ದುಬೈ: ಇಂಡಿಯನ್ ಪ್ರೀಮೀಯರ್ ಲೀಗ್ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಕನ್ನಡಿಗ ಕೆ ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ XI ಪಂಜಾಬ್ ತಂಡ ಈಗ ದುಬೈನಲ್ಲಿ ಭಾರೀ ತಯಾರಿ ನಡೆಸಿದೆ.
ಪೂರ್ವಭಾವಿ ತಯಾರಿಗಾಗಿ ದುಬೈಗೆ ತೆರಳಿದ ನಂತರ ಸತತ ಅಭ್ಯಾಸದಲ್ಲಿ ತೊಡಗಿರುವ ತಂಡದ ಆಟಗಾರರು, ಅಭ್ಯಾಸದ ನಡುವೆಯೆ ಬಿಡುವು ಮಾಡಿಕೊಂಡು ಬೀಚ್‌ನಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಗಲ್ಫ್‌ನ ಬೀಚ್‌ನಲ್ಲಿ ನಾಯಕ ರಾಹುಲ್, ಆರಂಭಿಕ ಮಯಾಂಕ್ ಅಗರ್‌ವಾಲ್ ಸೇರಿದಂತೆ ತಂಡದ ಹಲವಾರು ಆಟಗಾರರು ಸಲ್ಮಾನ್ ಖಾನ್ ಥರಹ ಶರ್ಟ್ ಇಲ್ಲದೇ ಕುಣಿದು ಕುಪ್ಪಳಿಸಿ ಎಂಜಾಯ್ ಮಾಡಿದ್ದಾರೆ.
ಕೆಲ ಆಟಗಾರರು ಸಮುದ್ರದ ನೀರಲ್ಲಿ ಈಜಾಡಿದ್ರೆ, ಕೆಲವರು ಆರಾಮಾ ಕುರ್ಚಿಯಲ್ಲಿ ಕುಳಿತು ತಂಪಾದ ಸಂಜೆಯ ಸ್ವಾದವನ್ನು ಅನುಭವಿಸಿದ್ದಾರೆ. ಇನ್ನು ಕೋಚ್ ಅನಿಲ್ ಕುಂಬ್ಳೆ ಆಟಗಾರರ ಈ ಹತ್ತು ಹಲವು ಅವತಾರಗಳನ್ನ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವುದರಲ್ಲಿ ಬಿಜಿಯಾಗಿದ್ದಾರೆ.
ಇದೆಲ್ಲವನ್ನು ವಿಡಿಯೋ ಮಾಡಿರುವ ಕಿಂಗ್ಸ್ XIಪಂಜಾಬ್ ತಂಡ ತನ್ನ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳಿಗಾಗಿ ಶೇರ್ ಮಾಡಿದೆ.
Training de ‘beach' thoda fun vi jaruri hai ?#Dream11IPL #SaddaPunjab pic.twitter.com/fzUK158c7j
— Kings XI Punjab (@lionsdenkxip) September 1, 2020