ಸೋಶಿಯಲ್ ಮೀಡಿಯಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್ಗಳು ಡಿಲೀಟ್ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನಾಯಕ ಕೊಹ್ಲಿಯ ಗಮನಕ್ಕೆ ತರದೇ ಆರ್ಸಿಬಿ ಫ್ರಾಂಚೈಸಿ, ಮಾಡಿದ್ದೇನು? ಕೊಹ್ಲಿ, ಚಹಲ್, ಎಬಿಡಿ ಆಶ್ಚರ್ಯ ವ್ಯಕ್ತಪಡಿಸಿದ್ದು ಯಾಕೆ ಅನ್ನೋದ್ರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ಓದಿ.
ಕಲರ್ಫುಲ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-13ಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಟ್ರೋಫಿ ಗೆಲ್ಲಲೇಬೇಕೆಂದು ಪಣತೊಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡೋಕೆ ಮುಂದಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆರ್ಸಿಬಿ ಪ್ರೊಫೈಲ್ ಫೋಟೋ ಇಲ್ಲ!
ಸಾಮಾಜಿಕ ಜಾಲ ತಾಣಗಳಲ್ಲಿ ಲೋಗೋ ಡಿಲೀಟ್ ಆಗಿರೋದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಸ್ವತಃ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಮಿಸ್ಟರ್ 360ಬ್ಯಾಟ್ಸ್ಮನ್ ಎಬಿ ವಿಲಿಯರ್ಸ್, ಸ್ಪಿನ್ನರ್ ಯಜ್ವಿಂದರ್ ಚಹಲ್ ಹಾಗೂ ಮೆಂಟರ್ ಮೈಕ್ ಹಸ್ಸೆನ್ಗೂ ಅಚ್ಚರಿಯನ್ನುಂಟು ಮಾಡಿದೆ.
ಕ್ಯಾಪ್ಟನ್ ಕೊಹ್ಲಿಗೆ ಶಾಕ್ ಕೊಟ್ಟ ಆರ್ಸಿಬಿ ಫ್ರಾಂಚೈಸಿ!
ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯ ಮುಗಿದ ನಂತ್ರ ಆರ್ಸಿಬಿ ಟ್ವಿಟರ್ ಪೇಜ್ ನೋಡಿರೋ ಕೊಹ್ಲಿ, ಕಳವಳವನ್ನ ವ್ಯಕ್ತಪಡಿಸಿದ್ದಾರೆ. ಪೇಜ್ನಲ್ಲಿ ಪೋಸ್ಟ್ಗಳು ಕಾಣುತ್ತಿಲ್ಲ. ಇದು ನನ್ನ ಗಮನಕ್ಕೂ ಬಂದಿಲ್ಲ. ಏನಾದ್ರೂ ಬೇಕಾದ್ರೆ ಸಹಾಯ ಪಡೆದುಕೊಳ್ಳಿ ಅಂತ ಕೊಹ್ಲಿ ಆರ್ಸಿಬಿ ಫ್ರಾಂಚೈಸಿಗೆ ಸಲಹೆ ಕೊಟ್ಟಿದ್ದಾರೆ.
ಕ್ಯಾಪ್ಟನ್ ಗಮನಕ್ಕೆ ಬಂದಿಲ್ಲ:
‘‘ನಾಯಕನ ಗಮನಕ್ಕಿಲ್ಲದೇ ಎಲ್ಲಾ ಪೋಸ್ಟ್ಗಳು ಡಿಲೀಟ್ ಆಗಿದೆ. ಏನಾದ್ರೂ ಬೇಕಾದ್ರೆ ಸಹಾಯ ಪಡೆದುಕೊಳ್ಳಿ.”
-ವಿರಾಟ್ ಕೊಹ್ಲಿ, ಆರ್ಸಿಬಿ ನಾಯಕ
ಕೇವಲ ನಾಯಕ ವಿರಾಟ್ ಕೊಹ್ಲಿಗೆ ಮಾತ್ರವಲ್ಲ, ಮಿಸ್ಟರ್ 360 ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಸಹ ಅಚ್ಚರಿಯನ್ನ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಖಾತೆಗಳಿಗೆ ಏನಾಗಿದೆ.? ಅಂತ ಪ್ರಶ್ನೆ ಮಾಡಿದ್ದಾರೆ.
ಖಾತೆಗಳಿಗೆ ಏನಾಗಿದೆ?
‘‘ಆರ್ಸಿಬಿ ತಂಡದ ಖಾತೆಗಳಿಗೆ ಏನಾಗಿದೆ? ಬಹುಶಃ ಇದೊಂದು ಸ್ಟ್ರಾಟಜಿ ಬ್ರೇಕ್ ಆಗಿರಬಹುದು!”
-ಎಬಿ ಡಿವಿಲಿಯರ್ಸ್, ಆರ್ಸಿಬಿ ಆಟಗಾರ
ಇನ್ನೂ ಲೋಗೋ ಡಿಲೀಟ್ ಆಗಿರೋದು ಆರ್ಸಿಬಿ ತಂಡ ಸ್ಪಿನ್ನರ್ ಯಜ್ವಿಂದರ್ ಚಹಲ್ಗೂ ಗಲಿಬಿಲಿಯುಂಟು ಮಾಡಿದೆ. ಆರ್ಸಿಬಿ ಫ್ರಾಂಚೈಸಿ ಇದ್ಯಾವ ರೀತಿಯ ಗೂಗ್ಲಿ ಬಿಟ್ಟಿದೆ ಅಂತ ಪ್ರಶ್ನೆ ಮಾಡಿದ್ದಾರೆ.
ಪೋಸ್ಟ್ ಎಲ್ಲಿ ಹೋದವು?
‘‘ಆರ್ಸಿಬಿ ಫ್ರಾಂಚೈಸಿಯಿಂದ ಇದು ಯಾವ ರೀತಿಯ ಗೂಗ್ಲಿ.? ಇನ್ಸ್ಟಾಗ್ರಾಂನ ಪ್ರೊಫೈಲ್ ಫೋಟೋ ಹಾಗೂ ಪೋಸ್ಟ್ಗಳು ಎಲ್ಲಿ ಹೋದವು?”
– ಯಜ್ವಿಂದರ್ ಚಹಲ್, ಆರ್ಸಿಬಿ ಆಟಗಾರ
ಬೆಂಗಳೂರು ತಂಡ ನೂತನ ಮೆಂಟರ್ ಆಗಿರೋ ಮೈಕ್ ಹಸ್ಸೆನ್ಗೂ ಕೂಡ, ಇಲ್ಲಿ ಏನ್ ನಡೀತಿದೆ ಅನ್ನೋ ಬಗ್ಗೆ ಗೊತ್ತಿಲ್ಲ. ಈ ಕುರಿತು ಟ್ವೀಟ್ ಮಾಡಿರೋ ಮೈಕ್ ಹಸ್ಸೆನ್, ಪ್ರೊಫೈಲ್ ಚಿತ್ರಗಳಿಗೆ ಏನಾಗಿದೆ ಅಂತ ಪ್ರಶ್ನಿಸಿದ್ದಾರೆ.
ಪೋಸ್ಟ್ಗಳಿಗೆ ಏನಾಗಿದೆ?
‘‘ಆರ್ಸಿಬಿ ಫ್ರಾಂಚೈಸಿ ಎಲ್ಲವೂ ಸರಿ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳಿಗೆ ಏನಾಗಿದೆ?
– ಮೈಕ್ ಹಸ್ಸೆನ್, ಆರ್ಸಿಬಿ ಮೆಂಟರ್
ಹೊಸ ಲೋಗೋ ಬಿಡುಗಡೆಗೆ ಕ್ಷಣಗಣನೆ!
ಹೊಸ ದಶಕ.. ಹೊಸ ಆರ್ಸಿಬಿಗೆ ಕೌಂಟ್ಡೌನ್!
ಇನ್ನು ನಿನ್ನೆ ಆರ್ಸಿಬಿ ಪ್ರಾಂಚೈಸಿ ತಮ್ಮ ಇನ್ಸ್ಟಾದಲ್ಲಿ ಹೊಸ ಡಿಕೇಡ್ ಮತ್ತು ಹೊಸ ಆರ್ಸಿಬಿ ಎಂದು ಪೋಸ್ಟ್ ಮಾಡಿದೆ. ಹೊಸ ದಶಕದ ಹೊಸ ಆರ್ಸಿಬಿ ವ್ಯಾಲೆಂಟೆನ್ಸ್ ದಿನವಾದ ಇವತ್ತು ತನ್ನ ಹೊಸ ಹೆಸರನ್ನ ರಿವೀಲ್ ಮಾಡೋಕೆ ಆರ್ಸಿಬಿ ರೆಡಿಯಾಗಿದೆ. ಪ್ರೇಮಿಗಳ ದಿನವಾದ ಇಂದು ಹೊಚ್ಚ ಹೊಸ ರಂಗಲ್ಲಿ ಆರ್ಸಿಬಿ ಹೆಸ್ರು ರಿವೀಲ್ ಮಾಡೋಕೆ ಪ್ರಾಂಚೈಸಿ ಪ್ಲ್ಯಾನ್ ಮಾಡಿದೆ.
ಒಟ್ನಲ್ಲಿ ಕಳೆದ 12ಸೀಸನ್ನಿಂದ ಕಪ್ ಗೆಲ್ಲೋದಕ್ಕೆ ಕಸರತ್ತು ನಡೆಸ್ತಿರೋ ಆರ್ಸಿಬಿ ತಂಡ ಲೋಗೋ ಸೇರಿ ಹಲವು ಬದಲಾವಣೆ ಮುಂದಾಗಿದೆ. ಪ್ರೇಮಿಗಳ ದಿನವಾದ ಇಂದು ಆರ್ಸಿಬಿಗೆ ಯಾವ ಹೆಸ್ರು ಇಡಬಹುದು ಅಂತ ಅಭಿಮಾನಿಗಳು ಕೂತುಹಲದಿಂದ ಕಾಯುವಂತೆ ಮಾಡಿದೆ.
Published On - 10:24 am, Fri, 14 February 20