ನ್ಯೂಯಾರ್ಕ್: ಕೊರೊನಾ ಸಂಕಷ್ಟದ ನಡುವೆಯೂ ಭಾರತಕ್ಕೆ ಕ್ರೀಡೆಯಲ್ಲಿ ಖುಷಿಯ ಸುದ್ದಿಯೊಂದು ಅಮೆರಿಕದಿಂದ ಬಂದಿದೆ. ಇದೇ ಮೊದಲ ಬಾರಿಗೆ 2013ರ ನಂತರ ಭಾರತದ ಟೆನಿಸ್ ಆಟಗಾರರೊಬ್ಬರು ಗ್ರಾಂಡಸ್ಲಾಮ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ತಲುಪಿದ ಸಾಧನೆ ಮಾಡಿದ್ದಾರೆ.
ಭಾರತದ ಉದಯೋನ್ಮುಖ ಆಟಗಾರ ಸಮೀತ್ ನಗಾಲ್ ಯುಎಸ್ ಓಪನ್ ಗ್ರಾಂಡ್‌ಸ್ಲಾಮ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಕೋಟ್ಯಂತರ ಭಾರತೀಯರಿಗೆ ಸಂತಸದ ಸಿಹಿ ನೀಡಿದ್ದಾರೆ.
ಮೊದಲ ಸುತ್ತಿನ ಪಂದ್ಯದಲ್ಲಿ ಸಮೀತ್ ನಗಾಲ್ ಅವರು, ಅಮೆರಿಕದವರೇ ಆದ ಬ್ರಾಡ್ಲೀ ಕ್ಲಾನ್ ಅವರನ್ನು 6-1, 6-3, 3-6, 6-1ರಿಂದ ಸೋಲಿಸುವ ಮೂಲಕ ತಮ್ಮ ಜೀವನದ ಮೊದಲ ಗ್ರಾಂಡ್ ಸ್ಲಾಮ್ ಟೂರ್ನಿಯ ಜಯ ಸಾಧಿಸಿದ್ದಾರೆ.
ಭಾರತದ ಮಾಜಿ ಟೆನಿಸ್ ಆಟಗರಾರ ಸೋಮದೇವ್ ದೇವವರ್ಮನ್ 2013ರಲ್ಲಿ ಕೊನೆಯ ಬಾರಿಗೆ ಗ್ರಾಂಡ್‌ಸ್ಲಾಮ್ ಟೂರ್ನಿಯ ಎರಡನೇ ಸುತ್ತು ತಲುಪಿದ ಭಾರತದ ಆಟಗಾರ. ಅವರು ಯುಎಸ್ ಓಪನ್, ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೇಂಚ್ ಓಪನ್‌ಗಳಲ್ಲಿ ಎರಡನೇ ಸುತ್ತು ತಲುಪಿದ್ದರು.
ಸಮೀತ್ ಈಗ ತಮ್ಮ ಎರಡನೇ ಸುತ್ತಿನ ಪಂದ್ಯವನ್ನು ಗುರುವಾರ ಆಡಲಿದ್ದು, ಕೋಟ್ಯಂತರ ಭಾರತೀಯ ಗಮನ ಈಗ ಗುರುವಾರದ ಪಂದ್ಯದ ಮೇಲೆ ನೆಟ್ಟಿದೆ.
My first Slam win. It was definitely a special moment and a match I will not forget. Thank you everyone for the wishes❤️
Next match on Thursday, gonna be a fun one ?
Special thanks to my team – @vkfofficial @imVkohli @SOLINCOsports @IndianOilcl @lottosport pic.twitter.com/u6CqeJa34n
— Sumit Nagal (@nagalsumit) September 2, 2020
Sumit Nagal was literally all over the court today ?♂️@nagalsumit I #USOpen pic.twitter.com/M3D3f2aHIn
— US Open Tennis (@usopen) September 1, 2020
Published On - 1:46 pm, Wed, 2 September 20