Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್

Suhas Yathiraj: ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ನಾಲ್ಕನೇ ಬೆಳ್ಳಿ ಪದಕ ಲಭಿಸಿದೆ. ಪುರುಷರ ಸಿಂಗಲ್ಸ್ ಎಸ್​ಎಲ್4 ಈವೆಂಟ್‌ನಲ್ಲಿ ಭಾರತದ ಅನುಭವಿ ಶಟ್ಲರ್ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಸುಹಾಸ್ ಪಾತ್ರರಾಗಿದ್ದಾರೆ.

Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಕನ್ನಡಿಗ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್
ಸುಹಾಸ್ ಯತಿರಾಜ್
Follow us
ಪೃಥ್ವಿಶಂಕರ
|

Updated on:Sep 02, 2024 | 10:43 PM

ಪ್ಯಾರಿಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ನಾಲ್ಕನೇ ಬೆಳ್ಳಿ ಪದಕ ಲಭಿಸಿದೆ. ಪುರುಷರ ಸಿಂಗಲ್ಸ್ ಎಸ್​ಎಲ್4 ಈವೆಂಟ್‌ನಲ್ಲಿ ಭಾರತದ ಅನುಭವಿ ಶಟ್ಲರ್ ಕನ್ನಡಿಗ ಸುಹಾಸ್ ಯತಿರಾಜ್ ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಏಕಪಕ್ಷೀಯವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಫ್ರಾನ್ಸ್​ನ ಲ್ಯೂಕಾಸ್ ಮಜೂರ್ ವಿರುದ್ಧ 0-2 (9-21, 13-21) ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ವಿಶ್ವ ನಂ.1 ಶ್ರೇಯಾಂಕದ ಸುಹಾಸ್ ಯತಿರಾಜ್ ಸತತ ಎರಡನೇ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಮೊದಲ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಬಾರಿ ಅಂದರೆ 2020 ರ ಟೋಕಿಯೋ ಒಲಿಂಪಿಕ್ಸ್​ನಲ್ಲೂ ಸುಹಾಸ್ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಸುಹಾಸ್ ಪದಕದ ಬಣ್ಣವನ್ನು ಚಿನ್ನವನ್ನಾಗಿ ಪರಿವರ್ತಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಫ್ರಾನ್ಸ್​ನ ಲ್ಯೂಕಾಸ್ ಮಜೂರ್ ವಿರುದ್ಧ ಸುಹಾಸ್​ಗೆ ಈ ಚಮತ್ಕಾರ ಮಾಡಲು ಸಾಧ್ಯವಾಗಲಿಲ್ಲ.

ಫೈನಲ್ ಪಂದ್ಯದಲ್ಲಿ ಸೋಲು

ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್‌ಎಲ್ 4 ವಿಭಾಗದ ಫೈನಲ್ ಪಂದ್ಯ ಸುಹಾಸ್ ಯತಿರಾಜ್ ಮತ್ತು ಫ್ರಾನ್ಸ್‌ನ ಲೂಕಾಸ್ ಮಜೂರ್ ನಡುವೆ ನಡೆಯಿತು. ಈ ಚಿನ್ನದ ಪದಕದ ಪಂದ್ಯದಲ್ಲಿ ಸುಹಾಸ್ ಸತತ ಎರಡು ಸೆಟ್‌ಗಳಲ್ಲಿ ಸೋತರು. ಸುಹಾಸ್‌ ಮೊದಲ ಸೆಟ್​ನಲ್ಲಿ 9-21 ರಿಂದ ಸೋಲನ್ನು ಎದುರಿಸಿದರೆ, ಎರಡನೇ ಸೆಟ್ ಅನ್ನು 13-21 ರಿಂದ ಸೋತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.

ಸುಹಾಸ್ ಯತಿರಾಜ್ ಯಾರು?

ಹುಟ್ಟಿನಿಂದಲೇ ಅಂಗವಿಕಲರಾಗಿರುವ ಸುಹಾಸ್ ಕರ್ನಾಟಕದ ಶಿವಮೊಗ್ಗದವರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮಾಡಿರುವ ಸುಹಾಸ್, ಬಾಲ್ಯದಿಂದಲೂ ಬ್ಯಾಡ್ಮಿಂಟನ್​ನಲ್ಲಿ ಆಸಕ್ತಿ ಹೊಂದಿದ್ದರು. ಸುಹಾಸ್ ಅವರ ಈ ಕನಸಿಗೆ ನೀರೇರದ ಮನೆಯವರು ಸುಹಾಸ್​ಗೆ ಎಲ್ಲಾ ರೀತಿಯಲ್ಲೂ ಪ್ರೋತ್ಸಾಹ ನೀಡಿದರು. ಆದರೆ 2005 ರಲ್ಲಿ ಸುಹಾಸ್ ಅವರ ತಂದೆಯ ನಿಧನ, ಅವರ ಜೀವನದಲ್ಲಿ ದೊಡ್ಡ ತೀರುವು ನೀಡಿತು. ತನ್ನ ತಂದೆಯ ಮರಣದ ನಂತರ, ಸುಹಾಸ್ ಅವರು ನಾಗರಿಕ ಸೇವೆಗೆ ಸೇರಬೇಕೆಂದು ನಿರ್ಧರಿಸಿದ್ದರು. ಇದಾದ ನಂತರ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು. 2007ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ಅವರು ಅಜಂಗಢದಲ್ಲಿ ಡಿಎಂ ಆಗಿದ್ದಾಗ ವೃತ್ತಿಪರವಾಗಿ ಬ್ಯಾಡ್ಮಿಂಟನ್ ಆರಂಭಿಸಿ ಇಂದು ಎರಡನೇ ಬಾರಿ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಪದಕಗಳ ಸಂಖ್ಯೆ 12ಕ್ಕೇರಿಕೆ

ಸುಹಾಸ್ ಅವರ ಬೆಳ್ಳಿ ಪದಕದೊಂದಿಗೆ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ ಒಟ್ಟು 12ಕ್ಕೇರಿದೆ. ಶೂಟರ್ ಅವನಿ ಲೆಖರಾ ಮತ್ತು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ಇದಲ್ಲದೇ ಭಾರತ ಇದುವರೆಗೆ 5 ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದಿದೆ. ಸದ್ಯ ಭಾರತಕ್ಕೆ ಇನ್ನೂ ಹಲವು ಪದಕದ ಪಂದ್ಯಗಳು ಬಾಕಿ ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 pm, Mon, 2 September 24

‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ