Android Tips: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​ನಲ್ಲಿರುವ ಈ 5 ಹಿಡನ್ ಸೂಪರ್ ಪವರ್ ಫೀಚರ್ ನಿಮಗೆ ಗೊತ್ತೇ?

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 09, 2024 | 3:37 PM

ಹೆಚ್ಚಿನ ಸ್ಮಾರ್ಟ್​ಫೋನ್​ಗಳು QR ಕೋಡ್ ಸಹಾಯದಿಂದ ವೈ-ಫೈ ಅನ್ನು ಹಂಚಿಕೊಳ್ಳುವ ಆಯ್ಕೆಯನ್ನು ಒದಗಿಸುತ್ತವೆ. ಕೆಲವು ಜನರಿಗೆ ಈ ಫೀಚರ್ ಬಗ್ಗೆ ಗೊತ್ತಿದ್ದರೂ ಅದತ ಬಳಕೆಯ ಬಗ್ಗೆ ತಿಳಿದಿಲ್ಲ. ಅಂತವರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ.

Android Tips: ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​ನಲ್ಲಿರುವ ಈ 5 ಹಿಡನ್ ಸೂಪರ್ ಪವರ್ ಫೀಚರ್ ನಿಮಗೆ ಗೊತ್ತೇ?
ಸಾಂದರ್ಭಿಕ ಚಿತ್ರ
Follow us on

ನೀವು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ, ನಿಮ್ಮ ದೈನಂದಿನ ಜೀವನವನ್ನು ಸುಲಭಗೊಳಿಸಬಲ್ಲ ಆಂಡ್ರಾಯ್ಡ್ ಫೋನ್‌ಗಳ 5 ರಹಸ್ಯ ವೈಶಿಷ್ಟ್ಯಗಳ ಬಗ್ಗೆ ಇಂದು ನಾವು ಹೇಳಲಿದ್ದೇವೆ. ಕೆಲವೇ ಕೆಲವು ಜನರಷ್ಟೆ ಈ ಆಂಡ್ರಾಯ್ಡ್​ನ ರಹಸ್ಯ ವೈಶಿಷ್ಟ್ಯಗಳನ್ನು ಬಳಸುತ್ತಿದ್ದಾರೆ. ಕೆಲವು ಜನರಿಗೆ ಈ ಫೀಚರ್ ಬಗ್ಗೆ ಗೊತ್ತಿದ್ದರೂ ಅದತ ಬಳಕೆಯ ಬಗ್ಗೆ ತಿಳಿದಿಲ್ಲ. ಅಂತವರಿಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಹಿಡನ್ ಸೂಪರ್ ಪವರ್ ಫೀಚರ್ ತಿಳಿದ ಬಳಿಕ ನೀವು ಸ್ಮಾರ್ಟ್​ಫೋನ್ ಉಪಯೋಗಿಸುವ ಸ್ಟೈಲೇ ಬದಲಾಗಿದೆ.

ಕ್ಯೂಆರ್ ಕೋಡ್ ಮೂಲಕ ವೈ-ಫೈ ಶೇರ್ ಮಾಡಿ:

ಪಾಸ್ ವರ್ಡ್ ಹೇಳದೆ ವೈ-ಫೈ ಶೇರ್ ಮಾಡಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೆಚ್ಚಿನ ಸ್ಮಾರ್ಟ್​ಫೋನ್​ಗಳು QR ಕೋಡ್ ಸಹಾಯದಿಂದ ವೈ-ಫೈ ಅನ್ನು ಹಂಚಿಕೊಳ್ಳುವ ಆಯ್ಕೆಯನ್ನು ಒದಗಿಸುತ್ತವೆ. ಇದಕ್ಕಾಗಿ ಫೋನ್‌ನ ಸೆಟ್ಟಿಂಗ್ಸ್‌ಗೆ ಹೋಗಬೇಕು. ಇದರ ನಂತರ ನೀವು ವೈ-ಫೈ ಗೆ ಹೋಗಬೇಕು ಮತ್ತು ನಂತರ ಕರೆಂಟ್ ನೆಟ್ವರ್ಕ್ ಅನ್ನು ಕ್ಲಿಕ್ ಮಾಡಿ.

ಗೂಗಲ್ ಟ್ರಾನ್ಸ್​ಲೇಷನ್:

ನೀವು ಅಪ್ಲಿಕೇಶನ್‌ನಿಂದ ಹೊರಹೋಗದೆಯೇ ಗೂಗಲ್, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಟ್ರಾನ್ಸ್​ಲೇಷನ್ ಸೌಲಭ್ಯವನ್ನು ಒದಗಿಸುತ್ತದೆ. ಪಠ್ಯವನ್ನು ಆಯ್ಕೆ ಮಾಡುವ ಮೂಲಕ ಬಳಕೆದಾರರು ಅನುವಾದಿಸಬಹುದು. ಇಲ್ಲಿ ನೀವು ಪಠ್ಯವನ್ನು ಅನುವಾದಿಸಬೇಕಾದ ಭಾಷೆಯನ್ನು ಆಯ್ಕೆ ಮಾಡಬೇಕಾಗುತ್ತದೆ.

ವೈರ್‌ಲೆಸ್ ಚಾರ್ಜಿಂಗ್

ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸಹಾಯದಿಂದ ಎಲೆಕ್ಟ್ರಾನಿಕ್ ಸಾಧನಗಳನ್ನು ವೈರ್‌ಲೆಸ್ ಆಗಿ ಚಾರ್ಜ್ ಮಾಡಬಹುದು. ಇದನ್ನು ರಿವರ್ಸ್ ಚಾರ್ಜಿಂಗ್ ಎಂದು ಕರೆಯಲಾಗುತ್ತದೆ. ಇದಕ್ಕಾಗಿ ನೀವು ಟೈಪ್ ಸಿ ನಿಂದ ಟೈಪ್ ಸಿ ಚಾರ್ಜಿಂಗ್ ಕೇಬಲ್ ಅನ್ನು ಹೊಂದಿರಬೇಕು. ನಿಮ್ಮ ಸ್ಮಾರ್ಟ್‌ಫೋನ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಅದರ ಸಹಾಯದಿಂದ ನೀವು ಇಯರ್‌ಬಡ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಂತಹ ಇತರ ಸಾಧನಗಳನ್ನು ಚಾರ್ಜ್ ಮಾಡಬಹುದು. ಆದಾಗ್ಯೂ, ರಿವರ್ಸ್ ಚಾರ್ಜಿಂಗ್‌ನಲ್ಲಿ ಫೋನ್‌ನ ಬ್ಯಾಟರಿ ತ್ವರಿತವಾಗಿ ಡಿಸ್ಚಾರ್ಜ್ ಆಗುತ್ತದೆ.

ಎರಡು ವಾಟ್ಸ್​​ಆ್ಯಪ್​ ಮತ್ತು ಇನ್​ಸ್ಟಾಗ್ರಾಮ್

ನೀವು ಎರಡು ವಾಟ್ಸ್​​ಆ್ಯಪ್ ಅಥವಾ ಇನ್​ಸ್ಟಾಗ್ರಾಮ್ ಅನ್ನು ಬಳಸಲು ಬಯಸಿದರೆ ಸಾಮಾನ್ಯವಾಗಿ ನಿಮ್ಮ ಬಳಿ ಎರಡು ಫೋನ್​ಗಳು ಇರಬೇಕು. ಆದರೆ, ನೀವು ಒಂದೇ ಸಾಧನದಲ್ಲಿ ಇನ್​ಸ್ಟಾ ಮತ್ತು ವಾಟ್ಸ್​​ಆ್ಯಪ್ ಅನ್ನು ಬಳಸಬಹುದು. ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕ್ಲೋನ್ ಅಪ್ಲಿಕೇಶನ್ ವೈಶಿಷ್ಟ್ಯವನ್ನು ಬೆಂಬಲಿಸುತ್ತವೆ. ಇದು ಒಂದು ಫೋನ್‌ನಲ್ಲಿ ಎರಡು ವಾಟ್ಸ್​​ಆ್ಯಪ್ ಅನ್ನು ರನ್ ಮಾಡಲು ಅನುಮತಿಸುತ್ತದೆ.

ಅನ್‌ಲಾಕ್ ಡೆವಲಪರ್ಸ್ ಆಯ್ಕೆ

ಡೆವಲಪರ್ಸ್ ಆಯ್ಕೆಯಲ್ಲಿ ಹಲವು ಶಕ್ತಿಶಾಲಿ ಆಂಡ್ರಾಯ್ಡ್ ವೈಶಿಷ್ಟ್ಯಗಳನ್ನು ಮರೆಮಾಡಲಾಗಿದೆ, ಬಿಲ್ಡ್ ಸಂಖ್ಯೆಯ ಮೇಲೆ ಏಳು ಬಾರಿ ಟ್ಯಾಪ್ ಮಾಡುವ ಮೂಲಕ ಅನ್‌ಲಾಕ್ ಮಾಡಬಹುದು. ಇದರಲ್ಲಿ ನೀವು ಬ್ಲೂಟೂತ್ ಸಂಪರ್ಕಗಳ ಸಂಖ್ಯೆಯನ್ನು ತೆಗೆದುಹಾಕಬಹುದು. ಬೂಟ್ಲೋಡರ್ ಅನ್ನು ಅನ್ಲಾಕ್ ಮಾಡುವುದರಿಂದ ಕೆಲವು ಅಪ್ಲಿಕೇಶನ್​ಗಳು, ವಿಶೇಷವಾಗಿ ಬ್ಯಾಂಕಿಂಗ್ ಅಪ್ಲಿಕೇಶನ್​ಗಳನ್ನು ಅಡ್ಡಿಪಡಿಸಬಹುದು ಎಂದು ಗಮನಿಸಬೇಕಾದ ಅಂಶ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:36 pm, Wed, 9 October 24