ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಜಾವೆಲಿನ್ ಥ್ರೋ ಎಫ್41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನವದೀಪ್ ಪ್ಯಾರಾಲಿಂಪಿಕ್ಸ್ನಲ್ಲಿ ಹೊಸ ದಾಖಲೆ ಬರೆದಿದ್ದು ವಿಶೇಷ. ಟೋಕಿಯೊ 2021 ಪ್ಯಾರಾಲಿಂಪಿಕ್ಸ್ನಲ್ಲಿ ಚೀನಾದ ಪೆಂಗ್ಕ್ಸಿಯಾಂಗ್ ಸನ್ 47.13m ದೂರಕ್ಕೆ ಜಾವೆಲಿನ್ ಎಸೆದಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ನವದೀಪ್ ಸಿಂಗ್ 47,32 ಮೀಟರ್ ದೂರಕ್ಕೆ ಎಸೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ವಿಶೇಷ ಎಂದರೆ ಈ ಸ್ಪರ್ಧೆಯಲ್ಲಿ ಆರಂಭದಲ್ಲಿ ನವದೀಪ್ ಬೆಳ್ಳಿ ಪದಕವನ್ನು ಗೆದ್ದಿದ್ದರು. ಆದರೆ ಇರಾನ್ನ ಬೀಟ್ ಸಡೆಗ್ ಅವರು ಕ್ರೀಡಾಹೀನ ನಡವಳಿಕೆಗಾಗಿ ಅನರ್ಹಗೊಂಡ ನಂತರ ನವದೀಪ್ ಅವರನ್ನು ಚಿನ್ನ ಪದಕಕ್ಕೆ ಅಪ್ಗ್ರೇಡ್ ಮಾಡಲಾಯಿತು. ಈ ಮೂಲಕ ನವದೀಪ್ ಸಿಂಗ್ ಭಾರತಕ್ಕೆ 7ನೇ ಚಿನ್ನದ ಪದಕ ತಂದುಕೊಟ್ಟರು.
ಸಿಮ್ರಾನ್ಗೆ ಕಂಚಿನ ಪದಕ:
ಮಹಿಳೆಯರ 200 ಮೀ ಟಿ12 ಓಟದ ಸ್ಪರ್ಧೆಯಲ್ಲಿ ಭಾರತದ ಸಿಮ್ರಾನ್ ಶರ್ಮಾ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 29 ಕ್ಕೆ ಏರಿದೆ. ಇನ್ನು ಕೆಲ ಸ್ಪರ್ಧೆಗಳು ಉಳಿದಿದ್ದು, ಹೀಗಾಗಿ ಈ ಬಾರಿ ಭಾರತೀಯರಿಂದ 30 ಪದಕಗಳನ್ನು ನಿರೀಕ್ಷಿಸಬಹುದು.
ಸಂ. | ಕ್ರೀಡಾಪಟು | ಕ್ರೀಡೆ | ಸ್ಪರ್ಧೆ | ಪದಕ |
---|---|---|---|---|
1 | ಅವನಿ ಲೇಖನಾ | ಶೂಟಿಂಗ್ | ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 | ಚಿನ್ನ |
2 | ಮೋನಾ ಅಗರ್ವಾಲ್ | ಶೂಟಿಂಗ್ | ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1 | ಕಂಚು |
3 | ಪ್ರೀತಿ ಪಾಲ್ | ಅಥ್ಲೆಟಿಕ್ಸ್ | ಮಹಿಳೆಯರ 100ಮೀ ಟಿ35 | ಕಂಚು |
4 | ಮನೀಶ್ ನರ್ವಾಲ್ | ಶೂಟಿಂಗ್ | ಪುರುಷರ 10 ಮೀ ಏರ್ ಪಿಸ್ತೂಲ್ SH1 | ಬೆಳ್ಳಿ |
5 | ರುಬಿನಾ ಫ್ರಾನ್ಸಿಸ್ | ಶೂಟಿಂಗ್ | ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 | ಕಂಚು |
6 | ಪ್ರೀತಿ ಪಾಲ್ | ಅಥ್ಲೆಟಿಕ್ಸ್ | ಮಹಿಳೆಯರ 200ಮೀ ಟಿ35 | ಕಂಚು |
7 | ನಿಶಾದ್ ಕುಮಾರ್ | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T47 | ಬೆಳ್ಳಿ |
8 | ಯೋಗೇಶ್ ಕಥುನಿಯಾ | ಅಥ್ಲೆಟಿಕ್ಸ್ | ಪುರುಷರ ಡಿಸ್ಕಸ್ ಥ್ರೋ F56 | ಬೆಳ್ಳಿ |
9 | ನಿತೇಶ್ ಕುಮಾರ್ | ಬ್ಯಾಡ್ಮಿಂಟನ್ | ಪುರುಷರ ಸಿಂಗಲ್ಸ್ SL3 | ಚಿನ್ನ |
10 | ತುಳಸಿಮತಿ ಮುರುಗೇಶನ್ | ಬ್ಯಾಡ್ಮಿಂಟನ್ | ಮಹಿಳೆಯರ ಸಿಂಗಲ್ಸ್ SU5 | ಬೆಳ್ಳಿ |
11 | ಮನಿಷಾ ರಾಮದಾಸ್ | ಬ್ಯಾಡ್ಮಿಂಟನ್ | ಮಹಿಳೆಯರ ಸಿಂಗಲ್ಸ್ SU5 | ಕಂಚು |
12 | ಸುಹಾಸ್ ಯತಿರಾಜ್ | ಬ್ಯಾಡ್ಮಿಂಟನ್ | ಪುರುಷರ ಸಿಂಗಲ್ಸ್ SL4 | ಬೆಳ್ಳಿ |
13 | ರಾಕೇಶ್ ಕುಮಾರ್ / ಶೀತಲ್ ದೇವಿ | ಬಿಲ್ಲುಗಾರಿಕೆ | ಮಿಶ್ರ ತಂಡ | ಕಂಚು |
14 | ಸುಮಿತ್ ಆಂಟಿಲ್ | ಅಥ್ಲೆಟಿಕ್ಸ್ | ಜಾವೆಲಿನ್ ಎಸೆತ F64 | ಚಿನ್ನ |
15 | ನಿತ್ಯ ಶ್ರೀ ಶಿವನ್ | ಬ್ಯಾಡ್ಮಿಂಟನ್ | ಮಹಿಳೆಯರ ಸಿಂಗಲ್ಸ್ SH6 | ಕಂಚು |
16 | ದೀಪ್ತಿ ಜೀವನಜಿ | ಅಥ್ಲೆಟಿಕ್ಸ್ | ಮಹಿಳೆಯರ 400 ಮೀ ಟಿ20 | ಕಂಚು |
17 | ಮರಿಯಪ್ಪನ್ ತಂಗವೇಲು | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T63 | ಕಂಚು |
18 | ಶರದ್ ಕುಮಾರ್ | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T63 | ಬೆಳ್ಳಿ |
19 | ಅಜೀತ್ ಸಿಂಗ್ | ಅಥ್ಲೆಟಿಕ್ಸ್ | ಪುರುಷರ ಜಾವೆಲಿನ್ ಎಸೆತ F46 | ಬೆಳ್ಳಿ |
20 | ಸುಂದರ್ ಸಿಂಗ್ ಗುರ್ಜರ್ | ಅಥ್ಲೆಟಿಕ್ಸ್ | ಪುರುಷರ ಜಾವೆಲಿನ್ ಎಸೆತ F46 | ಕಂಚು |
21 | ಸಚಿನ್ ಖಿಲಾರಿ | ಅಥ್ಲೆಟಿಕ್ಸ್ | ಪುರುಷರ ಶಾಟ್ ಪುಟ್ F46 | ಬೆಳ್ಳಿ |
22 | ಹರ್ವಿಂದರ್ ಸಿಂಗ್ | ಬಿಲ್ಲುಗಾರಿಕೆ | ಪುರುಷರ ವೈಯಕ್ತಿಕ ರಿಕರ್ವ್ | ಚಿನ್ನ |
23 | ಧರಂಬೀರ್ | ಅಥ್ಲೆಟಿಕ್ಸ್ | ಪುರುಷರ ಕ್ಲಬ್ ಥ್ರೋ F51 | ಚಿನ್ನ |
24 | ಪರ್ಣವ್ ಸೂರ್ಮಾ | ಅಥ್ಲೆಟಿಕ್ಸ್ | ಪುರುಷರ ಕ್ಲಬ್ ಥ್ರೋ F51 | ಬೆಳ್ಳಿ |
25 | ಕಪಿಲ್ ಪರ್ಮಾರ್ | ಜೂಡೋ | ಪುರುಷರ -60 ಕೆಜಿ J1 | ಕಂಚು |
26 | ಪ್ರವೀಣ್ ಕುಮಾರ್ | ಅಥ್ಲೆಟಿಕ್ಸ್ | ಪುರುಷರ ಎತ್ತರ ಜಿಗಿತ T64 | ಚಿನ್ನ |
27 | ಹೊಕಾಟೊ ಹೊಟೊಝೆ ಸೆಮಾ | ಅಥ್ಲೆಟಿಕ್ಸ್ | ಪುರುಷರ ಶಾಟ್ ಪುಟ್ F57 | ಕಂಚು |
28 | ಸಿಮ್ರಾನ್ ಶರ್ಮಾ | ಅಥ್ಲೆಟಿಕ್ಸ್ | ಮಹಿಳೆಯರ 200 ಮೀ ಟಿ12 | ಕಂಚು |
29 | ನವದೀಪ್ ಸಿಂಗ್ | ಅಥ್ಲೆಟಿಕ್ಸ್ | ಪುರುಷರ ಜಾವೆಲಿನ್ ಎಸೆತ F41 | ಚಿನ್ನ |
Published On - 7:44 am, Sun, 8 September 24