NBA ದಂತಕಥೆ ಜೋರ್ಡನ್ ಧರಿಸಿದ ಶೂಗಳು ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?

NBA ಆಟದ ದಂತಕಥೆ ಮೈಕಲ್ ಜೋರ್ಡನ್ ಬ್ಯಾಸ್ಕೆಟ್​ಬಾಲ್​ ಆಡುವಾಗ ಧರಿಸಿದ್ದ ಶೂಗಳು ಸಾರ್ವಕಾಲಿಕ ದಾಖಲೆಯ ಬೆಲೆಗೆ ಹರಾಜಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ. ಮೈಕಲ್ ಜೋರ್ಡನ್ ವೃತ್ತಿಜೀವನದ ಬಗ್ಗೆ ನಿರ್ಮಿಸಲಾಗಿದ್ದ, ದಿ ಲಾಸ್ಟ್ ಡ್ಯಾನ್ಸ್ 10 ಭಾಗಗಳ ಸಾಕ್ಷಚಿತ್ರದ ಅಂತಿಮ ಭಾಗವನ್ನು ESPN ಪ್ರಸಾರ ಮಾಡಿದ ದಿನದಂದೇ ಅವರು ಧರಿಸಿದ್ದ ಶೂಗಳನ್ನು 4.6 ಕೋಟಿ ಮೌಲ್ಯಕ್ಕೆ, ಸ್ನೀಕರ್ ಸಂಗ್ರಾಹಕ ಮತ್ತು ಸ್ನೀಕರ್ ಮ್ಯೂಸಿಯಂನ ಷೂಜಿಯಂ ಸ್ಥಾಪಕ ಜೋರ್ಡನ್ ಗೆಲ್ಲರ್ ಮಾರಾಟ ಮಾಡಿದರು. ಹರಾಜು ಪ್ರಕ್ರಿಯೆಯಲ್ಲಿ ಈ […]

NBA ದಂತಕಥೆ ಜೋರ್ಡನ್ ಧರಿಸಿದ ಶೂಗಳು ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?

Updated on: Aug 15, 2020 | 2:46 PM

NBA ಆಟದ ದಂತಕಥೆ ಮೈಕಲ್ ಜೋರ್ಡನ್ ಬ್ಯಾಸ್ಕೆಟ್​ಬಾಲ್​ ಆಡುವಾಗ ಧರಿಸಿದ್ದ ಶೂಗಳು ಸಾರ್ವಕಾಲಿಕ ದಾಖಲೆಯ ಬೆಲೆಗೆ ಹರಾಜಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ.

ಮೈಕಲ್ ಜೋರ್ಡನ್ ವೃತ್ತಿಜೀವನದ ಬಗ್ಗೆ ನಿರ್ಮಿಸಲಾಗಿದ್ದ, ದಿ ಲಾಸ್ಟ್ ಡ್ಯಾನ್ಸ್ 10 ಭಾಗಗಳ ಸಾಕ್ಷಚಿತ್ರದ ಅಂತಿಮ ಭಾಗವನ್ನು ESPN ಪ್ರಸಾರ ಮಾಡಿದ ದಿನದಂದೇ ಅವರು ಧರಿಸಿದ್ದ ಶೂಗಳನ್ನು 4.6 ಕೋಟಿ ಮೌಲ್ಯಕ್ಕೆ, ಸ್ನೀಕರ್ ಸಂಗ್ರಾಹಕ ಮತ್ತು ಸ್ನೀಕರ್ ಮ್ಯೂಸಿಯಂನ ಷೂಜಿಯಂ ಸ್ಥಾಪಕ ಜೋರ್ಡನ್ ಗೆಲ್ಲರ್ ಮಾರಾಟ ಮಾಡಿದರು. ಹರಾಜು ಪ್ರಕ್ರಿಯೆಯಲ್ಲಿ ಈ ಶೂಗಳನ್ನು ಕೊಂಡುಕೊಂಡ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಕೆಂಪು, ಬಿಳಿ ಮತ್ತು ಕಪ್ಪು ನೈಕ್ ಏರ್ ಜೋರ್ಡಾನ್​ನನ್ನು ಶಿಕಾಗೊ ಬುಲ್ಸ್ ಸಮವಸ್ತ್ರವನ್ನು ಹೋಲುವ ಒಂದೇ ಬಣ್ಣದ ಶೂಗಳನ್ನು ನೈಕ್ ಸಂಸ್ಥೆ ತಯಾರಿಸಿದ್ದು, ಈ ಶೂಗಳ ಮೇಲೆ ಕಪ್ಪು ಶಾಯಿಯಲ್ಲಿ ಜೋರ್ಡಾನ್ ಆಟೋಗ್ರಾಫ್ ಇದೆ. 1985 ರಲ್ಲಿ ಸಾರ್ವಜನಿಕರಿಗೆ ಮಾರಾಟವಾದ ಈ ಜೋಡಿ ಶೂಗಳಲ್ಲಿ ಕೆಂಪು ಬಣ್ಣದ ಲೇಸ್‌ಗಳೂ ಸೇರಿವೆ. ಈ ಶೂಗಳಿಗಿಂತ ಮೊದಲು ಬಂದ ಶೂಗಳು ಕೇವಲ ಕಪ್ಪು ಮತ್ತು ಬಿಳಿ ಲೇಸ್‌ಗಳೊಂದಿಗೆ ಬಂದವು.