Amazon, Flipkart Holi sale 2023: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೋಳಿ ಸೇಲ್: ಅನೇಕ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್

|

Updated on: Mar 04, 2023 | 1:03 PM

Amazon Holi Sale 2023: ಅಮೆಜಾನ್, ಫ್ಲಿಪ್​ಕಾರ್ಟ್ ಎರಡೂ ತಾಣಗಳು ಮಾರ್ಚ್ 8 ರಂದು ಬಣ್ಣಗಳ ಹಬ್ಬಕ್ಕೆ ಮುಂಚಿತವಾಗಿ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿವೆ. ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಮೊಬೈಲ್ ಫೋನ್‌ಗಳು ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆಯಬಹುದು.

Amazon, Flipkart Holi sale 2023: ಅಮೆಜಾನ್, ಫ್ಲಿಪ್​ಕಾರ್ಟ್​ನಲ್ಲಿ ಹೋಳಿ ಸೇಲ್: ಅನೇಕ ಪ್ರಾಡಕ್ಟ್ ಮೇಲೆ ಬಂಪರ್ ಡಿಸ್ಕೌಂಟ್
Holi Sale 2023
Follow us on

ಇನ್ನೇನು ಹೋಳಿ ಹಬ್ಬ (Holi Festival) ಸಮೀಪಿಸುತ್ತಿದೆ. ಹೀಗಿರುವಾಗ ಪ್ರಸಿದ್ಧ ಇ-ಕಾಮರ್ಸ್ ತಾಣ ಅಮೆಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್ (Flipkart) ಹೊಸ ಮೇಳವನ್ನು ಹಮ್ಮಿಕೊಂಡಿದೆ. ಎರಡೂ ತಾಣಗಳು ಮಾರ್ಚ್ 8 ರಂದು ಬಣ್ಣಗಳ ಹಬ್ಬಕ್ಕೆ ಮುಂಚಿತವಾಗಿ ಅದ್ಭುತ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿವೆ. ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು, ಮೊಬೈಲ್ ಫೋನ್‌ಗಳು, ಉಪಕರಣಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಬಹುದು. ಅಮೆಜಾನ್​ ಹೋಳಿ ಶಾಪಿಂಗ್ ಸ್ಟೋರ್​ ಸೇಲ್​ನಲ್ಲಿ ಲ್ಯಾಪ್‌ಟಾಪ್‌ಗಳು, ಹಲವಾರು ಗ್ಯಾಜೆಟ್‌ಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ಇತ್ತ ಫ್ಲಿಪ್‌ಕಾರ್ಟ್‌ನ ಮಾರಾಟವು ಮಾರ್ಚ್ 3, 2023 ರಿಂದ ಪ್ರಾರಂಭವಾಗಿದ್ದು ವಿವಿಧ ಬ್ರಾಂಡ್‌ಗಳ ಒಂದು ಲಕ್ಷಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ನೀಡಿಲಾಗುತ್ತದೆ.

ಫ್ಲಿಪ್‌ಕಾರ್ಟ್​ನಲ್ಲಿ ಪೀಠೋಪಕರಣಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು ಮುಂತಾದ ಗೃಹೋಪಯೋಗಿ ಉಪಕರಣಗಳ ಮೇಲೆ ಶೇಕಡಾ 75 ರಷ್ಟು ಡಿಸ್ಕೌಂಟ್ ನೀಡುತ್ತಿದೆ. ಏರ್ ಕಂಡಿಷನರ್‌ಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿ ಮತ್ತು ಹೆಚ್ಚು ಮಾರಾಟವಾಗುವ ಲ್ಯಾಪ್‌ಟಾಪ್‌ಗಳ ಮೇಲೆ ಶೇಕಡಾ 45 ರಷ್ಟು ರಿಯಾಯಿತಿ ಇರುತ್ತದೆ.

ಅಂತೆಯೆ ಆ್ಯಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಸ್ಮಾರ್ಟ್‌ಫೋನ್‌ಗಳ ಮೇಲೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಸೌಂದರ್ಯ ಉತ್ಪನ್ನಗಳು, ಉಡುಪುಗಳು, ಅಡಿಗೆ ವಸ್ತುಗಳು ಇತ್ಯಾದಿಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡಾಗಿದೆ. ಅಮೆಜಾನ್‌ನಲ್ಲಿ ಪ್ರಮುಖವಾಗಿ ಇಯರ್‌ಬಡ್ಸ್‌ಗೆ ಹೆಚ್ಚಿನ ಡಿಸ್ಕೌಂಟ್‌ ನೀಡಲಾಗಿದ್ದು, ಇದರಲ್ಲಿಆಪಲ್, ಒಪ್ಪೋ, ಜಬ್ರಾ, ಸ್ಯಾಮ್‌ಸಂಗ್‌ನ ಪ್ರಮುಖ ಬ್ರ್ಯಾಂಡ್‌ಗಳ ಇಯರ್‌ಫೋನ್‌ಗಳು ಸಹ ಇವೆ.

ಇದನ್ನೂ ಓದಿ
OnePlus Nord CE 3: ಅದ್ಭುತ ಕ್ಯಾಮೆರಾ, ಭರ್ಜರಿ ಫೀಚರ್ಸ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಒನ್​ಪ್ಲಸ್ ನಾರ್ಡ್ CE 3
Tech Tips: ಇಂಟರ್ನೆಟ್ ಇಲ್ಲದೆಯೂ ಇಮೇಲ್ ಕಳುಹಿಸುವ ಟ್ರಿಕ್ ಗೊತ್ತೇ?: ಇಲ್ಲಿದೆ ನೋಡಿ
Tech Tips: ಮನೆಯಲ್ಲೇ ಕುಳಿತು ಆನ್​ಲೈನ್ ಮೂಲಕ ಹಣ ಗಳಿಸಲು ಇಲ್ಲಿದೆ ನೋಡಿ ಸುಲಭ ಮಾರ್ಗ
Amazon Echo Dot: ಅಲೆಕ್ಸಾ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್​ಸ್ಪೀಕರ್

Huawei Nova 10 SE: 108MP ಕ್ಯಾಮೆರಾ ಫೋನ್ ಸಾಲಿಗೆ ಮತ್ತೊಂದು ಸೇರ್ಪಡೆ: ಯಾವ ಸ್ಮಾರ್ಟ್​ಫೋನ್?, ಬೆಲೆ ಎಷ್ಟು?

ಅಮೆಜಾನ್ ಆಫರ್:

ಒನ್​​ CE 2 Lite 5G 18,999 ರೂ.

ಸ್ಯಾಮ್​ಸಂಗ್ ಗ್ಯಾಲಕ್ಸಿ M13 10,999 ರೂ.

ಅಮೆಜಾನ್ ಎಕೋ ಡಾಟ್ (3ನೇ ಜನ್): 3,499 ರೂ.

ಅಮೆಜಾನ್ Fire TV Stick Lite: 3,299 ರೂ.

Amazon Kindle 2022: 9,999 ರೂ.

ಸೋನಿ Bravia 108 cm (43 ಇಂಚು) 4K Ultra HD Smart LED Google TV: 42,990 ರೂ.

ಒನ್​​ಪ್ಲಸ್ 80 cm (32 ಇಂಚು) Y ಸರಣಿ HD ಸಿದ್ಧ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ: 14,999 ರೂ.

ಬೋಟ್ ಏರ್​ಡಾಪ್ಸ್ 141 ಬ್ಲೂಟೂತ್ ಮೈಕ್‌ 1,299 ರೂ.

ಸ್ಯಾಮ್​ಸಂಗ್ ಗ್ಯಾಲಕ್ಸಿ ವಾಚ್ 3 45mm ಬ್ಲೂಟೂತ್: 15,999 ರೂ.

ಫ್ಲಿಪ್​ಕಾರ್ಟ್ ಆಫರ್:

ಆ್ಯಪಲ್ ಐಪ್ಯಾಡ್ (9ನೇ Gen) 64 GB ROM: ರೂ. 30,900

ಸ್ಟೈಲಸ್ 6 GB RAM 128 GB ROM ಜೊತೆಗೆ SAMSUNG Galaxy Tab S7+: ರೂ. 49,999

ಸ್ಯಾಮ್​ಸಂಗ್ ಗ್ಯಾಲಕ್ಸಿ ಟ್ಯಾಬ್ A7 Lite 3 GB RAM 32 GB ROM: ರೂ. 13,450

ಏಸಸ್ TUF ಗೇಮಿಂಗ್ F15 ಕೋರ್ i5 10ನೇ Gen: ರೂ. 49,990

ಸ್ಯಾಮ್​ಸಂಗ್ HW-T42E/XL ಡಾಲ್ಬಿ ಡಿಜಿಟಲ್ 150 W ಬ್ಲೂಟೂತ್ ಸೌಂಡ್‌ಬಾರ್: ರೂ. 7,999

JBL ಸಿನಿಮಾ SB270, ಡಾಲ್ಬಿ ಡಿಜಿಟಲ್, ವೈರ್‌ಲೆಸ್ ಸಬ್ ವೂಫರ್ ಜೊತೆಗೆ ರಿಮೋಟ್: ರೂ. 11,999

ವೋಲ್ಟಾಸ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಜೊತೆಗೆ ವೈ-ಫೈ ಕನೆಕ್ಟ್: ರೂ. 38,030

ವೋಲ್ಟಾಸ್ 0.75 ಟನ್ 3 ಸ್ಟಾರ್ ಸ್ಪ್ಲಿಟ್ ಎಸಿ: ರೂ. 25,999

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ