2024 Davis Cup: ಪಾಕಿಸ್ತಾನದ ನೆಲದಲ್ಲೇ ಪಾಕ್ ತಂಡವನ್ನ ಮಣಿಸಿದ ಭಾರತ ಟೆನಿಸ್ ಆಟಗಾರರ ಅನುಭವ ಹೀಗಿತ್ತು

| Updated By: ಸಾಧು ಶ್ರೀನಾಥ್​

Updated on: Feb 16, 2024 | 5:56 PM

ಪಾಕಿಸ್ತಾನವು ಆರು ದಶಕಗಳ ಬಳಿಕ ತನ್ನ ತವರು ನೆಲದಲ್ಲಿ ಮೊದಲ ಬಾರಿಗೆ ಡೇವಿಸ್ ಕಪ್ ಟೆನಿಸ್ (2024 Davis Cup ) ಟೂರ್ನಿಯಲ್ಲಿ ಸಾಂಪ್ರದಾಯಿಕ ವೈರಿ ಭಾರತವನ್ನು ಎದುರಿಸಿ, ಸೋಲನ್ನೊಪ್ಪಿತು.

2024ರ ಡೇವಿಸ್ ಕಪ್ ವಿಜೇತ ಭಾರತ ತಂಡದ ಆಟಗಾರರು ( Indian tennis players) ತಮ್ಮ ಸಂತೋಷವನ್ನ ಹಂಚಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ನಡೆದ ಈ ಮೆಗಾ ಟೂರ್ನಿಯಲ್ಲಿ ಭಾರತ ತಂಡ ಫೈನಲ್​ನಲ್ಲಿ ಪಾಕ್ ತಂಡವನ್ನ (Pak team) 4-0 ಅಂತರದಿಂದ ಸೋಲಿಸಿದೆ. ಪಾಕಿಸ್ತಾನವು ಆರು ದಶಕಗಳ ಬಳಿಕ ತನ್ನ ತವರು ನೆಲದಲ್ಲಿ ಮೊದಲ ಬಾರಿಗೆ ಡೇವಿಸ್ ಕಪ್ ಟೆನಿಸ್ (2024 Davis Cup ) ಟೂರ್ನಿಯಲ್ಲಿ ಸಾಂಪ್ರದಾಯಿಕ ವೈರಿ ಭಾರತವನ್ನು ಎದುರಿಸಿ, ಸೋಲನ್ನೊಪ್ಪಿತು.

ಪಾಕಿಸ್ತಾನದ ನೆಲದಲ್ಲೇ ಪಾಕ್ ತಂಡವನ್ನ ಮಣಿಸಿದ ಭಾರತದ ಟೆನಿಸ್ ಆಟಗಾರರಾದ ಯುಕೀ ಬಾಂಬ್ರಿ, ಸಾಕೇತ್ ಮೈನೇನಿ, ಮುಕುಂದ್ ಸಸೀಕುಮಾರ್ ಹಾಗೂ ನಿಕಿ ಕಾಲಿಯಾಂಡ ಬೆಂಗಳೂರಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್​ನಲ್ಲಿ ತಮ್ಮ ಅನುಭವ ಹಂಚಿಕೊಂಡ್ರು.

Also Read: IND vs ENG: ಟೆಸ್ಟ್ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ಬರೆದ ಆರ್​ ಅಶ್ವಿನ್..!

ಈ ವೇಳೆ ಮಾತಾಡಿದ ಪ್ರತಿ ಆಟಗಾರರು ಕೂಡ ಪಾಕಿಸ್ತಾನದಲ್ಲಿ ಬೀಡುಬಿಟ್ಟು ಡೇವಿಸ್ ಕಪ್ ಆಡಿದ ಕ್ಷಣಗಳನ್ನ ಮೆಲುಕು ಹಾಕಿದ್ರು. ಅಲ್ಲದೇ ಪಾಕ್ ಪ್ರವಾಸದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗಲಿಲ್ಲ. ಬದಲಿಗೆ ಪಾಕ್ ಆಟಗಾರರಿಂದಲೂ ಉತ್ತಮ ಸ್ನೇಹ ಬೆಳೆಯಿತು ಅಂತಾ ತಿಳಿಸಿದ್ರು. ಪಾಕ್ ಪ್ರವಾಸ ನಮ್ಮ ಪಾಲಿಗೆ ಅವಿಸ್ಮರಣೀಯವಾಗಿದ್ದು, ಗೆಲುವಿನ ಬಗ್ಗೆ ಆತ್ಮವಿಶ್ವಾಸವಿತ್ತು. ತಂಡದ ಆಟಗಾರರೆಲ್ಲಾ ಒಗ್ಗೂಡಿ ಅಭ್ಯಾಸ ನಡೆಸಿ ಪೂರ್ವ ತಯಾರಿ ನಡೆಸಿಕೊಂಡಿದ್ದೆವು. ಹಾಗಾಗಿ ಪಾಕ್ ತಂಡವನ್ನ ಮಣಿಸಲು ಸಾಧ್ಯವಾಯ್ತು ಅಂತಾ ಆಟಗಾರರು ಹೇಳಿದ್ದಾರೆ. ಈ ವೇಳೆ ಆಟಗಾರರ ಜೊತೆ ತೆರಳಿದ್ದ ಕೆಎಸ್ಎಲ್​ಟಿಎ ಅಧ್ಯಕ್ಷ ಸುನೀಲ್ ಯಜಮಾನ್ ಅವರು ಆಟಗಾರರ ಅದ್ಭುತ ಪ್ರದರ್ಶನವನ್ನು ಪ್ರಶಂಸಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ