ಟಿಟ್ವೆಂಟಿ ಸರಣಿ ನಮ್ಗೆ.. ಏಕದಿನ ಸರಣಿ ಅವರಿಗೆ.. ಟೆಸ್ಟ್ ಯಾರಿಗೆ?

|

Updated on: Feb 18, 2020 | 12:49 PM

ನ್ಯೂಜಿಲೆಂಡ್ ವಿರುದ್ಧ ಟಿಟ್ವೆಂಟಿ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯನ್ನ ಕೈಚೆಲ್ಲಿತ್ತು. ಕಿವೀಸ್ ನೆಲದಲ್ಲಿ ಟಿಟ್ವೆಂಟಿ ಸರಣಿಯಲ್ಲಾದ ಅವಮಾನಕ್ಕೆ ಏಕದಿನ ಸರಣಿ ಗೆದ್ದ ಕಪ್ಪುಕುದುರೆಗಳು, ಕೊಹ್ಲಿ ಪಡೆಗೆ ಸರಿಯಾಗೇ ತಿರುಗೇಟು ನೀಡಿದ್ವು. ಟಿಟ್ವೆಂಟಿ ಸರಣಿ ನಮ್ಗೆ.. ಏಕದಿನ ಸರಣಿ ಅವರಿಗೆ.. ಟೆಸ್ಟ್ ಯಾರಿಗೆ? ಟಿಟ್ವೆಂಟಿ ಸರಣಿಯನ್ನ 5-0 ಅಂತರದಲ್ಲಿ ಗೆದ್ದ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿತ್ತು. ಇದೇ ಜೋಷ್​ನಲ್ಲಿ ಏಕದಿನ ಸರಣಿ ಎದುರಿಸಿದ್ದ ಭಾರತ, ಒಂದೇ ಒಂದು ಪಂದ್ಯವನ್ನ ಗೆಲ್ಲೋಕೆ ಸಾಧ್ಯವಾಗಿರ್ಲಿಲ್ಲ. ಏಕದಿನ ಸರಣಿಯಲ್ಲಿ […]

ಟಿಟ್ವೆಂಟಿ ಸರಣಿ ನಮ್ಗೆ.. ಏಕದಿನ ಸರಣಿ ಅವರಿಗೆ.. ಟೆಸ್ಟ್ ಯಾರಿಗೆ?
Follow us on

ನ್ಯೂಜಿಲೆಂಡ್ ವಿರುದ್ಧ ಟಿಟ್ವೆಂಟಿ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ ಏಕದಿನ ಸರಣಿಯನ್ನ ಕೈಚೆಲ್ಲಿತ್ತು. ಕಿವೀಸ್ ನೆಲದಲ್ಲಿ ಟಿಟ್ವೆಂಟಿ ಸರಣಿಯಲ್ಲಾದ ಅವಮಾನಕ್ಕೆ ಏಕದಿನ ಸರಣಿ ಗೆದ್ದ ಕಪ್ಪುಕುದುರೆಗಳು, ಕೊಹ್ಲಿ ಪಡೆಗೆ ಸರಿಯಾಗೇ ತಿರುಗೇಟು ನೀಡಿದ್ವು.

ಟಿಟ್ವೆಂಟಿ ಸರಣಿ ನಮ್ಗೆ.. ಏಕದಿನ ಸರಣಿ ಅವರಿಗೆ.. ಟೆಸ್ಟ್ ಯಾರಿಗೆ?
ಟಿಟ್ವೆಂಟಿ ಸರಣಿಯನ್ನ 5-0 ಅಂತರದಲ್ಲಿ ಗೆದ್ದ ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ ಮಾಡಿತ್ತು. ಇದೇ ಜೋಷ್​ನಲ್ಲಿ ಏಕದಿನ ಸರಣಿ ಎದುರಿಸಿದ್ದ ಭಾರತ, ಒಂದೇ ಒಂದು ಪಂದ್ಯವನ್ನ ಗೆಲ್ಲೋಕೆ ಸಾಧ್ಯವಾಗಿರ್ಲಿಲ್ಲ. ಏಕದಿನ ಸರಣಿಯಲ್ಲಿ ಅತ್ಯುದ್ಭುತ ಆಟವಾಡಿದ ಕಿವೀಸ್ ತಂಡ 3-0 ಅಂತರದಲ್ಲಿ ಸರಣಿ ಗೆದ್ದು, ಭಾರತನ್ನ ವೈಟ್​ವಾಷ್ ಮಾಡಿತ್ತು.

ಏಕದಿನ ಸರಣಿಯಲ್ಲಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳೋದಕ್ಕೆ ಕೊಹ್ಲಿ ಪಡೆ ಈಗ ಟೆಸ್ಟ್ ಸರಣಿಯನ್ನ ಎದುರು ನೋಡ್ತಿದೆ. ಇದೇ ಫೆಬ್ರವರಿ 21ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಟೆಸ್ಟ್ ಸರಣಿ ಶುರುವಾಗಲಿದೆ. ಮೊದಲ ಟೆಸ್ಟ್ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡವನ್ನ ಪ್ರಕಟಿಸಲಾಗಿದ್ದು , ನ್ಯೂಜಿಲೆಂಡ್ ತಂಡದ ಬ್ರಹ್ಮಾಸ್ತ್ರ ಈಗ ಕೇನ್ ಬಳಗಕ್ಕೆ ರೀ ಎಂಟ್ರಿಕೊಟ್ಟಿದ್ದಾನೆ. ಆ ಬ್ರಹ್ಮಾಸ್ತ್ರ ಬೇಱವುದು ಅಲ್ಲ, ಎಡಗೈ ವೇಗಿ ಟ್ರೆಂಟ್ ಬೌಲ್ಟ್.

ಟೆಸ್ಟ್ ಕ್ರಿಕೆಟ್​ನಲ್ಲಿ ಕೇನ್ ಬಳಗಕ್ಕೆ ಬಂತು ನೂರಾನೆ ಬಲ!
ನಿಜ.. ಗಾಯದ ಸಮಸ್ಯೆಯಿಂದಾಗಿ ಟ್ರೆಂಟ್ ಬೌಲ್ಟ್ ಟೀಮ್ ಇಂಡಿಯಾ ವಿರುದ್ಧದ ಟಿಟ್ವೆಂಟಿ ಮತ್ತು ಏಕದಿನ ಸರಣಿಯನ್ನ ಮಿಸ್ ಮಾಡಿಕೊಂಡಿದ್ದ. ಆದ್ರೀಗ, ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರೋ ಬೌಲ್ಟ್ ಟೆಸ್ಟ್ ತಂಡಕ್ಕೆ ಎಂಟ್ರಿಕೊಟ್ಟಿದ್ದಾನೆ. ಬೌಲ್ಟ್ ಎಂಟ್ರಿಯಿಂದ ಕೇನ್ ಬಳಗಕ್ಕೆ ನೂರಾನೆ ಬಲ ಬಂದಷ್ಟೇ ಖುಷಿಯಾಗಿದೆ.

ಬೌಲ್ಟ್ ಎಂಟ್ರಿಯಿಂದ ಕ್ಯಾಪ್ಟನ್ ಕೊಹ್ಲಿಗೆ ಶುರುವಾಯ್ತು ನಡುಕ!
ಕಿಂಗ್ ಕೊಹ್ಲಿಗೆ ಬೌಲ್ಟ್ ಆಗಮನದಿಂದ ಭಯ ಶುರುವಾಗಿದೆ. ಕಾರಣ ಬೌಲ್ಟ್ ಎಡಗೈ ಸ್ಟಾರ್ ವೇಗಿ. ಕ್ಷಣಾರ್ಧದಲ್ಲೇ ವಿಕೆಟ್ ಪಡೆಯೋ ರಿದಮ್ ಹೊಂದಿರುವ ಬೌಲ್ಟ್, ಸ್ಟಾರ್ ವಿಕೆಟ್​ಗಳನ್ನೇ ಪಡೆಯೋದು. ಅದ್ರಲ್ಲೂ ಎಡಗೈ ವೇಗಿಗಳಿಗೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಮೊದಲಿನಿಂದಲೂ ತಡವರಿಸ್ತಾರೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿಗೆ ಟೆಸ್ಟ್ ಸರಣಿಗೂ ಮುನ್ನವೇ ಬೌಲ್ಟ್ ಭಯ ಶುರುವಾಗಿದೆ.

6 ಬಾರಿ ಬೌಲ್ಟ್​ಗೆ ಔಟ್.. ಏನಿದು ವಿರಾಟ್​ಗೆ ಎಡಗೈ ಕಂಟಕ?
ಕಳೆದ 2016ರಲ್ಲಿ ಭಾರತದ ನೆಲದಲ್ಲೇ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿಯನ್ನ ಬೌಲ್ಟ್ ಟಾರ್ಗೆಟ್ ಮಾಡಿದ್ರು. ಒಂದೇ ಪಂದ್ಯದಲ್ಲಿ 2 ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್ ಕೊಹ್ಲಿಯನ್ನ ಔಟ್ ಮಾಡಿದ್ದ ಬೌಲ್ಟ್ ಭಾರತಕ್ಕೆ ಶಾಕ್ ಕೊಟ್ಟಿದ್ದ. ಅಷ್ಟೇ ಅಲ್ಲ. ಒಟ್ಟು ಆರು ಬಾರಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಿದ ಸಾಧನೆ ಬೌಲ್ಟ್ ಹೆಸರಿನಲ್ಲಿದೆ. ಅಂದ್ರೆ ಕೊಹ್ಲಿ ಎಡಗೈ ವೇಗಿಗಳ ಮುಂದೆ ಸುಲಭವಾಗಿ ಮಂಕಾಗ್ತಾರೆ ಅನ್ನೋದು ಇಲ್ಲೇ ಗೊತ್ತಾಗುತ್ತೆ.

ವಿಶ್ವಕಪ್ ದ್ವಂಸ ಮಾಡಿದ್ದ ಬೌಲ್ಟ್​ಗೆ ಕೊಹ್ಲಿಯೇ ಟಾರ್ಗೆಟ್!
ಇಂಟ್ರಸ್ಟಿಂಗ್ ವಿಷ್ಯ ಏನಂದ್ರೆ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತದ ಕನಸನ್ನ ದ್ವಂಸ ಮಾಡಿದ್ದೇ ಈ ಟ್ರೆಂಟ್ ಬೌಲ್ಟ್. ಆರಂಭದಲ್ಲಿ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿ ವಿಕೆಟ್ ಪಡೆದ ಬೌಲ್ಟ್, ಕೊನೆಯಲ್ಲಿ ಗೇಮ್ ಚೇಂಜ್ ಮಾಡುತ್ತಿದ್ದ ರವೀಂದ್ರ ಜಡೇಜಾ ವಿಕೆಟ್ ಪಡೆದು, ಭಾರತದ ಫೈನಲ್ ಎಂಟ್ರಿ ಕನಸಿಗೆ ಕೊಳ್ಳಿಯಿಟ್ಟಿದ್ದ. ಇದೀಗ ಟೆಸ್ಟ್ ಸರಣಿಯಲ್ಲೂ ಬೌಲ್ಟ್ ರನ್ ಮಷೀನ್ ಕೊಹ್ಲಿಯನ್ನೇ ಟಾರ್ಗೆಟ್ ಮಾಡಿದ್ದಾನೆ.

ಭಾರತದ ವಿರುದ್ಧ ಬೌಲ್ಟ್:
ಟೀಮ್ ಇಂಡಿಯಾ ವಿರುದ್ಧ 7 ಟೆಸ್ಟ್ ಪಂದ್ಯಗಳನ್ನಾಡಿರುವ ಟ್ರೆಂಟ್ ಬೌಲ್ಟ್ 25 ವಿಕೆಟ್ ಪಡೆದಿದ್ರೆ, 13 ಏಕದಿನ ಪಂದ್ಯಗಳಲ್ಲಿ 24 ವಿಕೆಟ್ ಇನ್ನು 3 ಟಿಟ್ವೆಂಟಿಯಲ್ಲಿ 6 ವಿಕೆಟ್ ಕಬಳಿಸಿದ್ದಾನೆ. ಇಲ್ಲೇ ಗೊತ್ತಾಗುತ್ತೆ ಭಾರತದ ವಿರುದ್ಧ ಆಡಿರೋ ಒಟ್ಟು 23 ಪಂದ್ಯಗಳಲ್ಲೇ ಬೌಲ್ಟ್ ಬರೋಬ್ಬರಿ 55 ವಿಕೆಟ್ ಪಡೆದಿದ್ದಾನೆ.

ಭಾರತದ ವಿರುದ್ಧ ನಡೆಯಲಿರುವ 2 ಟೆಸ್ಟ್ ಪಂದ್ಯಗಳಿಗೆ ಕಿವೀಸ್ ಟೆಸ್ಟ್ ತಂಡವನ್ನ ಕೇವಲ ಒಂದು ಪಂದ್ಯಕ್ಕೆ ನ್ಯೂಜಿಲೆಂಡ ಪ್ರಕಟಿಸಿದೆ. ವಿಲಿಯಮ್ಸನ್ ನೇತೃತ್ವದಲ್ಲಿ ಒಟ್ಟು 13 ಮಂದಿ ಆಟಗಾರರಿಗೆ ಕಿವೀಸ್ ಬೋರ್ಡ್ ಮಣೆಹಾಕಿದೆ.

ಕಿವೀಸ್ ತಂಡ:
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ರಕಟಗೊಂಡಿರುವ ಕೇನ್ ತಂಡದಲ್ಲಿ ಟಾಮ್ ಬಂಡ್ಲೆಲ್, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್​ಹೋಮ್, ಕೈಲ್ ಜೇಮಿಸನ್, ಟಾಮ್ ಲಾಥಮ್, ಡ್ಯಾರೆಲ್ ಮಿಚೆಲ್, ಹೆನ್ರಿ ನಿಕೋಲಸ್, ಅಜಾಜ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವ್ಯಾಗ್ನರ್ ಮತ್ತು ಬಿಜೆ ವಾಟ್ಲಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಒಟ್ನಲ್ಲಿ.. ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳ ವೀಕ್ನೆಸ್ ತಿಳಿದುಕೊಂಡಿರುವ ನ್ಯೂಜಿಲೆಂಡ್, ಕೊಹ್ಲಿ ಪಡೆ ಮೇಲೆ ಎಡಗೈ ಬ್ರಹ್ಮಾಸ್ತ್ರ ಟ್ರೆಂಟ್ ಬೌಲ್ಟ್ ಪ್ರಯೋಗಕ್ಕೆ ಮುಂದಾಗಿದೆ. ಹೀಗಾಗಿ ಇಂಡಿಯನ್ ಬ್ಯಾಟ್ಸ್​ಮನ್​ಗಳು ಬೌಲ್ಟ್ ಬೌಲಿಂಗ್ ಬಗ್ಗೆ ಎಚ್ಚರಿಕೆಯಿಂದ ಆಡಿದ್ರೆ ಮಾತ್ರ ಯಶಸ್ಸು ಕಾಣೋದಕ್ಕೆ ಸಾಧ್ಯ.

Published On - 12:48 pm, Tue, 18 February 20