ಕ್ರಿಕೆಟ್ ಮ್ಯಾಚ್ನಲ್ಲಿ ಎದುರಾಳಿ ಬ್ಯಾಟ್ಸ್ಮನ್ನ ವಿಕೆಟ್ ಪಡೆಯುವುದೇ ಪ್ರತಿ ಬೌಲರ್ನ ಗುರಿ. ಬ್ಯಾಟ್ಸ್ಮನ್ನ ಯಾವ ರೀತಿಯ ಎಸೆತದಿಂದ ಮಣಿಸಿ ಆತನ ವಿಕೆಟ್ ಎಗರಿಸಬಹುದು ಅನ್ನೋ ಯೋಚನೆಯನ್ನ ಎಲ್ಲಾ ಬೌಲರ್ಗಳು ಮಾಡುತ್ತಾರೆ. ಅಂತೆಯೇ, ಬೌಲ್ ಮಾಡಿದ ಇನ್ಸ್ವಿಂಗ್, ಔಟ್ಸ್ವಿಂಗ್ ಮತ್ತು ಗೂಗ್ಲಿಗೆ ಬ್ಯಾಟ್ಸ್ಮನ್ ವಿಕೆಟ್ ಬಿದ್ರೆ ಸಾಕು. ಬೌಲರ್ನ ಸಂತೋಷಕ್ಕೆ ಪಾರವೇ ಇರಲ್ಲ.
ಹೀಗೆ, ವಿಕೆಟ್ ಪಡೆದಾಗ ಬೌಲರ್ ಹಾಗೂ ಆತನ ಟೀಂ ಸಂಭ್ರಮಿಸುವುದನ್ನ ನೋಡಿದ್ದೇವೆ. ಕೆಲವೊಂದು ಬಾರಿ ಈ ಸಂಭ್ರಮಾಚರಣೆ ಕೊಂಚ ವಿಭಿನ್ನವಾಗಿಯೇ ಇರುತ್ತದೆ. ಹಾಗೆಯೇ, ಎದುರಾಳಿ ಬ್ಯಾಟ್ಸ್ಮನ್ನ ವಿಕೆಟ್ ಪಡೆದ ಆನಂದದಲ್ಲಿ ಆಫ್ ಸ್ಪಿನ್ನರ್ ಒಬ್ಬ ಡಬಲ್ ಪಲ್ಟಿ ಹೊಡೆದಿರುವ ರೋಚಕ ಪ್ರಸಂಗ ವೆಸ್ಟ್ ಇಂಡೀಸ್ನ ಕ್ಯಾರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದಿದೆ.
ಗಯಾನಾ ಅಮೆಜಾನ್ ತಂಡದ ಆಫ್ ಸ್ಪಿನ್ನರ್ ಆದ 20 ವರ್ಷದ ಕೆವಿನ್ ಸಿನ್ಕ್ಲೇರ್ ಪಂದ್ಯದ ವೇಳೆ ಎದುರಾಳಿ ತಂಡವಾದ ಬಾರ್ಬೇಡೋಸ್ ಟ್ರೈಡೆಂಟ್ಸ್ನ ಬ್ಯಾಟ್ಸ್ಮನ್ ಮಿಚ್ಚೆಲ್ ಸ್ಯಾಂಟ್ನರ್ನ ವಿಕೆಟ್ ಪಡೆದನು. ಅದೇ ಖುಷಿಯಲ್ಲಿ ಕುಣಿದು ಕುಪ್ಪಳಿಸುವ ಜೊತೆಗೆ ಕೆವಿನ್ ಡಬಲ್ ಪಲ್ಟಿ ಸಹ ಹೊಡೆದಿದ್ದಾನೆ. ಕೆವಿನ್ನ ಈ ಸ್ಟಂಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜನರು ವಾವ್ ಅನ್ನುತ್ತಿದ್ದಾರೆ. ಆದರೆ, ಮತ್ತೊಂದೆಡೆ, ಈ ಥರದ ಅಪಾಯಕಾರಿ ಸ್ಟಂಟ್ಗಳನ್ನ ಮಾಡಲು ಅವಕಾಶ ಕೊಡಬೇಡಿ ಎಂದು ಪಂದ್ಯಾವಳಿಯ ಕೆಲ ಅಭಿಮಾನಿಗಳು ಕಾಳಜಿ ತೋರಿದ್ದಾರೆ.
Double?? Treble?? Definitely Double Trouble in the Bubble!! What a celebration! #CPL20 #CricketPLayedLouder pic.twitter.com/3N2oKNAzRy
— CPL T20 (@CPL) September 3, 2020