೆಯನ್ನು ಕೊನೆಯ ನಿಮಿಷದವರೆಗೂ ಕಾಯ್ದುಕೊಂಡ ಭಾರತ ಮಹಿಳಾ ತಂಡ, ಚೀನಾ ತಂಡಕ್ಕೆ ಒಂದೇ ಒಂದು ಅವಕಾಶವನ್ನು ಮಾಡಿಕೊಡದೆ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿತು.
INDIA WOMEN’S HOCKEY TEAM WINS ASIAN GAMES GOLD! 🥇🇮🇳
India defeated China 1-0 to win the women’s hockey gold medal at the Asian Games.
The victory ends a 44-year wait for India, whose women’s team last won Asian Games gold in 1982. India also secured a spot at the Los Angeles… pic.twitter.com/QEWdpkYSU8
— Subodh Kumar (@kumarsubodh_) October 2, 2026
ಭಾರತ ಮಹಿಳಾ ಪಡೆ ಮೊದಲ ಕ್ವಾರ್ಟರ್‌ನಿಂದಲೇ ಚೀನಾ ಮೇಲೆ ಒತ್ತಡ ಹೇರಿತು. ಭಾರತದ ಪರ ತನ್ನ 200 ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ಲಾಲ್ರೆಮ್ಸಿಯಾಮಿ 10 ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ದಾಖಲಿಸಿದರು. ಇದು ಭಾರತಕ್ಕೆ ಆರಂಭಿಕ 1-0 ಮುನ್ನಡೆಯನ್ನು ನೀಡಿತು. ನಂತರ ಭಾರತ ಪೆನಾಲ್ಟಿ ಕಾರ್ನರ್ ಗಳಿಸಿತ್ತಾದರೂ ಮುನ್ನಡೆಯನ್ನು ದ್ವಿಗುಣಗೊಳಿಸುವ ಅವಕಾಶವನ್ನು ಕಳೆದುಕೊಂಡಿತು. ಆದಾಗ್ಯೂ, ಮೊದಲ ಕ್ವಾರ್ಟರ್ ಅಂತ್ಯದವರೆಗೂ ಭಾರತ ತಂಡ ಮುನ್ನಡೆ ಕಾಯ್ದುಕೊಂಡಿತು.
ಎರಡನೇ ಕ್ವಾರ್ಟರ್‌ನಲ್ಲಿ ಚೀನಾ ಆಕ್ರಮಣಕಾರಿಯಾಗಿ ಆಡಿ ನಿರಂತರವಾಗಿ ಭಾರತದ ಮೇಲೆ ಒತ್ತಡ ಹೇರಿತು. ಇದೇ ವೇಳೆ ಚೀನಾಗೆ ಪೆನಾಲ್ಟಿ ಕೂಡ ಸಿಕ್ಕಿತು. ಇದರಿಂದ ಚೀನಾ ಸಮಬಲ ಸಾಧಿಸುವ ಅವಕಾಶ ಪಡೆದುಕೊಂಡಿತು. ಆದರೆ ಭಾರತೀಯ ಮಹಿಳಾ ತಂಡದ ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ ಚೀನಾ ಸಮಬಲ ಸಾಧಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಇದರ ನಂತರವೂ ಚೀನಾ ದಾಳಿಯನ್ನು ಮುಂದುವರೆಸಿತ್ತಾದರೂ ಭಾರತದ ರಕ್ಷಣಾ ಪಡೆ ಅದ್ಭುತ ಪ್ರದರ್ಶನ ನೀಡಿ ಚೀನಾದ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸಿತು.
ಮೂರನೇ ಕ್ವಾರ್ಟರ್‌ನಲ್ಲೂ ಭಾರತದ ಪ್ರಾಬಲ್ಯ ಮುಂದುವರೆಯಿತು. ಹೀಗಾಗಿ ನಾಲ್ಕನೇ ಕ್ವಾರ್ಟರ್‌ನ ಕೊನೆಯಲ್ಲಿ ತನ್ನ ತಂತ್ರ ಬದಲಿಸಿದ ಚೀನಾ ಗೋಲ್‌ಕೀಪರ್ ಬದಲಿಗೆ 11 ಔಟ್‌ಫೀಲ್ಡ್ ಆಟಗಾರ್ತಿಯರೊಂದಿಗೆ ಆಡಲು ಮುಂದಾಯಿತು. ಆದರೆ ಚೀನಾದ ಈ ತಂತ್ರವೂ ಫಲ ಕೊಡಲಿಲ್ಲ. ಏಕೆಂದರೆ ಭಾರತ ಮಹಿಳಾ ಪಡೆ ಕೊನೆಯ ನಿಮಿಷಗಳಲ್ಲಿ ರಕ್ಷಣೆಗಿಂತ ದಾಳಿಯತ್ತ ಹೆಚ್ಚು ಗಮನಹರಿಸಿತು. ಇದರಿಂದಾಗಿ ಚೀನಾ ತಂಡಕ್ಕೆ ತನ್ನ ಗೋಲುಗಳ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 1-0 ಅಂತರದಿಂದ ಪಂದ್ಯವನ್ನು ಜಯಿಸುವಲ್ಲಿ ಯಶಸ್ವಿಯಾಯಿತು.
GOLDEN GLORY FOR BHARAT!
Congratulations to the Indian Women’s Hockey Team on winning the Gold Medal at the #AsianGames2026, 44 years after India’s last Asian Games Gold in women’s hockey!
A brilliant display of skill, determination & teamwork!
Well done, Champions!… pic.twitter.com/JdOFwrvD1N— Kiren Rijiju (@KirenRijiju) October 2, 2026
ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಮಹಿಳಾ ತಂಡವು 1982 ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಒಮ್ಮೆ ಮಾತ್ರ ಚಿನ್ನದ ಪದಕವನ್ನು ಗೆದ್ದಿತ್ತು. ಅಂದಿನಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.1998 ರಲ್ಲಿ ಫೈಲ್ಗೇರಿದ್ದ ಮಹಿಳಾ ಪಡೆ ದಕ್ಷಿಣ ಕೊರಿಯಾ ಸೋತರೆ, 2018 ರಲ್ಲಿ ಜಪಾನ್ ವಿರುದ್ಧ ಸೋತು ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟಿಕೊಂಡಿತ್ತು. ಆದರೀಗ ನಗೋಯಾ ಮೈದಾನದಲ್ಲಿ ಹಾಲಿ ಚಾಂಪಿಯನ್ ಚೀನಾವನ್ನು ಸೋಲಿಸುವ ಮೂಲಕ, ಭಾರತೀಯ ಆಟಗಾರ್ತಿಯರು 44 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.
ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ ಅಥವಾ 3:30 ಕ್ಕೆ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಮತ್ತು ಚೀನಾ ತಂಡಗಳ ಬಸ್‌ಗಳು ಕ್ರೀಡಾಂಗಣಕ್ಕೆ ಬರುವ ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡವು. ಹೀಗಾಗಿ ಪಂದ್ಯವನ್ನು ತಡವಾಗಿ ಅಂದರೆ ಸಂಜೆ 4:15 ಕ್ಕೆ ಪ್ರಾರಂಭಿಸಲಾಯಿತು.
Published On - 6:04 pm, Fri, 2 October 26