ಇತ್ತೀಚೆಗೆ ವಾತಾವರಣದಿಂದ ರೋಗಗಳು ಹರಡುವುದು ಹೆಚ್ಚು. ಅದರಲ್ಲೂ ಈಗ ಮಾನ್ಸೂನ್ ಸಮಯದಲ್ಲಿ ರೋಗಗಳ ಕಾಲ ಎಂದು ಹೇಳಬಹುದು. ಈ ಕಾಲದಲ್ಲಿ ಜ್ವರ, ಡೆಂಗ್ಯೂ, ಇನ್ನೂ ಅನೇಕ ಅನಾರೋಗ್ಯಗಳ ಉಂಟಾಗುತ್ತದೆ. ಇಂತಹ ಸಮಯದಲ್ಲಿ ವೈದ್ಯರ ಬಳಿ ಆ ಪರೀಕ್ಷೆ ಈ ಪರೀಕ್ಷೆ ಎಂದು ಪದೇ ಪದೇ ಹೋಗಬೇಕಾಗುತ್ತದೆ. ಆದರೆ ಇನ್ನು ಮುಂದೆ ಆ ಕಷ್ಟ ನೀವು ತೆಗೆದುಕೊಳ್ಳಬೇಕಿಲ್ಲ. ಮನೆಯಲ್ಲಿ ಕುಳಿತು ಈ ಪರೀಕ್ಷೆಗಳನ್ನು ಮಾಡಲು ಹೊಸ ತಂತ್ರಜ್ಞಾನ ಬಂದಿದೆ. ಮನೆಯಲ್ಲಿಯೇ ಸ್ಮಾರ್ಟ್‌ಫೋನ್ ಮೂಲಕ ಜ್ವರ, ಡೆಂಗ್ಯೂಗಳ ಬಗ್ಗೆ ಪರೀಕ್ಷೆ ಮಾಡಬಹುದು. ಇದರ ಜತೆಗೆ ನಿಮ್ಮ ದೇಹದ ಉಷ್ಣತೆಯನ್ನು ಸಹ ನೀವು ಪರಿಶೀಲಿಸಬಹುದಾದ ಒಂದು ಆಪ್ಲಿಕೇಶನ್ನ್ನು ಪರಿಚಯ ಮಾಡಲಾಗಿದೆ. ಹೌದು ಸ್ಮಾರ್ಟ್ಫೋನ್ನಲ್ಲಿ ಫೀವರ್ ಡಿಟೆಕ್ಟರ್ ಅಪ್ಲಿಕೇಶನ್ನ್ನು ಪರಿಚಯಿಸಲಾಗಿದೆ. ಇದು ಥರ್ಮಾಮೀಟರ್‌ನಂತೆ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಆಪ್ಲಿಕೇಶನ್ನ್ನು ಡೌನ್‌ಲೋಡ್ ಮಾಡಿಕೊಂಡು. ನಿಮ್ಮ ದೇಹದಲ್ಲಿ ಆಗುವ ಆರೋಗ್ಯ ಬದಲಾವಣೆಗಳನ್ನು ಪತ್ತೆ ಮಾಡಬಹುದು. ನಂತರ ವೈದ್ಯರ ಸಲಹೆಯನ್ನು ಪಡೆದು ಮುಂದಿನ ಚಿಕಿತ್ಸೆ ಪಡೆಯಬಹುದು.
ವಾಷಿಂಗ್ಟನ್ ವಿಶ್ವವಿದ್ಯಾಲಯದ (ಯುಡಬ್ಲ್ಯು) ಸಂಶೋಧಕರು ಈ ಅಪ್ಲಿಕೇಶನ್ ಪತ್ತೆ ಮಾಡಿದ್ದಾರೆ. ಸ್ಮಾರ್ಟ್ಫೋನ್ನ್ನು ಥರ್ಮಾಮೀಟರ್ ಆಗಿ ಪರಿವರ್ತನೆ ಮಾಡಿ. ಇದಕ್ಕೆ ಫೀವರ್‌ಫೋನ್ ಅಪ್ಲಿಕೇಶನ್ ಎಂಬು ಹೆಸರಿನಿಂದ ಕರೆದಿದ್ದಾರೆ. ಯಾವುದೇ ಹಾರ್ಡ್‌ವೇರ್ ಸಂಪರ್ಕವಿಲ್ಲದೆಯೇ ನಿಮ್ಮ ಜ್ವರವನ್ನು ಪರೀಕ್ಷೆ ಮಾಡುತ್ತದೆ. ಇದನ್ನು UW ವಿದ್ಯಾರ್ಥಿ ಜೋಸೆಫ್ ಬ್ರೆಡಾ ಸಂಶೋಧನೆಯನ್ನು ಪ್ರಾರಂಭ ಮಾಡಿದ್ದಾರೆ.
ನಿಮ್ಮ ತಾಪಮಾನವನ್ನು ಅಪ್ಲಿಕೇಶನ್ ಮೂಲಕ ಫೋನ್‌ನಲ್ಲಿ ಮೇಲ್ವಿಚಾರಣೆ ಮಾಡಬಹುದು. ಈ ಅಪ್ಲಿಕೇಶನ್ ಫೋನ್ ಸಮೀಪದಲ್ಲಿರುವ ಯಾವುದೇ ಬಿಸಿ ವಸ್ತುಗಳನ್ನಾದರು ಪತ್ತೆ ಮಾಡುತ್ತದೆ. Feverfone ಅಪ್ಲಿಕೇಶನ್ ಅನ್ನು ಆನ್ ಮಾಡಿ, ನಂತರ ಅದನ್ನು ನಿಮ್ಮ ಹಣೆಯ ಮುಂದೆ ಹಿಡಿದುಕೊಳ್ಳಿ. ಫೋನಿನ ಟಚ್ ಸ್ಕ್ರೀನ್ ಹಣೆಯ ಮುಂದೆ ಇರುವಂತೆ ನೋಡಿಕೊಳ್ಳಿ. ಒಂದು ವೇಳೆ ಪರದೆಯ ಮೇಲೆ ತಾಪಮಾನವು ಬದಲಾದರೆ, ಜ್ವರ ಇದೆ ಎಂದು ತೋರಿಸಿದಂತೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಪ್ಲಿಕೇಶನ್ ಹೊರತುಪಡಿಸಿ ಇನ್ನೂ ಅನೇಕ ಅಪ್ಲಿಕೇಶನ್‌ಗಳಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೋಖ್ರಾನ್‌ನಲ್ಲಿ ಭಾರತ ಪರಮಾಣು ಪರೀಕ್ಷೆ ನಡೆಸಲು ಕಾರಣವೇನು?
ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಡೌನ್‌ಲೋಡ್ ಮಾಡಿದ್ದಾರೆ. ಈ ಅಪ್ಲಿಕೇಶನ್ ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸಬಹುದು, ಜತೆಗೆ ಇದರಿಂದ ನಿಮಗೆ ಜ್ವರವಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.
ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ 3.7 ರೇಟಿಂಗ್ ಪಡೆದುಕೊಂಡಿದ್ದು, ಇದುವರೆಗೆ 5 ಲಕ್ಷ ಬಳಕೆದಾರರು ಡೌನ್ ಲೋಡ್ ಮಾಡಿಕೊಂಡಿದ್ದಾರೆ.
ನೀವು ಈ ಅಪ್ಲಿಕೇಶನ್‌ನಿಂದ ನಿಮ್ಮ ದೇಹದ ಉಷ್ಣತೆಯನ್ನು ಪರಿಶೀಲಿಸಬಹುದು. ಈ ಆ್ಯಪ್ ಅನ್ನು ಇದುವರೆಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1 ಲಕ್ಷ ಬಳಕೆದಾರರು ಡೌನ್‌ಲೋಡ್ ಮಾಡಿಕೊಂಡಿದ್ದು, ಇದು 3.2 ರೇಟಿಂಗ್ ಅನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Wed, 9 August 23