ಮೆಟಾ (Meta) ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಕಳೆದ ವರ್ಷದಂತೆ ಈ ವರ್ಷ ಕೂಡ ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಅನೇಕ ಅಪ್ಡೇಟ್ ನೀಡುವಲ್ಲಿ ಕೆಲಸ ಮಾಡುತ್ತಿದೆ. ಆಂಡ್ರಾಯ್ಡ್ (Android), ಐಒಎಸ್ಗೆ ಮಾತ್ರವಲ್ಲದೆ ಈಗೀಗ ವೆಬ್ ಬಳಕೆದಾರರಿಗೆ, ಟ್ಯಾಬ್ಲೆಟ್ನವರಿಗೆ ಕೂಡ ವಿನೂತನ ಫೀಚರ್ಗಳನ್ನು ನೀಡುತ್ತಿದೆ. ವಾಟ್ಸ್ಆ್ಯಪ್ಗೆ ಸೆಡ್ಡುಹೊಡೆಯುವಂತಹ ಅನೇಕ ಆ್ಯಪ್ಗಳು ಬಂದರೂ ಇದು ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಅನುಕೂಲಕರ ಫೀಚರ್ಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ (WhatsApp Status) ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ.
ವಾಟ್ಸ್ಆ್ಯಪ್ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುನ್ನ ಸೆಟ್ಟಿಂಗ್ಗೆ ಹೋಗಿ ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಎಲ್ಲರಿಗೆ ಕಾಣಬೇಕಾ? ಅಥವಾ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ? ಎಂಬ ಆಯ್ಕೆಯಿದೆ. ಇದರಿಂದ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು. ಹೀಗಿದ್ದಾಗ ಇದನ್ನು ನೋಡಲು ನಿಮಗೆ ವಾಟ್ಸ್ಆ್ಯಪ್ನಲ್ಲಿ ಸಾಧ್ಯವಿಲ್ಲ. ಆದರೆ, ಇದಕ್ಕೊಂದು ಟ್ರಿಕ್ ಇದೆ. ಹೀಗೆ ಮಾಡಿದರೆ ನಿಮ್ಮನ್ನ ಹೈಡ್ ಮಾಡಿ ನಿಮ್ಮ ಸ್ನೇಹಿತರು ಸ್ಟೇಟಸ್ ಹಾಕಿದರೆ ಅದನ್ನು ನೋಡಬಹುದು.
ಆದರೆ, ಈ ಆಯ್ಕೆ ನೇರವಾಗಿ ವಾಟ್ಸ್ಆ್ಯಪ್ ನೀಡಿಲ್ಲ. ಬದಲಾಗಿ ವಾಟ್ಸ್ಆ್ಯಪ್ ಅನ್ನು ಹಿಂಬಾಲಿಸಿಕೊಂಡು ಇದರಲ್ಲಿ ಇಲ್ಲದ ಕೆಲವು ಫೀಚರ್ಗಳನ್ನು ಅನೇಕ ಇತರೆ ಥರ್ಡ್ ಪಾರ್ಟಿ ಆ್ಯಪ್ಗಳು ನೀಡುತ್ತಿವೆ. ಇದರಲ್ಲಿ ಜಿಬಿ ವಾಟ್ಸ್ಆ್ಯಪ್ (GBWhatsApp) ಕೂಡ ಒಂದು. ಇದರ ಮೂಲಕ ವಾಟ್ಸ್ಆ್ಯಪ್ನಲ್ಲಿ ನಿಮ್ಮನ್ನ ಹೈಡ್ ಮಾಡಿ ಯಾರು ಸ್ಟೇಟಸ್ ಹಾಕಿದ್ದಾರೆ ತಿಳಿಯಬಹುದು.
ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿದ ಬಳಿಕ ಆ್ಯಪ್ ಐಕಾಲ್ ಮೇಲೆ ಕ್ಲಿಕ್ ಮಾಡಿ. ಓಪನ್ ಆದ ಕೂಡಲೆ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಿ. ಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ. ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಕೂಡ ಇದರಲ್ಲಿ ನೋಡಬಹುದು.
ಎಚ್ಚರ ವಹಿಸಿ:
ಜಿಬಿ ವಾಟ್ಸ್ಆ್ಯಪ್, ಇದೊಂದು ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು ಬಳಕೆ ಮಾಡುವ ಮುನ್ನ ಎಚ್ಚರವಹಿಸಿ. ಈ ಆ್ಯಪ್ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಈ ಆಯ್ಕೆ ಜಿಬಿ ವಾಟ್ಸ್ಆ್ಯಪ್ನ ನೂತನ ಆವೃತ್ತಿಯಲ್ಲಿ ಕೊಂಚ ಬದಲಾವಣೆ ಹೊಂದಿದೆ.
ವಾಟ್ಸ್ಆ್ಯಪ್ ಮತ್ತೊಂದು ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದೆ. ಅದುವೇ ಗ್ರೂಪ್‌ನಲ್ಲಿ ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ. ಅಂದರೆ ಬಳಕೆದಾರರು ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ