Sim Card Rule: ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಏನದು ನೋಡಿ

|

Updated on: May 07, 2024 | 2:00 PM

Telecom Tariff Hike: ನೀವು ಎರಡು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದೀರಾ?. ಹಾಗಾದರೆ ನಿಮಗೆ ಆಘಾತಕಾರಿ ಸುದ್ದಿ ಇದೆ. ಕೆಲವೇ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ಸುಂಕದ ಯೋಜನೆಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಎರಡೂವರೆ ವರ್ಷಗಳ ನಂತರ, ಟೆಲಿಕಾಂ ದೈತ್ಯರಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಬೆಲೆಗಳನ್ನು ಪರಿಷ್ಕರಿಸಲು ಮುಂದಾಗಿದೆ.

Sim Card Rule: ಡ್ಯುಯಲ್ ಸಿಮ್ ಕಾರ್ಡ್ ಹೊಂದಿರುವವರಿಗೆ ಬಿಗ್ ಶಾಕ್: ಏನದು ನೋಡಿ
Jio Airtel Vi
Follow us on

ಇತ್ತೀಚಿನ ದಿನಗಳಲ್ಲಿ ಡ್ಯುಯಲ್ ಸಿಮ್ ಕಾರ್ಡ್ (Sim Card) ಉಪಯೋಗಿಸುವುದು ಸಾಮಾನ್ಯವಾಗಿದೆ. ಪ್ರತಿ ಫೋನ್ ಎರಡು ಸ್ಲಿಮ್ ಸ್ಲಾಟ್‌ಗಳೊಂದಿಗೆ ಬರುತ್ತದೆ. ಹಾಗಾಗಿ ಎಲ್ಲರೂ ಎರಡು ಸಿಮ್ ಕಾರ್ಡ್ ಬಳಸುತ್ತಿದ್ದಾರೆ. ಒಂದು ಪರ್ಸನಲ್ ನಂಬರ್ ಆಗಿದ್ದರೆ ಮತ್ತೊಂದು ಆಫೀಸ್ ನಂಬರ್ ಇರುತ್ತದೆ. ಎಲ್ಲರೂ ಇದಕ್ಕೆ ಒಗ್ಗಿಕೊಂಡಿರುತ್ತಾರೆ. ಆದರೆ, ಇದೀಗ ಎರಡು ಸಿಮ್ ಹೊಂದಿರುವವರಿಗೆ ಆಘಾತಕಾರಿ ಸುದ್ದಿ ಇದೆ. ಕೆಲವೇ ದಿನಗಳಲ್ಲಿ ಟೆಲಿಕಾಂ ವಲಯದಲ್ಲಿ ಸುಂಕದ ಯೋಜನೆಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಅಂದರೆ, ಸಿಮ್ ಕಾರ್ಡ್​ನ ರಿಚಾರ್ಜ್​ಗಳ ಬೆಲೆ ಹೆಚ್ಚಳವಾಗಲಿದೆ.

ಟೆಲಿಕಾಂ ಕಂಪನಿಗಳು ಸುಂಕದ ಯೋಜನೆಯ ಬೆಲೆಯನ್ನು ಕೊನೆಯದಾಗಿ ಡಿಸೆಂಬರ್ 2021 ರಲ್ಲಿ ಹೆಚ್ಚಿಸಿತ್ತು. ಈಗ ಎರಡೂವರೆ ವರ್ಷಗಳ ನಂತರ, ಟೆಲಿಕಾಂ ತಮ್ಮ ಬೆಲೆಗಳನ್ನು ಪರಿಷ್ಕರಿಸಲು ಮುಂದಾಗಿದ್ದಾರೆ ಎಂದು ವರದಿ ಆಗಿದೆ. ಇಲ್ಲಿಯವರೆಗೆ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಟೆಲಿಕಾಂ ಸಂಸ್ಥೆ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೆಚ್ಚಿಸಬಹುದು ಎಂದು ಉದ್ಯಮ ತಜ್ಞರು ಹೇಳಿದ್ದಾರೆ.

ಎರಡನೇ ಸಿಮ್ ಅನ್ನು ಸಕ್ರಿಯವಾಗಿಡಲು ಬಳಕೆದಾರ ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗಬಹುದು. ಪ್ರಸ್ತುತ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಅನ್ನು ಸಕ್ರಿಯವಾಗಿಡಲು, ಕನಿಷ್ಠ 150 ರೂ. ಗಳ ರೀಚಾರ್ಜ್ ಮಾಡಬೇಕಾಗಿದೆ. ಆದರೆ ಸುಂಕ ಹೆಚ್ಚಳದ ನಂತರ ಸಿಮ್ ಅನ್ನು ಆಕ್ಟಿವೇಟ್ ಮಾಡಲು 150 ರೂಪಾಯಿ ಬದಲು 180 ರಿಂದ 200 ರೂಪಾಯಿ ನೀಡಬೇಕಾಗಬಹುದು. ಇದರರ್ಥ ನೀವು ಎರಡು ಸಿಮ್‌ಗಳನ್ನು ಆನ್​ನಲ್ಲಿ ಇರಿಸಲು ಬಯಸಿದರೆ, ನೀವು ಮಾಸಿಕ ಕನಿಷ್ಠ 400 ರೂಪಾಯಿಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ.

ಇದರ ಜೊತೆಗೆ ರಿಲಯನ್ಸ್ ಜಿಯೋ, ಏರ್‌ಟೆಲ್ ಶೀಘ್ರದಲ್ಲೇ 5G ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ ಇದೆ. ಸದ್ಯಕ್ಕೆ 5ಜಿ ಯೋಜನೆ ಸಂಪೂರ್ಣ ಉಚಿತವಾಗಿದೆ. ಅಂದರೆ 4ಜಿ ಬೆಲೆಯಲ್ಲೇ 5ಜಿ ಕೂಡ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ನೀವು ಒಂದು ಸಿಮ್ 5G ಮತ್ತು ಇನ್ನೊಂದು ಸಿಮ್ 4G ಅನ್ನು ಇಟ್ಟುಕೊಂಡರೆ, ನಿಮ್ಮ ಮಾಸಿಕ ವೆಚ್ಚವು ಸುಮಾರು 50 ಪ್ರತಿಶತದಷ್ಟು ಹೆಚ್ಚಳವಾಗಲಿದೆ. ಏಕೆಂದರೆ 5G ಯೋಜನೆಯು 4G ಗಿಂತ ಅಧಿಕವಾಗಿರುವುದು ಖಚಿತ. ಇದು ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ.

ಪಾಕಿಸ್ತಾನದಲ್ಲಿ 5 ಲಕ್ಷ ಸಿಮ್ ಕಾರ್ಡ್ ಬ್ಲಾಕ್:

ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಪಾಕಿಸ್ತಾನ ತೆರಿಗೆ ಆದಾಯ ಹೆಚ್ಚಿಸಲು ಕಠಿಣ ನಿರ್ಧಾರ ಕೈಗೊಂಡಿದೆ. ಕಳೆದ ವರ್ಷ ತೆರಿಗೆ ರಿಟರ್ನ್ಸ್ ಸಲ್ಲಿಸದ 5 ಲಕ್ಷ ಜನರ ಮೊಬೈಲ್ ಫೋನ್ ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಆದೇಶಿಸಿದೆ. ಇತ್ತೀಚೆಗೆ ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ ತೆರಿಗೆ ಪಾವತಿಯ ವ್ಯಾಪ್ತಿಯನ್ನು ಹೆಚ್ಚಿಸುವತ್ತ ಗಮನಹರಿಸಿದೆ. ದೇಶಾದ್ಯಂತ 24 ಲಕ್ಷ ಜನರು ತೆರಿಗೆ ಪಾವತಿಸದಿರುವುದನ್ನು ಪತ್ತೆ ಹಚ್ಚಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷದ ಆದಾಯವನ್ನು ಘೋಷಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ನೋಟಿಸ್ ನೀಡಿದರೂ 5 ಲಕ್ಷ ಮಂದಿ ರಿಟರ್ನ್ಸ್ ಸಲ್ಲಿಸಿಲ್ಲ. ಪಾವತಿ ಮಾಡದವರ ಸಿಮ್ ಕಾರ್ಡ್‌ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಸೇರಿದಂತೆ ಎಲ್ಲಾ ಟೆಲಿಕಾಂ ಪೂರೈಕೆದಾರರಿಗೆ FBR ನಿರ್ದೇಶನ ನೀಡಿದೆ. ಮೇ 15ರೊಳಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ