ಡಬ್ಲಿನ್: ಐರ್ಲೆಂಡ್‌ನ ಆಲ್‌ರೌಂಡರ್ ಕೆವಿನ್ ಓ ಬ್ರಯಾನ್ ಅಂದ್ರೆ ಬಹುತೇಕ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತಿರೋ ಹೆಸರೆ. 2011ರ ವಿಶ್ವಕಪ್‌ನಲ್ಲಿ ಬೆಂಗಳೂರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಏಕಾಂಗಿಯಾಗಿ ಇಂಗ್ಲೆಂಡ್‌ಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಬಿಗ್ ಹಿಟ್ಟರ್ ಈ ಕೆವಿನ್. ಈಗ ತಮ್ಮ ಬಿಗ್ ಹಿಟ್ಟಿಂಗ್ ಸಾಮರ್ಥ್ಯದ ರುಚಿಯನ್ನ ಖುದ್ದು ಅವರೇ ಅನುಭವಿಸಬೇಕಾಗಿ ಬಂದಿದೆ.
ಹೌದು ಕೆವಿನ್ ಓ ಬ್ರಯಾನ್ ಕ್ರಿಕೆಟ್‌ನ ಕೆಲವೇ ಕೆಲ ಬಿಗ್ ಹಿಟ್ಟರ್ ಬ್ಯಾಟ್ಸಮನ್‌ಗಳಲ್ಲಿ ಒಬ್ಬರು. ಬ್ಯಾಟ್ ಹಿಡಿದು ಬಾರಿಸೋಕೆ ಶುರು ಹಚ್ಚಿಕೊಂಡ್ರೆ ಸಿಕ್ಸರ್ ಮೇಲೆ ಸಿಕ್ಸರ್ ಸುರಿಮಳೆಯೇ ಅಗುತ್ತೆ. ಐರ್ಲೆಂಡ್‌ನ ದೇಸಿ ಟಿ20 ಪಂದ್ಯವೊಂದರಲ್ಲಿ ಲೀನ್‌ಸ್ಟರ್ ಲೈಟನಿಂಗ್ ಪರ ಆಡುತ್ತಾ ನಾರ್ತ್ ವೆಸ್ಟ್ ವಾರಿಯರ್ಸ್ ಎನ್ನೋ ತಂಡದ ವಿರುದ್ಧ ಡಬ್ಲಿನ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ಬಾರಿಸಿದ ಸಿಕ್ಸರ್‌ಗೆ ಸ್ವತಃ ಅವರ ಕಾರ್ ಪುಡಿ ಪುಡಿಯಾಗಿದೆ.
ಆರಂಭಿಕನಾಗಿ ಬ್ಯಾಟಿಂಗ್‌ಗೆ ಇಳಿದ ಕೆವಿನ್ ಕೇವಲ 37 ಎಸೆತಗಳಲ್ಲಿ 8 ಸಿಕ್ಸರ್ ಮೂಲಕ 82ರನ್ ಗಳಿಸಿದ್ದಾರೆ. ಹೀಗೆ ಬಾರಿಸಿದ ಸಿಕ್ಸರ್‌ಗಳಲ್ಲಿ ಒಂದು ಸ್ಟೇಡಿಯಮ್ ಹೊರಗಿದ್ದ ಕಾರ್ ಪಾರ್ಕ್‌ನಲ್ಲಿ ಬಿದ್ದಿದೆ. ಅದೂ ಸ್ವತಃ ಕೇವಿನ್ ಅವರ ಕಾರ್ ಮೇಲೆಯೇ. ಬಾಲ್ ಬಿದ್ದ ರಭಸಕ್ಕೆ ಕಾರ್‌ನ ಹಿಂಬದಿಯ ಗ್ಲಾಸ್ ಚಿಂದಿಯಾಗಿದೆ.
ಈ ವಿಷಯವನ್ನ ಫೋಟೋ ಸಮೇತ ಸ್ವತಃ ಕ್ರಿಕೆಟ್ ಐರ್ಲೆಂಡ್ ಟ್ವೀಟ್ ಮಾಡಿದೆ. ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಐಸಿಸಿ ಕೂಡಾ ರೀಟ್ವೀಟ್ ಮಾಡಿದ್ದು ಕೆವಿನ್ ಓ ಬ್ರಯಾನ್‌ಗೆ ಗೇಲಿ ಮಾಡಿವೆ. ಅಷ್ಟೇ ಅಲ್ಲ ಈ ಘಟನೆ ಈಗ ಕ್ರಿಕೆಟ್ ವಲಯದದಲ್ಲಿ ಭಾರೀ ತಮಾಷೆಯ ವಸ್ತುವಾಗಿಬಿಟ್ಟಿದೆ.
?: KEVIN O’BRIEN SMASHES SIX…
…and his own car window. Seriously.#IP2020 | @TestTriangle ☘️? pic.twitter.com/dKbfDRHrjY
— Cricket Ireland (@Irelandcricket) August 27, 2020
What ever happened to the 'Luck of the Irish'? ? https://t.co/nDsVx6gI8D
— cricket.com.au (@cricketcomau) August 28, 2020
Kevin O'Brien in the Inter-Provincial Series match on Thursday:
✳️ 82 runs in 37 balls
✳️ 8️⃣ x 6s
✳️ Broke his own car window with a six ?? pic.twitter.com/7qtYHRMCRq— ICC (@ICC) August 28, 2020