
ಐಪಿಎಲ್ 2022 ಟೂರ್ನಿ ಆರಂಭವಾಗಿ ಎರಡು ವಾರಗಳು ಕಳೆದಿದ್ದು ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಪ್ರತಿಯೊಂದು ಪಂದ್ಯ ಕೂಡ ಕುತೂಹಲ ಹೆಚ್ಚಿಸುತ್ತಿದೆ. ಭಾನುವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಹೈ ಸ್ಕೋರ್ ಪಂದ್ಯ ಕೂಡ ಅಭಿಮಾನಿಗಳನ್ನು ತುದಿ ಗಾಲಿನಲ್ಲಿ ನಿಲ್ಲಿಸಿತ್ತು. ಈ ಪಂದ್ಯದ ಮಧ್ಯೆ ಒಮ್ಮೆ ಎಲ್ಲರ ಕಣ್ಣು ಬಿದ್ದಿದ್ದು ಆ ಹುಡುಗಿಯ ಮೇಲೆ.

ಹೌದು, ಐಪಿಎಲ್ ನಿಂದ ಹೊಸ ಯುವ ಆಟಗಾರರು ಬೆಳಕಿಗೆ ಬರುವ ಜೊತೆಗೆ ಪಂದ್ಯ ನೋಡಲು ಬಂದ ಅಭಿಮಾನಿಗಳು ಕೂಡ ಫೇಮಸ್ ಆಗುತ್ತಿದ್ದಾರೆ. ಈ ಹಿಂದೆ ಐಪಿಎಲ್ ಪಂದ್ಯದ ಮಧ್ಯೆ ಅನೇಕ ಮಿಸ್ಟರಿ ಗರ್ಲ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.

ಇದೀಗ ಕೆಕೆಆರ್ ಹಾಗೂ ಡೆಲ್ಲಿ ನಡುವಣ ಪಂದ್ಯದಲ್ಲಿ ಕ್ಯಾಮೆರಾ ಮ್ಯಾನ್ ಕಣ್ಣಿಗೆ ಒಬ್ಬರು ಸುಂದರಿ ಕಂಡಿದ್ದು ಇವರ ಫೋಟೋ ಸಖತ್ ವೈರಲ್ ಆಗುತ್ತಿದೆ. ಇವರು ಯಾರೆಂದು ಅನೇಕರು ಹುಡುಕುತ್ತಿದ್ದಾರೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.

ಇವರ ಹೆಸರು ಆರ್ತಿ ಬೇಡಿ. ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಬೆಂಬಲ ನೀಡಲು ಇವರು ಮೈದಾನದಲ್ಲಿ ಹಾಜರಿದ್ದರು. ಆರ್ತಿ ಮೂಲತಃ ನಟಿಯಾಗಿದ್ದಾರೆ.

ಕೆಕೆಆರ್ ಡೆಲ್ಲಿ ನಡುವಣ ಪಂದ್ಯ ಆರಂಭಕ್ಕೂ ಮುನ್ನ ಇವರ ಇನ್ ಸ್ಟಾಗ್ರಾಮ್ ಫಾಲೋವರ್ಸ್ 30 ಸಾವಿರ ಹತ್ತಿರ ಇದ್ದವು. ಇದೀಗ ಪಂದ್ಯ ಮಧ್ಯೆ ಟಿವಿಯಲ್ಲಿ ಕಂಡ ಬಳಿಕ ಇವರ ಫಾಲೋವರ್ಸ್ 46 ಸಾವಿರ ದಾಟಿದೆ.

ಪಂದ್ಯದ ಮಧ್ಯೆ ಇನ್ ಸ್ಟಾದಲ್ಲಿ ಇವರು ಕೆಕೆಆರ್ ತಂಡಕ್ಕೆ ಬೆಂಬಲ ನೀಡುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದರು. ಅನೇಕ ಬ್ರ್ಯಾಂಡ್ ಗಳ ಜಾಹೀರಾತುಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.

ಕೇವಲ ನಟಿ ಮಾತ್ರವಲ್ಲದೆ ಇವರು ಉತ್ತಮ ಡ್ಯಾನ್ಸರ್ ಕೂಡ ಹೌದು. ಆರ್ತಿ ಇನ್ ಸ್ಟಾ ಗಮನಿಸಿದರೆ ಜಗತ್ತಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿರುವುದು ಕಾಣುತ್ತದೆ.