ಏಷ್ಯನ್ ಗೇಮ್ಸ್​ನಲ್ಲಿ ಮತ್ತೊಂದು ಚಿನ್ನ: ಪುರುಷರ 50m ರೈಫಲ್​ನಲ್ಲಿ ಭಾರತಕ್ಕೆ ಬಂಗಾರ

|

Updated on: Sep 29, 2023 | 8:50 AM

India Medal in Asian Games: ಭಾರತದ ಐಶ್ವರಿ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ತಂಡವು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಇದು 15 ನೇ ಪದಕ ಮತ್ತು 7 ನೇ ಚಿನ್ನವಾಗಿದೆ.

ಏಷ್ಯನ್ ಗೇಮ್ಸ್​ನಲ್ಲಿ ಮತ್ತೊಂದು ಚಿನ್ನ: ಪುರುಷರ 50m ರೈಫಲ್​ನಲ್ಲಿ ಭಾರತಕ್ಕೆ ಬಂಗಾರ
Aishwary Pratap,Kusale Swapnil and Akhil Sheoran
Follow us on

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತದ ಪದಕದ ಬೇಟೆ ಇಂದು ಶುಕ್ರವಾರ ಕೂಡ ಮುಂದುವರೆದಿದೆ. ಭಾರತದ ಐಶ್ವರಿ ತೋಮರ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಅವರ 50 ಮೀಟರ್ ರೈಫಲ್ 3Ps ಪುರುಷರ ತಂಡವು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತಕ್ಕೆ ಶೂಟಿಂಗ್‌ನಲ್ಲಿ ಇದು 15 ನೇ ಪದಕ ಮತ್ತು 7 ನೇ ಚಿನ್ನವಾಗಿದೆ.

ಭಾರತವು 1769 ರ ಅತ್ಯುತ್ತಮ ಸ್ಕೋರ್ ಗಳಿಸಿತು. ಕಳೆದ ವರ್ಷ ಪೆರುವಿನಲ್ಲಿ USA ಯ ಹಿಂದಿನ ದಾಖಲೆಯನ್ನು ಎಂಟು ಅಂಕಗಳಿಂದ ಪುಗಟ್ಟಿದ ಸಾಧನೆ ಕೂಡ ಮಾಡಿತು. ಚೀನಾ 1763 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದಕೊಂಡರೆ, ರಿಪಬ್ಲಿಕ್ ಆಫ್ ಕೊರಿಯಾ 1748 ಅಂಕಗಳೊಂದಿಗೆ ಕಂಚಿನ ಪದಕವನ್ನು ಗಳಿಸಿತು. ಸ್ವಪ್ನಿಲ್ ಮತ್ತು ಐಶ್ವರಿ ಇಬ್ಬರೂ ಅರ್ಹತಾ ಈವೆಂಟ್‌ನಲ್ಲಿ ಒಂದೇ ರೀತಿಯ 591 ಸ್ಕೋರ್‌ಗಳನ್ನು ಗಳಿಸಿದ್ದರು.

ಇನ್ನು 10 ಮೀಟರ್ ಏರ್ ಪಿಸ್ತೂಲ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಇಶಾ ಸಿಂಗ್, ಪಾಲಕ್ ಗುಲಿಯಾ ಮತ್ತು ದಿವ್ಯಾ ಸುಬ್ಬರಾಜು ಥಡಿಗೊ ಅವರನ್ನೊಳಗೊಂಡ ಭಾರತ ಮಹಿಳಾ ತಂಡವು ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಈ ಮೂವರು 1731 ಪಾಯಿಂಟ್‌ಗಳೊಂದಿಗೆ ಮುಕ್ತಾಯಗೊಳಿಸಿದರು.

Breaking: ಅಕ್ಷರ್ ಪಟೇಲ್ ಔಟ್; ಭಾರತ ವಿಶ್ವಕಪ್ ತಂಡಕ್ಕೆ ಅಶ್ವಿನ್ ಎಂಟ್ರಿ..!

ಇಶಾ ಮತ್ತು ಪಾಲಕ್ ವೈಯಕ್ತಿಕ ಈವೆಂಟ್‌ನ ಫೈನಲ್‌ಗೆ ಪ್ರವೇಶ ಪಡೆದರು. ಇಶಾ 579 ಅಂಕಗಳೊಂದಿಗೆ ಮುಗಿಸಿದರೆ, ಪಾಲಕ್ 577 ಅಂಕಗಳನ್ನು ಗಳಿಸಿದರು. ಮತ್ತೊಂದೆಡೆ ದಿವ್ಯಾ 575 ಅಂಕಗಳೊಂದಿಗೆ 10ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ತೈವಾನ್​ನ ಯು ಹೆಂಗ್ ಲಿಯು, ಚಿಯಿಂಗ್ ವು ಮತ್ತು ಐ-ವೆನ್ ಯು 1723 ಅಂಕಗಳನ್ನು ಗಳಿಸಿ ಕಂಚಿನ ಪದಕವನ್ನು ಗೆದ್ದರು. ಇಶಾ, ಪಾಲಕ್ ಮತ್ತು ದಿವ್ಯಾ ಅವರ ಪ್ರದರ್ಶನದ ಹಿನ್ನೆಲೆಯಲ್ಲಿ ಭಾರತ ಈ ವರ್ಷ ಶೂಟಿಂಗ್‌ನಲ್ಲಿ 14ನೇ ಪದಕ ಗೆದ್ದುಕೊಂಡಿತು.

ಈ ಮೂಲಕ ಏಷ್ಯನ್ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಭಾರತವು ಶೂಟಿಂಗ್‌ನಲ್ಲಿ ಹೆಚ್ಚು ಪದಕಗಳನ್ನು ಗೆದ್ದ ದಾಖಲೆಯನ್ನು ಮುರಿದಿದೆ. 2006ರಲ್ಲಿ ಭಾರತ ದೋಹಾದಲ್ಲಿ 14 ಶೂಟಿಂಗ್ ಪದಕಗಳನ್ನು ಗೆದ್ದಿತ್ತು. ಇದೀಗ ಪುರುಷರ 5 ರೈಫಲ್ 3 ಪೊಸಿಷನ್‌ನಲ್ಲಿ ಚಿನ್ನ ಗೆದ್ದ ನಂತರ ಭಾರತ ಈ ದಾಖಲೆ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 am, Fri, 29 September 23