ಯಾವುದೂ ಅಸಾಧ್ಯವಲ್ಲ ಅಂತಾ ಕ್ಯಾಪ್ಟನ್​ ಕೊಹ್ಲಿಗೆ ತಿಳಿದಿದ್ದು ಯಾವಾಗ ಗೊತ್ತಾ?

|

Updated on: Jul 02, 2020 | 4:04 PM

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್​ನ ಮೂರು ಶೈಲಿಯಲ್ಲೇ ರನ್​ಗಳ ಮಳೆ ಸುರಿಸಿಸೋ ಸರದಾರ. ಸಚಿನ್ ದಾಖಲೆಗಳನ್ನು ಬರೆಯೋಕೆ ಹುಟ್ಟಿದ್ರೆ, ಕೊಹ್ಲಿ ದಾಖಲೆಗಳನ್ನ ಮುರಿಯೋಕೇ ಅಂತಾನೆ ಹುಟ್ಟಿದ್ದು. ಅಷ್ಟರ ಮಟ್ಟಿಗೆ ವಿರಾಟ್ ಜಾಗತಿಕ ಕ್ರಿಕೆಟ್​ನಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆ ವೀರನಾಗಿ ಗುರುತಿಸಿಕೊಂಡಿರೋ ವಿರಾಟ್​ಗೆ ಅದೊಂದು ಪ್ರವಾಸ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟಿದೆ. ಅದುವೇ 2014ರಲ್ಲಿ ಟೀಮ್ ಇಂಡಿಯಾ ಕೈಗೊಂಡಿದ್ದ ಆಸ್ಟ್ರೇಲಿಯಾ ಟೂರ್​. ಈ ಕಹಾನಿಯನ್ನ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್​ನಲ್ಲಿ […]

ಯಾವುದೂ ಅಸಾಧ್ಯವಲ್ಲ ಅಂತಾ ಕ್ಯಾಪ್ಟನ್​ ಕೊಹ್ಲಿಗೆ ತಿಳಿದಿದ್ದು ಯಾವಾಗ ಗೊತ್ತಾ?
Follow us on

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್​ನ ಮೂರು ಶೈಲಿಯಲ್ಲೇ ರನ್​ಗಳ ಮಳೆ ಸುರಿಸಿಸೋ ಸರದಾರ. ಸಚಿನ್ ದಾಖಲೆಗಳನ್ನು ಬರೆಯೋಕೆ ಹುಟ್ಟಿದ್ರೆ, ಕೊಹ್ಲಿ ದಾಖಲೆಗಳನ್ನ ಮುರಿಯೋಕೇ ಅಂತಾನೆ ಹುಟ್ಟಿದ್ದು. ಅಷ್ಟರ ಮಟ್ಟಿಗೆ ವಿರಾಟ್ ಜಾಗತಿಕ ಕ್ರಿಕೆಟ್​ನಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಾಖಲೆ ವೀರನಾಗಿ ಗುರುತಿಸಿಕೊಂಡಿರೋ ವಿರಾಟ್​ಗೆ ಅದೊಂದು ಪ್ರವಾಸ ಜೀವನದಲ್ಲಿ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟಿದೆ. ಅದುವೇ 2014ರಲ್ಲಿ ಟೀಮ್ ಇಂಡಿಯಾ ಕೈಗೊಂಡಿದ್ದ ಆಸ್ಟ್ರೇಲಿಯಾ ಟೂರ್​.

ಈ ಕಹಾನಿಯನ್ನ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್​ನಲ್ಲಿ ಬಿಚ್ಚಿಟ್ಟಿದ್ದಾರೆ. ಌಡಿಲೇಡ್ ಟೆಸ್ಟ್ ಪಂದ್ಯದ ಕೆಲ ಫೋಟೋಗಳನ್ನ ಶೇರ್ ಮಾಡಿರೋ ವಿರಾಟ್ ಇದು ನನಗೆ ತುಂಬಾ ಪ್ರಮುಖವಾಗಿದ್ದು ಹಾಗೂ ಭಾವನಾತ್ಮಕವಾಗಿದ್ದು ಅಂತಾ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಗೂ ಈ ಪಂದ್ಯ ಒಂದು ಅದ್ಭುತ ಅನುಭವ ನೀಡಿತ್ತು. ನಾವು ಪಂದ್ಯವನ್ನ ಗೆಲ್ಲೋಕೆ ಆಗ್ಲಿಲ್ಲ. ಆದ್ರೆ ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ ಅನ್ನೋದನ್ನ ಈ ಪಂದ್ಯ ಕಲಿಸಿಕೊಟ್ಟಿತು. ನಾವು ಅತ್ಯಂತ ಕಷ್ಟವಾಗಿರೋದನ್ನ ಸಾಧಿಸಲು ಹೊರಟಿದ್ದೆವು. ಆಲ್​ಮೋಸ್ಟ್ ಗುರಿಯ ಹತ್ತಿರವೂ ತಲುಪಿದ್ದೆವು. ಆದ್ರೆ ಅಂತಿಮವಾಗಿ ಗುರಿ ತಲುಪಲಾಗಲಿಲ್ಲ. ಇದು ನಮ್ಮ ಟೆಸ್ಟ್ ಪಯಣದಲ್ಲಿ ಪ್ರಮುಖ ಮೈಲಿಗಲ್ಲಾಗಿ ಉಳಿಯಲಿದೆ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

2014 ರಲ್ಲಿ ನಡೆದ ಌಡಿಲೇಡ್​ನಲ್ಲಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲ ಇನಿಂಗ್ಸ್​ನಲ್ಲಿ 7 ವಿಕೆಟ್ ನಷ್ಟಕ್ಕೆ 517 ರನ್ ಕಲೆಹಾಕಿ ಡಿಕ್ಲೇರ್ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ 444 ರನ್​ಗಳಿಗೆ ಆಲ್​ ಔಟ್ ಆಗಿತ್ತು. ತದ ನಂತರ 2ನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 290 ರನ್ ​ಗಳಿಸಿದ್ದಾಗ ಡಿಕ್ಲೇರ್ ಮಾಡಿತ್ತು. ಆ ಮೂಲಕ ಟೀಮ್ ಇಂಡಿಯಾಗೆ 364 ರನ್​ಗಳ ಟಾರ್ಗೆಟ್ ಎದುರಾಯ್ತು. ದ್ವಿತೀಯ ಇನ್ನಿಂಗ್ಸ್​ನಲ್ಲಿ ಈ ಟಾರ್ಗೆಟ್​ನ ಬೆನ್ನತ್ತಿದ ಭಾರತ ಗೆಲುವಿನ ಸಮೀಪವಿರುವಾಗಲೇ 48 ರನ್​ಗಳ ಅಂತರದಲ್ಲಿ ಆಲ್​ ಔಟ್​ ಆಗಿ ತೀವ್ರ ಮುಖಭಂಗ ಅನುಭವಿಸಿತ್ತು.

ಈ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್​ನಲ್ಲೂ ಕೊಹ್ಲಿ ಶತಕ ಬಾರಿಸಿದ್ರು. ಎರಡನೇ ಇನ್ನಿಂಗ್ಸ್​ನಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಲು ಹೋರಾಡಿದ್ರು. ಆದ್ರೆ, ಇತರೆ ಬ್ಯಾಟ್ಸ್​ಮನ್​ಗಳ ಸಾಥ್​ ಸಿಗಲಿಲ್ಲ. ಕೊನೆ ಹಂತದಲ್ಲಿ ತಂಡವು ಗೆಲುವಿಗೆ ಹತ್ತಿರವಿದ್ದಾಗ ಕೊಹ್ಲಿ ಔಟಾಗಿದ್ರು. ಹೀಗಾಗಿ ಟೀಮ್​ ಇಂಡಿಯಾ ಆ ಮ್ಯಾಚ್​ನಲ್ಲಿ ಸೋಲನ್ನು ಅನುಭವಿಸಿತ್ತು.

Published On - 3:51 pm, Thu, 2 July 20