ಅರೇ… ಏರ್‌ಪ್ಲೇನ್ ಮೋಡ್ ಆನ್ ಮಾಡಿ ಇಂಟರ್ನೆಟ್ ಅನ್ನು ಹೇಗೆ ಉಪಯೋಗ ಮಾಡುವುದು ಎಂದು ನೀವು ಯೋಚಿಸುತ್ತಿರುವಿರಿ. ಸ್ಮಾರ್ಟ್‌ಫೋನ್ (Smartphone) ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಟ್ಟರೆ ನಿಮಗೆ ಮೊಬೈಲ್‌ನಲ್ಲಿ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಏರ್‌ಪ್ಲೇನ್ ಮೋಡ್ ಆನ್ ಇದ್ದರೆ ಅನೇಕ ಪ್ರಮುಖ ಕಾರ್ಯಗಳು ಆಗುವುದಿಲ್ಲ. ಇಮೇಲ್ ಕಳುಹಿಸಲು ಸಾಧ್ಯವಾಗುವುದಿಲ್ಲ. ಪ್ರಮುಖ ಸಂದೇಶಗಳು ಸೆಂಡ್ ಆಗಲ್ಲ. ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ವೀಕ್ಷಿಸಲು ಆಗುವುದಿಲ್ಲ. ನಿಮಗೆ ಯಾವುದೇ ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬಳಸಲು ಸಾಧ್ಯ ಆಗಲ್ಲ. ಆದರೆ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ. ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿಯೇ ನೀವು ನಿಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಅನ್ನು ಬಳಸಬಹುದು. ಅದು ಹೇಗೆ ನೋಡಿ.
ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನೀವು ಅಚ್ಚರಿಯನ್ನು ನೋಡುತ್ತೀರಿ. ನಿಮ್ಮ ಸ್ಮಾರ್ಟ್‌ಫೋನ್ ಏರ್‌ಪ್ಲೇನ್ ಮೋಡ್‌ನಲ್ಲಿರುತ್ತದೆ. ಆದರೆ ಅದರಲ್ಲಿರುವ ಡೇಟಾ ಆನ್ ಆಗಿರುತ್ತದೆ. ಈಗ ನೀವು ನಿಮ್ಮ ನೆಚ್ಚಿನ ಸೈಟ್‌ಗೆ ನೀವು ಹೋಗಬಹುದು. ವಾಟ್ಸ್ಆ್ಯಪ್ ಸೇರಿದಂತೆ ಹಲವಾರು ಸಾಮಾಜಿಕ ಅಪ್ಲಿಕೇಶನ್‌ಗಳನ್ನು ಬ್ರೌಸ್ ಮಾಡಬಹುದು. ಯೂಟ್ಯೂಬ್ನಲ್ಲಿ ನಿಮ್ಮ ಮೆಚ್ಚಿನ ವಿಡಿಯೋಗಳನ್ನು ವೀಕ್ಷಿಸಬಹುದು. ಯಾವುದೇ ಕಚೇರಿ ಕೆಲಸಗಳಿದ್ದರೆ, ಇಂಟರ್ನೆಟ್ ಮೂಲಕ ಮೊಬೈಲ್‌ನಲ್ಲಿ ಪೂರ್ಣಗೊಳಿಸಬಹುದು.
Smartphone Battery: ಸ್ಮಾರ್ಟ್‌ಫೋನ್ ಬ್ಯಾಟರಿ ಹೆಚ್ಚು ಸಮಯ ಬಾಳಿಕೆ ಬರಲು ಈ ಸಿಂಪಲ್ ಟಿಪ್ಸ್ ಬಳಸಿ
ಈ ಅಪ್ಲಿಕೇಶನ್ಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ 4.4 ರೇಟಿಂಗ್ ಹೊಂದಿದೆ. ಇದುವರೆಗೆ 10 ದಶಲಕ್ಷಕ್ಕೂ ಹೆಚ್ಚು ಬಳಕೆದಾರರು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ನೆಟ್‌ವರ್ಕ್ 4G/3G/2G ನಡುವೆ ಬದಲಾಯಿಸಲು ಮತ್ತು ಆಯ್ಕೆ ಮಾಡಲು ಅನುಮತಿಸುತ್ತದೆ. ಆದರೆ ಫೋರ್ಸ್ LTE ಅಪ್ಲಿಕೇಶನ್ ಎಲ್ಲ ಸ್ಮಾರ್ಟ್ಫೋನ್ಗಳನ್ನು ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರ್ಯಾಂಡ್ ಮೇಲೆ ಇದು ನಿರ್ಧಾರವಾಗಿದೆ. ಕೆಲವು ಬ್ರ್ಯಾಂಡ್‌ಗಳು ನೆಟ್‌ವರ್ಕ್ ಸ್ವಿಚ್ ಆಯ್ಕೆಯನ್ನು ಆಫ್ ಮಾಡುತ್ತವೆ, ಆದ್ದರಿಂದ ಈ ಅಪ್ಲಿಕೇಶನ್ ಅವುಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ