ಬಿಸಿಸಿಐಗೆ ತಲೆನೋವಾದ ಟಿ20 ವಿಶ್ವಕಪ್ ವೇಳಾಪಟ್ಟಿ! ನಿಗದಿಗಿಂತ ಮೊದಲೇ ಐಪಿಎಲ್ ಮುಗಿಸುವ ಒತ್ತಡದಲ್ಲಿ ಬಿಸಿಸಿಐ

ಟಿಟ್ವೆಂಟಿ ವಿಶ್ವಕಪ್ಗಾಗಿ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಕನಿಷ್ಟ ಪಕ್ಷ, ಒಂದು ವಾರವಾದ್ರೂ ವಿಶ್ರಾಂತಿ ನೀಡಬೇಕು. ಇಲ್ಲಾ ಅಂದ್ರೆ ಬಿಸಿಸಿಐ, ತಂಡದ ಘನತೆಗಿಂತ ತನ್ನ ಆದಾಯದ ಮೂಲ ರಕ್ಷಣೆ ಮಾಡಿಕೊಳ್ಳುತ್ತೆ ಎನ್ನುವ, ಅಪಖ್ಯಾತಿಗೆ ಗುರಿಯಾಗಬೇಕಾಗುತ್ತೆ.

ಬಿಸಿಸಿಐಗೆ ತಲೆನೋವಾದ ಟಿ20 ವಿಶ್ವಕಪ್ ವೇಳಾಪಟ್ಟಿ! ನಿಗದಿಗಿಂತ ಮೊದಲೇ ಐಪಿಎಲ್ ಮುಗಿಸುವ ಒತ್ತಡದಲ್ಲಿ ಬಿಸಿಸಿಐ
ಇನ್ನು ಹೊಸ 2 ಫ್ರಾಂಚೈಸಿಗೆ 3 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗುತ್ತದೆ. ಹೀಗೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನವೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ. ಆ ಬಳಿಕ ಹೊಸ ಫ್ರಾಂಚೈಸಿಗಳಿಗೆ ಆಟಗಾರರ ಆಯ್ಕೆಗೆ ಅವಕಾಶ ದೊರೆಯಲಿದೆ.

Updated on: Jun 30, 2021 | 7:44 PM

ಭಾರತದಲ್ಲಿ ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿದ್ದ ಐಪಿಎಲ್ ಅನ್ನ ಬಿಸಿಸಿಐ, ಯುಎಇನಲ್ಲಿ ನಡೆಸೋದಕ್ಕೆ ಮುಂದಾಗಿದೆ. ಕೇವಲ 27 ದಿನಗಳಲ್ಲಿ ಉಳಿದಿರುವ 31 ಪಂದ್ಯಗಳನ್ನ ಬಿಸಿಸಿಐ ಕಂಪ್ಲೀಟ್ ಮಾಡಲು ನಿರ್ಧರಿಸಿತ್ತು. ಅದ್ರೀಗ ಯುಎಇನಲ್ಲೇ ನಡೆಯುವ ಟಿಟ್ವೆಂಟಿ ವಿಶ್ವಕಪ್ನಿಂದಾಗಿ, ಬಿಸಿಸಿಐ ಇಕ್ಕಟ್ಟಿನಲ್ಲಿ ಸಿಲುಕಿದೆ. ಯುಎಇನಲ್ಲೇ ಟಿಟ್ವೆಂಟಿ ವಿಶ್ವಕಪ್ ನಡೆಸೋದಾಗಿ ಐಸಿಸಿ, ಬುಧವಾರ ಅದಿಕೃತವಾಗಿ ಘೋಷಿಸಿದೆ. ಅಬುಧಾಬಿ, ಶಾರ್ಜಾ, ದುಬೈ ಮತ್ತು ಒಮನ್ನಲ್ಲಿ ನಡೆಯುವ ಟಿಟ್ವೆಂಟಿ ಮಹಾಸಮರ, ಅಕ್ಟೋಬರ್ 17ರಿಂದು ಆರಂಭವಾಗಿ ನವೆಂಬರ್ 14ರಂದು ಮುಕ್ತಾಯಗೊಳ್ಳಲಿದೆ. ಇದೇ ಈಗ ಬಿಗ್ಬಾಸ್ಗಳನ್ನ ಅಡಕತ್ತರಿಯಲ್ಲಿ ಸಿಲುಕುವಂತೆ ಮಾಡಿದೆ.

ಐಪಿಎಲ್ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿದ ಬಿಸಿಸಿಐ!
ಮೇ.29ರಂದು ನಡೆದ BCCIನ ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಸೆಪ್ಟಂಬರ್ 19ರಿಂದ ಆರಂಭವಾಗುವ ಐಪಿಎಲ್, ಅಕ್ಟೋಬರ್ 15ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದ್ರೆ ಅಕ್ಟೋಬರ್ 17ಕ್ಕೆ ಟಿಟ್ವೆಂಟಿ ವಿಶ್ವಕಪ್ ಶುರುವಾಗುವದರಿಂದ, ಟೀಂ ಇಂಡಿಯಾ ಆಟಗಾರರಿಗೆ ಕೇವಲ ಒಂದು ದಿನ ಮಾತ್ರ ವಿಶ್ರಾಂತಿ ಸಿಗುತ್ತೆ. ಒಂದು ದಿನದ ಅಂತರದಲ್ಲೇ ಕೊಹ್ಲಿ ಹುಡುಗರು, ಟಿಟ್ವೆಂಟಿ ವಿಶ್ವಕಪ್ಗೆ ಸಿದ್ಧತೆ ನಡೆಸಿಕೊಳ್ಳೋದು ಅಸಾಧ್ಯದ ಮಾತು. ಇದೇ ಈಗ ಬಿಸಿಸಿಐ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ..

ಅ.15ರ ಬದಲು.. ಅ.10ಕ್ಕೆ IPL ಮುಗಿಸಲು ಬಿಸಿಸಿಐ ಯೋಜನೆ!
ಟಿಟ್ವೆಂಟಿ ವಿಶ್ವಕಪ್ಗಾಗಿ ಬಿಸಿಸಿಐ ಟೀಂ ಇಂಡಿಯಾ ಆಟಗಾರರಿಗೆ ಕನಿಷ್ಟ ಪಕ್ಷ, ಒಂದು ವಾರವಾದ್ರೂ ವಿಶ್ರಾಂತಿ ನೀಡಬೇಕು. ಇಲ್ಲಾ ಅಂದ್ರೆ ಬಿಸಿಸಿಐ, ತಂಡದ ಘನತೆಗಿಂತ ತನ್ನ ಆದಾಯದ ಮೂಲ ರಕ್ಷಣೆ ಮಾಡಿಕೊಳ್ಳುತ್ತೆ ಎನ್ನುವ, ಅಪಖ್ಯಾತಿಗೆ ಗುರಿಯಾಗಬೇಕಾಗುತ್ತೆ. ಹೀಗಾಗಿ ಬಿಸಿಸಿಐ, ಅಕ್ಟೋಬರ್ 15ರ ಬದಲು ಐದು ದಿನ ಮುಂಚಿತವಾಗಿ ಐಪಿಎಲ್ಗೆ ಪೂರ್ಣಗೊಳಿಸಲು ಯೋಜನೆ ರೂಪಿಸಿತ್ತಿದೆ. ಅಂದ್ರೆ 27 ದಿನಗಳ ಬದಲು 22 ದಿನಗಳಲ್ಲಿ ಐಪಿಎಲ್ ಮುಗಿಸಲಿದೆ. ಅಲ್ಲಿಗೆ ಅಕ್ಟೋಬರ್ 10ಕ್ಕೆ ಐಪಿಎಲ್ ಪೂರ್ಣಗೊಂಡ್ರೆ, ಕೊಹ್ಲಿ ಪಡೆಗೆ ಒಂದು ವಾರ ವಿಶ್ರಾಂತಿ ಸಿಗಲಿದೆ. ಹಾಗೇ ಐಸಿಸಿ, ಬಯೋ ಬಬಲ್ನಲ್ಲಿ ಎಂಟ್ರಿ ಕೊಡಲು, ಕೊಹ್ಲಿ ಪಡೆಗೆ ಅನುಕೂಲವಾಗಲಿದೆ.

ಹೆಚ್ಚು ಡಬಲ್ ಹೆಡ್ಡರ್ ಪಂದ್ಯಗಳನ್ನ ಆಯೋಜಿಸಲು ನಿರ್ಧಾರ!
ಅಕ್ಟೋಬರ್ 10ಕ್ಕೆ ಐಪಿಎಲ್ ಮುಗಿಸಬೇಕು ಅಂದ್ರೆ, ಬಿಸಿಸಿಐ ಡಬಲ್ ಹೆಡ್ಡರ್ ಪಂದ್ಯಗಳನ್ನ ಆಯೋಜಿಸಲೇ ಬೇಕು. ಅಂದ್ರೆ ದಿನವೊಂದಕ್ಕೆ ಎರಡೆರೆಡು ಪಂದ್ಯಗಳನ್ನ ನಡೆಸಬೇಕು. ಹಾಗಾದಾಗ ಮಾತ್ರ 22 ದಿನದಲ್ಲಿ 31 ಪಂದ್ಯಗಳನ್ನ ಪೂರ್ಣಗೊಳಿಸಲು ಸಾಧ್ಯ. ಬಿಸಿಸಿಐ ಮುಂದಿರೋದು ಇದೋಂದೇ ಆಯ್ಕೆಯಾಗಿದೆ. ಇನ್ನು ಟಿಟ್ವೆಂಟಿ ವಿಶ್ವಕಪ್ ಯುಎಇನಲ್ಲಿ ನಡೆಯೋದ್ರಿಂದ, ಐಪಿಎಲ್ಗೆ ವಿದೇಶಿ ಆಟಗಾರ ಅಲಭ್ಯತೆ ಕಾಡೋದಿಲ್ಲ. ಯಾಕಂದ್ರೆ ಎಲ್ಲಾ ತಂಡಗಳ ಆಟಗಾರರು, ಮೊದಲು ಯುಎಇನಲ್ಲೇ ಕ್ವಾರಂಟೈನ್ ಆಗಬೇಕು. ಆದ್ರೆ ಐಸಿಸಿ ವೇಳಾ ಪಟ್ಟಿಯಿಂದ, ಐಪಿಎಲ್ನಿಂದ ಬಿಸಿಸಿಐಗೆ ಬರುತ್ತಿದ್ದ ಹೆಚ್ಚಿನ ಆದಾಯಕ್ಕೆ ಪೆಟ್ಟು ನೀಡಿದಂತಾಗಿದೆ.