Samsung Galaxy M14 5G: ಬಜೆಟ್ ದರಕ್ಕೆ ಸ್ಯಾಮ್​ಸಂಗ್ ಗ್ಯಾಲಕ್ಸಿ 5G ಸ್ಮಾರ್ಟ್​​ಫೋನ್

ಕಿರಣ್​ ಐಜಿ Edited By:

Updated on: Apr 19, 2023 | 9:49 AM

ಗ್ಯಾಲಕ್ಸಿ M14 5G ಫೋನ್, 4GB + 128GB ಆವೃತ್ತಿಯ Samsung Galaxy M14 5G ಬೆಲೆ ₹13,490 ಇದ್ದು, 6GB + 128GB ಆವೃತ್ತಿಯ Samsung Galaxy M14 5G ಬೆಲೆ ₹14,990 ದರವಿದೆ.

ಸ್ಯಾಮ್​ಸಂಗ್ ಭಾರತದ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತದೆ. ಅದರಲ್ಲೂ, ಜನರ ಅಗತ್ಯಕ್ಕೆ ತಕ್ಕಂತೆ, ಬಜೆಟ್ ದರದ ಮತ್ತು ಪ್ರೀಮಿಯಂ ಹಾಗೂ ಮಧ್ಯಮ ದರದ ಫೋನ್​ಗಳು ಸ್ಯಾಮ್​ಸಂಗ್ ಗ್ಯಾಲಕ್ಸಿ ಸರಣಿಯ ವಿಶೇಷತೆಯಾಗಿದೆ. ಗ್ಯಾಲಕ್ಸಿ ಎಸ್ ಪ್ರೀಮಿಯಂ ಸರಣಿಯದ್ದಾದರೆ, ಗ್ಯಾಲಕ್ಸಿ ಎ ಮಧ್ಯಮ ಬಜೆಟ್​ನ ಫೋನ್ ಮತ್ತು ಗ್ಯಾಲಕ್ಸಿ ಎಂ ಸರಣಿಯಲ್ಲಿ ಬಜೆಟ್ ದರಕ್ಕೆ ವಿವಿಧ ಫೋನ್ ಲಭ್ಯವಾಗುತ್ತದೆ. ಸ್ಯಾಮ್​ಸಂಗ್ ಗ್ಯಾಲಕ್ಸಿ ಎಂ ಸರಣಿಯಲ್ಲಿ ಹೊಸ M14 5G ಫೋನ್ ಬಿಡುಗಡೆ ಮಾಡಿದೆ. ಸ್ಯಾಮ್​ಸಂಗ್ ಎಕ್ಸಿನೊಸ್ 1330 ಪ್ರೊಸೆಸರ್ ಇರುವ ಗ್ಯಾಲಕ್ಸಿ M14 5G ಫೋನ್, 4GB + 128GB ಆವೃತ್ತಿಯ Samsung Galaxy M14 5G ಬೆಲೆ ₹13,490 ಇದ್ದು, 6GB + 128GB ಆವೃತ್ತಿಯ Samsung Galaxy M14 5G ಬೆಲೆ ₹14,990 ದರವಿದೆ. ನೀಲಿ, ಕಡು ನೀಲಿ ಮತ್ತು ಬೆಳ್ಳಿ ಬಣ್ಣದಲ್ಲಿ ಸ್ಯಾಮ್​ಸಂಗ್ ಆನ್​ಲೈನ್, ಅಮೆಜಾನ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ ಮೂಲಕ ಲಭ್ಯವಿದೆ. 6.6 ಇಂಚಿನ PLS LCD ಡಿಸ್​ಪ್ಲೇ ಹೊಂದಿರುವ ಸ್ಯಾಮ್​ಸಂಗ್ ಗ್ಯಾಲಕ್ಸಿ ಫೋನ್, Android 13 ಆಧಾರಿತ ಸ್ಯಾಮ್​ಸಂಗ್ One UI 5 ಬಳಕೆ ಮಾಡಲಾಗಿದೆ. 6000mAh ಬ್ಯಾಟರಿ ಮತ್ತು 25W ರಾಪಿಡ್ ಚಾರ್ಜಿಂಗ್ ಸೌಲಭ್ಯ, 50+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, 13 MP ಸೆಲ್ಫಿ ಕ್ಯಾಮೆರಾ ಇದರ ವಿಶೇಷತೆಯಾಗಿದೆ.

Published on: Apr 19, 2023 09:09 AM
Follow Us
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.