ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಪ್ರವಾಸ: ಕೊಹ್ಲಿ ವಾಸ್ತವ್ಯಕ್ಕೆ ರಗ್ಬಿ ದಿಗ್ಗಜನ ಪೆಂಟ್​ಹೌಸ್

|

Updated on: Nov 13, 2020 | 3:56 PM

ಯುಎಇನಲ್ಲಿ ಐಪಿಎಲ್ ಮುಗಿಸಿರೋ ಟೀಮ್ ಇಂಡಿಯಾ ಆಟಗಾರರು, ದುಬೈನಿಂದಲೇ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಈಗಾಗಲೇ ಕೊಹ್ಲಿ ಬಾಯ್ಸ್ ಆಸ್ಟ್ರೇಲಿಯಾದ ಸಿಡ್ನಿಯನ್ನ ತಲುಪಿದ್ದಾರೆ. ಗುರುವಾರ ಸಿಡ್ನಿಗೆ ಬಂದಿಳಿದಿರುವ ಕೊಹ್ಲಿ ನಾಯಕತ್ವದ 25 ಆಟಗಾರರ ಭಾರತ ತಂಡವನ್ನು ಕೋವಿಡ್ ತಡೆ ನಿಯಮದ ಪ್ರಕಾರ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ. ಪುಲ್​ಮ್ಯಾನ್ ಹೋಟೆಲ್‌ನಲ್ಲಿ pullman hotel ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೂ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲೂ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ರಗ್ಬಿ ದಂತಕತೆ ಬ್ರಾಡ್ ಪಿಟ್ಲರ್ ವಿಶೇಷ ಪೆಂಟ್‌ಹೌಸ್‌ ಅನ್ನು […]

ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಪ್ರವಾಸ: ಕೊಹ್ಲಿ ವಾಸ್ತವ್ಯಕ್ಕೆ ರಗ್ಬಿ ದಿಗ್ಗಜನ ಪೆಂಟ್​ಹೌಸ್
Follow us on

ಯುಎಇನಲ್ಲಿ ಐಪಿಎಲ್ ಮುಗಿಸಿರೋ ಟೀಮ್ ಇಂಡಿಯಾ ಆಟಗಾರರು, ದುಬೈನಿಂದಲೇ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ಈಗಾಗಲೇ ಕೊಹ್ಲಿ ಬಾಯ್ಸ್ ಆಸ್ಟ್ರೇಲಿಯಾದ ಸಿಡ್ನಿಯನ್ನ ತಲುಪಿದ್ದಾರೆ. ಗುರುವಾರ ಸಿಡ್ನಿಗೆ ಬಂದಿಳಿದಿರುವ ಕೊಹ್ಲಿ ನಾಯಕತ್ವದ 25 ಆಟಗಾರರ ಭಾರತ ತಂಡವನ್ನು ಕೋವಿಡ್ ತಡೆ ನಿಯಮದ ಪ್ರಕಾರ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ.

ಪುಲ್​ಮ್ಯಾನ್ ಹೋಟೆಲ್‌ನಲ್ಲಿ pullman hotel ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗೂ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲಾಗಿದೆ. ಅದ್ರಲ್ಲೂ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ರಗ್ಬಿ ದಂತಕತೆ ಬ್ರಾಡ್ ಪಿಟ್ಲರ್ ವಿಶೇಷ ಪೆಂಟ್‌ಹೌಸ್‌ ಅನ್ನು penthouse ಕೊಹ್ಲಿಗೆ ನೀಡಲಾಗಿದೆ. ಪುಲ್​ಮ್ಯಾನ್ ಹೊಟೇಲ್​ನಲ್ಲಿ ಬ್ರಾಡ್ ಪಿಟ್ಲರ್​ಗಾಗಿ ಪೆಂಟ್​ಹೌಸ್​ ಒಂದನ್ನ ಮೀಸಲಿಡಲಾಗಿತ್ತು. ಇದನ್ನ ಈಗ ನಾಯಕ ಕೊಹ್ಲಿಗೆ ನೀಡಲಾಗಿದೆ ಎಂದು ಆಸ್ಟ್ರೇಲಿಯಾ ಇಂಗ್ಲೀಷ್ ಪತ್ರಿಕೆ ವರದಿ ಮಾಡಿದೆ.

ಟೀಮ್ ಇಂಡಿಯಾ ಆಟಗಾರರು ಸಿಡ್ನಿಯಲ್ಲಿ ಎರಡು ವಾರಗಳ ಕಾಲ ಅಂದ್ರೆ, 14 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಲಿದ್ದಾರೆ. ಸದ್ಯ ಬಯೊ ಬಬಲ್ ನಿಯಮದಲ್ಲಿರೋ bio bubble ಟೀಮ್ ಇಂಡಿಯಾ ಆಟಗಾರರಿಗೆ, ಬ್ಲ್ಯಾಕ್‌ಟೌನ್ ಅಂತಾರಾಷ್ಟ್ರೀಯ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಪ್ರಾಕ್ಟೀಸ್ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ಹಾಗೇ ಐಪಿಎಲ್‌ನಲ್ಲಿ ಆಡಿದ್ದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್‌, ಌಡಮ್ ಜಂಪಾ, ಆರೋನ್ ಫಿಂಚ್ ಕೂಡ ಆಸ್ಟ್ರೇಲಿಯಾ ತಲುಪಿದ್ದಾರೆ. ಟೀಮ್ ಇಂಡಿಯಾ ನಾಯಕ ಕೊಹ್ಲಿ, ಜನವರಿಯಲ್ಲಿ ತಂದೆಯಾಗುತ್ತಿರೋ ಹಿನ್ನೆಲೆಯಲ್ಲಿ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾತ್ರ ಟೀಮ್ ಇಂಡಿಯಾವನ್ನ ಪ್ರತಿನಿಧಿಸಲಿದ್ದಾರೆ. ಬಳಿಕ ಪಿತೃತ್ವದ ರಜೆ ಮೇಲೆ ಕೊಹ್ಲಿ ತವರಿಗೆ ಬರಲಿದ್ದಾರೆ.