ವಿಡಿಯೋ: ಹೆಂಡತಿ ಎದುರಿಗೇ ತನ್ನ ಕುದುರೆಯ ಮುದ್ದು ಮಾಡಿದ ಕೂಲ್​ ಕ್ಯಾಪ್ಟನ್ ಎಂ ಎಸ್​​ ಧೋನಿ!

MS Dhoni: ಪ್ರಾಣಿ ಪ್ರಿಯ ಧೋನಿ ತಮ್ಮ ಕುದುರೆಗೆ ಮಸಾಜ್​ ಮಾಡಿದ್ದಾರೆ. ಮಲಗಿದ್ದ ಕುದುರೆಯ ಹೊಟ್ಟೆಯನ್ನು ನೀವುತ್ತಾ.. ಅಲ್ಲಿದವರತ್ತ ಕಣ್ಣು ಮಿಟುಕಿಸಿದ್ದಾರೆ. ಇದಕ್ಕೆ ಪತ್ನಿ ಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿ ಸಿಂಗ್​ ಆ ದೃಶ್ಯವನ್ನು ವಿಡಿಯೋ ಮಾಡಿ ಇನ್ಸ್​ಟಾಗ್ರಾನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವಿಡಿಯೋ: ಹೆಂಡತಿ ಎದುರಿಗೇ ತನ್ನ ಕುದುರೆಯ ಮುದ್ದು ಮಾಡಿದ ಕೂಲ್​ ಕ್ಯಾಪ್ಟನ್ ಎಂ ಎಸ್​​ ಧೋನಿ!
MS Dhoni
ಸಾಧು ಶ್ರೀನಾಥ್​ Edited By:

Updated on: May 28, 2021 | 12:00 PM

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಕಾರಣ ಕೂಲ್​ ಕ್ಯಾಪ್ಟನ್ ಎಂ ಎಸ್​​ ಧೋನಿ ತಮ್ಮ ರಾಂಚಿ ಫಾರಂ ಹೌಸ್​ನಲ್ಲಿ ತಮ್ಮ ಅಚ್ಚುಮೆಚ್ಚಿನ ಪ್ರಾಣಿಗಳ ಜೊತೆ ಕೂಲ್​ ಕೂಲ್​ ಆಗಿದ್ದಾರೆ. ಅವುಗಳನ್ನು ಮುದ್ದಾಡುತ್ತಾ ಆನಂದಿಂದ ಸಮಯ ಕಳೆಯುತ್ತಿದ್ದಾರೆ. ಮೊನ್ನೆಯೂ ಹೀಗೇ ಆಗಿದೆ. ಎಂ ಎಸ್​​ ಧೋನಿಗೆ ತಮ್ಮ ನೆಚ್ಚಿನ ಕುದುರೆಯ ಮೇಲೆ ವ್ಯಾಮೋಹ ಹೆಚ್ಚಾಗಿದ್ದೇ ತಡ ಸೀದಾ ಅದರ ಬಳಿ ಸಾಗಿ ಅದರ ಮೈದಡವಿ ಮುದ್ದಾಡಿದ್ದಾರೆ. ಪ್ರಾಣಿ ಪ್ರಿಯ ಧೋನಿ ತಮ್ಮ ಕುದುರೆಗೆ ಮಸಾಜ್​ ಮಾಡಿದ್ದಾರೆ. ಮಲಗಿದ್ದ ಕುದುರೆಯ ಹೊಟ್ಟೆಯನ್ನು ನೀವುತ್ತಾ.. ಅಲ್ಲಿದವರತ್ತ ಕಣ್ಣು ಮಿಟುಕಿಸಿದ್ದಾರೆ. ಇದಕ್ಕೆ ಪತ್ನಿ ಸಾಕ್ಷಿಯಾಗಿದ್ದಾರೆ. ಅಷ್ಟೇ ಅಲ್ಲ ಸಾಕ್ಷಿ ಸಿಂಗ್​ ಆ ದೃಶ್ಯವನ್ನು ವಿಡಿಯೋ ಮಾಡಿ ಇನ್ಸ್​ಟಾಗ್ರಾನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಕ್ರಿಕೆಟ್​ ಆಡದೆ ತೋಟದ ಮನೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕ್ಯಾಪ್ಟನ್ ಸಾ​ಹೇಬರು ಕುದುರೆಗೆ ಏನು ಮೋಡಿ ಮಾಡುತ್ತಿದ್ದಾರೆ ನೋಡಿ ಎಂದು ವಿಡಿಯೋಗೆ #Pamperingtime ಹ್ಯಾಷ್​ಟ್ಯಾಗ್​ ಹೆಡ್ಡಿಂಗ್​ ನೀಡಿದ್ದಾರೆ ಧೋನಿ ಪತ್ನಿ ಸಾಕ್ಷಿ.

ಇದೇ ವೇಳೆ ಸಾಕ್ಷಿ ಅವರು 2009ರ ಥ್ರೋಬ್ಯಾಕ್​ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಹುಡುಗರ ಜೊತೆ ಕ್ರಿಕೆಟ್ ಆಡುತ್ತಿರುವ ಎಂ ಎಸ್​​ ಧೋನಿ ಆಗಲೂ ಕೂಲ್​ ಕೂಲ್​ ಆಗಿ ವಿಕೆಟ್​ ಹಿಂದೆ ತನ್ಮಯತೆಯಿಂದ ನಿಂತಿದ್ದಾರೆ.

(Chennai Super Kings skipper MS Dhoni massage his horse in Ranchi farmhouse Wife Sakshi Singh Shares Video)

ಮೈಸೂರು ಅರಮನೆಯಲ್ಲಿ ಪಟ್ಟದ ಆನೆ, ಕುದುರೆ ಮತ್ತು ಹಸುಗೆ ಪೂಜೆ

Published On - 11:30 am, Fri, 28 May 21

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us