ಅಮೆಜಾನ್ ಇಂಡಿಯಾದಲ್ಲಿ ದೀಪಾವಳಿ ಮತ್ತು ದಸರಾಕ್ಕೆ ಮುಂಚಿತವಾಗಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Great Indian Festival Sale) ನಡೆಯುತ್ತಿದೆ. ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಬೆಲೆ ಕಡಿತದೊಂದಿಗೆ ಸಾವಿರಾರು ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ನಿಮ್ಮ ಪ್ರಸ್ತುತ ಸ್ಮಾರ್ಟ್ ಟಿವಿಯನ್ನು ಅಪ್‌ಗ್ರೇಡ್ ಮಾಡಲು ಅಥವಾ ಹೊಸದನ್ನು ಪಡೆಯಲು ಯೋಜಿಸುತ್ತಿದ್ದರೆ, ಇದು ಅತ್ಯುತ್ತಮ ಸಮಯ. ಈ ಸೇಲ್ನಲ್ಲಿ ಏಸರ್, ಸ್ಯಾಮ್‌ಸಂಗ್, ರೆಡ್ಮಿ, ಸೋನಿ, ಎಲ್‌ಜಿ ಮತ್ತು ಹೆಚ್ಚಿನ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್ ಟಿವಿಗಳು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಇದಲ್ಲದೆ, ವಿವಿಧ ಬ್ಯಾಂಕ್ ಕೊಡುಗೆಗಳು, ಕೂಪನ್ ಆಧಾರಿತ ರಿಯಾಯಿತಿಗಳು ಮತ್ತು ವಿನಿಮಯ ರಿಯಾಯಿತಿಗಳನ್ನು ಕೂಡ ಪಡೆಯಬಹುದು.
ಏಸರ್‌ನ 32-ಇಂಚಿನ V ಸರಣಿಯ HD-ರೆಡಿ ಸ್ಮಾರ್ಟ್ QLED ಟಿವಿ ಪ್ರಸ್ತುತ ರೂ. 14,999 ರಿಂದ ಕಡಿಮೆಗೆ ಸೇಲ್ ಆಗುತ್ತಿದೆ. ಇದರ ಮೂಲಬೆಲೆ 24,999 ರೂ. SBI ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು 1,500 ತ್ವರಿತ ರಿಯಾಯಿತಿ ಪಡೆಯಬಹುದು. ಗ್ರಾಹಕರು ಹೆಚ್ಚುವರಿ ವಿನಿಮಯ ಕೊಡುಗೆಯ ರಿಯಾಯಿತಿಯಿಂದ ಪ್ರಯೋಜನ ಪಡೆಯಬಹುದು. ಇದು ಗೂಗಲ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 16GB ಸಂಗ್ರಹಣೆಯನ್ನು ನೀಡುತ್ತದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 30W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.
WhatsApp New Feature: ಒಂದೇ ವಾಟ್ಸ್ಆ್ಯಪ್ನಲ್ಲಿ 4-5 ಅಕೌಂಟ್: ಅರೇ, ಇದು ಹೇಗೆ ಸಾಧ್ಯ ಗೊತ್ತೇ?
ಅಮೆಜಾನ್ ಪ್ರಸ್ತುತ ರೆಡ್ಮಿಯ F-ಸರಣಿ 32-ಇಂಚಿನ ಸ್ಮಾರ್ಟ್ LED ಫೈರ್ ಟಿವಿಯನ್ನು 9,499 ರೂ. ಗೆ ಪಟ್ಟಿ ಮಾಡಿದೆ. ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡುವ ಗ್ರಾಹಕರು ಇದನ್ನು 1,500 ರೂ. ಗಳ ಹೆಚ್ಚುವರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ನಿಮ್ಮ ಹಳೆಯ ಟಿವಿಯನ್ನು ಹೊಸ ಮಾದರಿಯೊಂದಿಗೆ ಬದಲಾಯಿಸಲು ನೀವು ಬಯಸಿದರೆ ಅಮೆಜಾನ್ ವಿನಿಮಯ ರಿಯಾಯಿತಿ ಆಯ್ಕೆಯನ್ನು ಸಹ ಹೊಂದಿದೆ. ವಿನಿಮಯ ಕೊಡುಗೆ ರೂ. 4,360 ವರೆಗೆ ಇದೆ. ರೆಡ್ಮಿ ಸ್ಮಾರ್ಟ್ ಟಿವಿ 32 60Hz ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಶವೋಮಿಯ ವಿವಿಡ್ ಪಿಕ್ಚರ್ ಎಂಜಿನ್ ಅನ್ನು ಒಳಗೊಂಡಿದೆ ಮತ್ತು Dolby Audio ಮತ್ತು DTS ವರ್ಚುವಲ್: X ಬೆಂಬಲದೊಂದಿಗೆ 20W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.
ಅಮೆಜಾನ್ LG ಯ 32-ಇಂಚಿನ HD-ರೆಡಿ ಸ್ಮಾರ್ಟ್ LED ಟಿವಿಯನ್ನು 13,490 ರೂ. ಗೆ ಸೇಲ್ ಮಾಡುತ್ತಿದೆ. SBI ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳಿಗೆ ರಿಯಾಯಿತಿಗಳು ಸಹ ಇವೆ. ಅಲ್ಲದೆ, ಅಮೆಜಾನ್ ಪೇ, ICICI ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಖರೀದಿಗಳಿಗೆ 300 ಕ್ಯಾಶ್‌ಬ್ಯಾಕ್ ಮತ್ತು 2,200 ವೆಲ್ಕಮ್ ಗಿಫ್ಟ್ ಇದೆ. ಈ ಸ್ಮಾರ್ಟ್ ಟಿವಿ WebOS ನಲ್ಲಿ ರನ್ ಆಗುತ್ತದೆ ಮತ್ತು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಇದು 8GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು 16W ಔಟ್‌ಪುಟ್‌ನೊಂದಿಗೆ ಸ್ಪೀಕರ್‌ಗಳನ್ನು ಒಳಗೊಂಡಿದೆ.
ಸ್ಯಾಮ್‌ಸಂಗ್‌ನ 32-ಇಂಚಿನ HD-ರೆಡಿ ವಂಡರ್‌ಟೈನ್‌ಮೆಂಟ್ ಸರಣಿಯ LED ಸ್ಮಾರ್ಟ್ ಟಿವಿ ಪ್ರಸ್ತುತ 11,990 ರೂ. ಗೆ ಲಭ್ಯವಿದೆ. ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 4,360 ರೂ. ಗೆ ಪಡೆಯಬಹುದು. SBI ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದರೆ 1,500 ರೂ. ವರೆಗೆ ಡಿಸಕೌಂಟ್ ಇದೆ. ಈ ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ತಂತ್ರಜ್ಞಾನ ಮತ್ತು 20W ಔಟ್‌ಪುಟ್‌ನೊಂದಿಗೆ ಸ್ಪೀಕರ್‌ಗಳನ್ನು ಒಳಗೊಂಡಿದೆ.
ಏಸರ್‌ನ 32-ಇಂಚಿನ ಅಡ್ವಾನ್ಸ್ಡ್ I ಸರಣಿ HD ರೆಡಿ ಸ್ಮಾರ್ಟ್ LED ಟಿವಿಯನ್ನು ರೂ. 10,499 ಕ್ಕೆ ಖರೀದಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡುವ ಗ್ರಾಹಕರು ಅದನ್ನು 1,500 ರೂ. ಗಳ ಹೆಚ್ಚುವರಿ ರಿಯಾಯಿತಿಯೊಂದಿಗೆ ಪಡೆಯಬಹುದು. ನಿಮ್ಮ ಹಳೆಯ ಟಿವಿಯನ್ನು ಹೊಸ ಮಾದರಿಯೊಂದಿಗೆ ಬದಲಾಯಿಸಲು ನೀವು ಬಯಸಿದರೆ ಅಮೆಜಾನ್ ವಿನಿಮಯ ರಿಯಾಯಿತಿ ಆಯ್ಕೆಯನ್ನು ಸಹ ಹೊಂದಿದೆ. ಈ ಏಸರ್ TV 60Hz ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು 16GB ಸಂಗ್ರಹಣೆಯನ್ನು ಒಳಗೊಂಡಿದೆ ಮತ್ತು Dolby Audio ತಂತ್ರಜ್ಞಾನದೊಂದಿಗೆ 30W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ