Amazon Echo Dot: ಅಲೆಕ್ಸಾ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್​ಸ್ಪೀಕರ್

ಸ್ಮಾರ್ಟ್​ಫೋನ್, ಸ್ಮಾರ್ಟ್​ವಾಚ್, ಸ್ಮಾರ್ಟ್ ಗ್ಯಾಜೆಟ್, ಸ್ಮಾರ್ಟ್ ಹೋಮ್.. ಹೀಗೆ ಎಲ್ಲಿ ನೋಡಿದರೂ ಸ್ಮಾರ್ಟ್ ಉಪಕರಣಗಳೇ ಇಂದು ಗ್ಯಾಜೆಟ್ ಲೋಕದಲ್ಲಿ ತುಂಬಿಕೊಂಡಿವೆ. ಜನರ ಜೀವನವನ್ನು ಸ್ಮಾರ್ಟ್ ಆಗಿರಿಸುವ ಜತೆಗೆ, ಸ್ಮಾರ್ಟ್​ ಜನರ ಆಯ್ಕೆ ಎನ್ನುವಂತೆಯೂ ಇವು ಬಿಂಬಿತವಾಗಿವೆ. ಅಮೆಜಾನ್, ಅಲೆಕ್ಸಾ ಸರಣಿಯಲ್ಲಿ ಹೊಸ ಇಕೊ ಡಾಟ್ 5ನೇ ಆವೃತ್ತಿಯ ಸ್ಮಾರ್ಟ್ ಸ್ಪೀಕರ್ ಪರಿಚಯಿಸಿದೆ. ನೂತನ ಸ್ಮಾರ್ಟ್ ಸ್ಪೀಕರ್ ವೈಶಿಷ್ಟ್ಯಗಳು, ಬೆಲೆ ವಿವರ ಇಲ್ಲಿದೆ.

Amazon Echo Dot: ಅಲೆಕ್ಸಾ ಪ್ರಿಯರಿಗಾಗಿ ಬಂತು ಹೊಸ ಸ್ಮಾರ್ಟ್​ಸ್ಪೀಕರ್
ಅಮೆಜಾನ್ ಇಕೋ ಡಾಟ್
Follow us
|

Updated on:Mar 03, 2023 | 6:25 PM

ಜಗತ್ತು ಸ್ಮಾರ್ಟ್​ ಆಗುತ್ತಿದೆ. ಜನಜೀವನ ಕೂಡ ಸ್ಮಾರ್ಟ್ ಆಗುತ್ತಿದೆ. ಅದಕ್ಕೆ ಪೂರಕವಾಗಿ, ವಿವಿಧ ಮಾದರಿಯ ಸ್ಮಾರ್ಟ್ ಗ್ಯಾಜೆಟ್​ಗಳು ಮಾರುಕಟ್ಟೆ ಪ್ರವೇಶಿಸಿವೆ. ಸ್ಮಾರ್ಟ್ ಉಪಕರಣಗಳ ನೆರವಿನಿಂದ ಜನರ ಕೆಲಸ, ವಿವಿಧ ಟಾಸ್ಕ್ ಕೂಡ ಸುಲಭದಲ್ಲಿ, ತ್ವರಿತವಾಗಿ ಸಾಧ್ಯವಾಗುತ್ತಿದೆ. ಕಚೇರಿಯಲ್ಲಿ ಇರಬಹುದು, ಇಲ್ಲವೇ ವೈಯಕ್ತಿಕವಾಗಿರಬಹುದು, ಸ್ಮಾರ್ಟ್ ಗ್ಯಾಜೆಟ್​ಗಳು ಜನರಿಗೆ ನೆರವಾಗುತ್ತದೆ. ಸ್ಮಾರ್ಟ್ ಸ್ಪೀಕರ್ (Smart speaker) ವಿಚಾರಕ್ಕೆ ಬಂದರೆ, ಅಮೆಜಾನ್ ಅಲೆಕ್ಸಾ ಹೆಚ್ಚು ಜನಪ್ರಿಯತೆ ಗಳಿಸಿದೆ. ಹೊಸದಾಗಿ ಅಮೆಜಾನ್ ಇಕೋ ಡಾಟ್ (5th Gen) (Amazon Echo Dot) ಸ್ಮಾರ್ಟ್ ಸ್ಪೀಕರ್ ಬಿಡುಗಡೆಯಾಗಿದೆ. ಮಾರುಕಟ್ಟೆಗೆ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟಿರುವ ಇಕೋ ಡಾಟ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಏನಿದು ಅಮೆಜಾನ್ ಇಕೋ ಡಾಟ್ (5th Gen)?

ಸ್ಮಾರ್ಟ್ ಸ್ಪೀಕರ್ ವಿಭಾಗದಲ್ಲಿ ಅಮೆಜಾನ್ ಪರಿಚಯಿಸಿರುವ ಇಕೋ ಡಾಟ್​ನ ಐದನೇ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಈ ಬಾರಿ ಅಮೆಜಾನ್, ಇಕೋ ಡಾಟ್ (5th Gen) ಸ್ಮಾರ್ಟ್ ಸ್ಪೀಕರ್​ನಲ್ಲಿ ತಾಪಮಾನ ಮಾಪಕ ಮತ್ತು ಅಲ್ಟ್ರಾಸೌಂಡ್ ಮೋಶನ್ ಡಿಟೆಕ್ಷನ್ ವ್ಯವಸ್ಥೆಯನ್ನು ಪರಿಚಯಿಸಿದೆ. ಮನೆ ಅಥವಾ ಕಚೇರಿಯಲ್ಲಿನ ತಾಪಮಾನವನ್ನು ಇಕೋ ಡಾಟ್ (5th Gen) ಬಳಕೆದಾರರಿಗೆ ಅಪ್​ಡೇಟ್ ಮಾಡುತ್ತದೆ. ಜತೆಗೆ ಸ್ಮಾರ್ಟ್ ಲೈಟ್​ಗಳನ್ನು ಜನರ ಅನುಕೂಲಕ್ಕೆ ತಕ್ಕಂತೆ ಆನ್ ಮಾಡುವ, ಆಫ್ ಮಾಡುವ ಮತ್ತು ಬೆಳಕನ್ನು ಸಂಯೋಜಿಸುವ ವೈಶಿಷ್ಟ್ಯ ಹೊಂದಿದೆ.

ಅಮೆಜಾನ್ ಇಕೋ ಡಾಟ್ (5th Gen)? ಬೆಲೆ ಎಷ್ಟಿದೆ?

ಭಾರತದಲ್ಲಿ ಅಮೆಜಾನ್ ಇಕೋ ಡಾಟ್​ (5th Gen) ಬೆಲೆ ₹4,999 ಇದೆ. ಇದು ವಿಶೇಷ ಆರಂಭಿಕ ಕೊಡುಗೆಯ ದರವಾಗಿದೆ. ಎಲ್​ಇಡಿ ಕ್ಲಾಕ್ ಮಾದರಿ ಮತ್ತು ಸಾಮಾನ್ಯ ಆವೃತ್ತಿಯಲ್ಲಿ ಲಭ್ಯವಾಗುತ್ತಿದ್ದು, ಅಮೆಜಾನ್ (amazon) ಮೂಲಕ ದೊರೆಯಲಿದೆ. ಜತೆಗೆ ಪ್ರಮುಖ ರಿಟೇಲ್ ಮಳಿಗೆಗಳಲ್ಲೂ ಹೊಸ ಅಮೆಜಾನ್ ಇಕೋ ಡಾಟ್ (5th Gen) ಲಭ್ಯವಾಗಲಿದೆ. ಅಮೆಜಾನ್ ಇಕೋ ಡಾಟ್ (4th Gen) ಸ್ಮಾರ್ಟ್ ಸ್ಪೀಕರ್ ಹೋಲುವ ವಿನ್ಯಾಸವನ್ನು ಹೊಂದಿದೆ.

ಇಕೋ ಡಾಟ್ (5th Gen) ವೈಶಿಷ್ಟ್ಯಗಳೇನು?

ಸ್ಮಾರ್ಟ್ ಗ್ಯಾಜೆಟ್ ಮತ್ತು ಸ್ಮಾರ್ಟ್ ಹೋಮ್ ಉಪಕರಣಗಳ ನಿಯಂತ್ರಣವನ್ನು ಅಮೆಜಾನ್ ಇಕೋ ಡಾಟ್ ಮಾಡುತ್ತದೆ. ಅದರಲ್ಲಿ ಮ್ಯೂಸಿಕ್ ಕಂಟ್ರೋಲ್, ಅಲಾರ್ಮ್, ಮೈಕ್ರೋಫೋನ್, ಮ್ಯೂಟ್ ಬಟನ್ ನೀಡಲಾಗಿದೆ. ಜತೆಗೆ, ಇಕೋ ಡಾಟ್ (5th Gen)ಗೆ ನಿರಂತರ ವಿದ್ಯುತ್ ಮತ್ತು ವೈ-ಫೈ ಸಂಪರ್ಕ ಅಗತ್ಯವಾಗಿದೆ. ರಿಮೈಂಡರ್, ಕ್ಯಾಲೆಂಡರ್, ನ್ಯೂಸ್, ಮ್ಯೂಸಿಕ್, ಸ್ಮಾರ್ಟ್ ಕಂಟ್ರೋಲ್ ಫೀಚರ್ಸ್ ಅಮೆಜಾನ್ ಇಕೋ ಡಾಟ್​ನಲ್ಲಿದೆ. ಜತೆಗೆ, ಅಲೆಕ್ಸಾ ಆ್ಯಪ್ ಮೂಲಕ ವಿವಿಧ ಟಾಸ್ಕ್ ನಿರ್ವಹಿಸುವ ಇಕೋ ಡಾಟ್, ಸಂಗೀತ ಕೇಳಲು ಮತ್ತು ಇತರ ಸ್ಮಾರ್ಟ್ ಕೆಲಸಕ್ಕೆ ಉತ್ತಮ ಆಯ್ಕೆಯಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:25 pm, Fri, 3 March 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ