ಇಂದಿನಿಂದ ಫಿಫಾ ವಿಶ್ವಕಪ್​ ಟೂರ್ನಿ ಆರಂಭ!

Updated on: Jun 11, 2026 | 8:56 AM

FIFA World Cup 2026: ಮೆಕ್ಸಿಕೋ ನಗರವು ಭಾರತಕ್ಕಿಂತ 11.5 ಗಂಟೆಗಳಷ್ಟು ಹಿಂದೆ ಇರುವುದರಿಂದ, ಅಲ್ಲಿ ಜೂನ್ 11 ರ ಮಧ್ಯಾಹ್ನ ನಡೆಯುವ ಉದ್ಘಾಟನಾ ಪಂದ್ಯವು ಭಾರತದಲ್ಲಿ ಶುಕ್ರವಾರ, ಜೂನ್ 12, 2026 ರ ಮುಂಜಾನೆ 12:30 ಕ್ಕೆ ನೇರಪ್ರಸಾರವಾಗುತ್ತದೆ. ಇದೇ ಕಾರಣಕ್ಕೆ ಭಾರತದ ವೇಳಾಪಟ್ಟಿಗಳಲ್ಲಿ ಜೂನ್ 12 ರ ದಿನಾಂಕ ಕಾಣಿಸಿಕೊಳ್ಳುತ್ತಿದೆ.

ವಿಶ್ವದ ಅತ್ಯಂತ ದೊಡ್ಡ ಫುಟ್‌ಬಾಲ್ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026 ಆರಂಭಕ್ಕೆ ದಿನಗಣನೆ ಮುಗಿದಿದೆ. ಅದರಂತೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಜಂಟಿಯಾಗಿ ಆಯೋಜಿಸಲಿರುವ ಫಿಫಾ ವಿಶ್ವಕಪ್​ಗೆ ಇಂದು ಚಾಲನೆ ದೊರೆಯಲಿದೆ. ಆದರೆ ಕ್ರೀಡಾಭಿಮಾನಿಗಳಲ್ಲಿ ಈ ಬಾರಿಯ ವಿಶ್ವಕಪ್ ಜೂನ್ 11 ಕ್ಕೆ ಶುರುವಾಗುತ್ತದೆಯೇ ಅಥವಾ ಜೂನ್ 12 ಕ್ಕೆ ಎಂಬ ಸಣ್ಣ ಗೊಂದಲವಿದೆ. ಇದಕ್ಕೆ ಮುಖ್ಯ ಕಾರಣ ಉತ್ತರ ಅಮೆರಿಕ ಮತ್ತು ಭಾರತದ ನಡುವಿನ ಭೌಗೋಳಿಕ ಸಮಯದ ವ್ಯತ್ಯಾಸ.

ಆತಿಥೇಯ ದೇಶವಾದ ಮೆಕ್ಸಿಕೋದಲ್ಲಿ ಪಂದ್ಯಾವಳಿಯು ಗುರುವಾರ, ಜೂನ್ 11, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ.

ಮೆಕ್ಸಿಕೋ ನಗರವು ಭಾರತಕ್ಕಿಂತ 11.5 ಗಂಟೆಗಳಷ್ಟು ಹಿಂದೆ ಇರುವುದರಿಂದ, ಅಲ್ಲಿ ಜೂನ್ 11 ರ ಮಧ್ಯಾಹ್ನ ನಡೆಯುವ ಉದ್ಘಾಟನಾ ಪಂದ್ಯವು ಭಾರತದಲ್ಲಿ ಶುಕ್ರವಾರ, ಜೂನ್ 12, 2026 ರ ಮುಂಜಾನೆ 12:30 ಕ್ಕೆ ನೇರಪ್ರಸಾರವಾಗುತ್ತದೆ. ಇದೇ ಕಾರಣಕ್ಕೆ ಭಾರತದ ವೇಳಾಪಟ್ಟಿಗಳಲ್ಲಿ ಜೂನ್ 12 ರ ದಿನಾಂಕ ಕಾಣಿಸಿಕೊಳ್ಳುತ್ತಿದೆ.

ಮೆಕ್ಸಿಕೋದ ಐತಿಹಾಸಿಕ ಎಸ್ಟಾಡಿಯೊ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮೊದಲ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ಮತ್ತು ಸೌತ್ ಆಫ್ರಿಕಾ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯವನ್ನು ಭಾರತೀಯ ಕಾಲಮಾನ ಮಧ್ಯರಾತ್ರಿ 12.30 AM ವೀಕ್ಷಿಸಬಹುದು.

 

Published on: Jun 11, 2026 08:53 AM
Follow Us
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More