WhatsApp New Feature: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್

Vinay Bhat

|

Updated on: Mar 17, 2023 | 2:07 PM

ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್ (WhatsApp) ಇದೀಗ ತನ್ನ ಐಒಎಸ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡಿದೆ.

WhatsApp New Feature: ವಾಟ್ಸ್​ಆ್ಯಪ್ ಸ್ಟೇಟಸ್​ನಲ್ಲಿ ಮಹತ್ವದ ಬದಲಾವಣೆ: ಬಂದಿದೆ ಹೊಸ ಫೀಚರ್
WhatsApp Voice Status

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ ಕಳೆದ ವರ್ಷ ಪರಿಚಯಿಸಿದ ಫೀಚರ್​ಗಳಿಗೆ ಲೆಕ್ಕವಿಲ್ಲ. 2022 ರಲ್ಲಿ ಸಾಕಷ್ಟು ಬೆಳವಣಿಗೆ ಕಂಡ ವಾಟ್ಸ್​ಆ್ಯಪ್ ಈ ವರ್ಷ ಕೂಡ ವಿಶೇಷ ಅಪ್ಡೆಟ್​​​ಗಳನ್ನು ಪರಿಚಯಿಸುವಲ್ಲಿ ಕೆಸಲ ಮಾಡುತ್ತಿದೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್​ಆ್ಯಪ್ (WhatsApp) ಇದೀಗ ತನ್ನ ಐಒಎಸ್ ಬಳಕೆದಾರರಿಗೆ ಉಪಯುಕ್ತವಾದ ಆಯ್ಕೆಯನ್ನು ನೀಡಿದೆ. ಐಫೋನ್ ಬಳಕೆದಾರರಿಗೆ ವಾಯ್ಸ್ ಸ್ಟೇಟಸ್ ಫೀಚರ್ ಅನ್ನು ವಾಟ್ಸ್​ಆ್ಯಪ್ ಪರಿಚಯಿಸಿದ್ದು, ಇದರ ಮೂಲಕ​ ಸ್ಟೇಟಸ್​ನಲ್ಲಿ ವಾಯ್ಸ್ ಮೆಸೇಜ್ (Voice Message) ಅನ್ನು ಹಂಚಿಕೊಳ್ಳಬಹುದು.

ವಾಯ್ಸ್ ಸ್ಟೇಟಸ್ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಫೆಬ್ರವರಿಯಲ್ಲೇ ನೀಡಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಐಫೋನ್‌ ಬಳಕೆದಾರರಿಗೆ ಸಹ ಈ ಸೌಲಭ್ಯವನ್ನು ಕಲ್ಪಿಸಿದೆ. ಈವರೆಗೆ ಸ್ಟೇಟಸ್​ನಲ್ಲಿ ವಿಡಿಯೋ, ಫೋಟೋ, ಲಿಂಕ್​ ಮತ್ತು ಬರಹಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ ವಾಯ್ಸ್ ಸ್ಟೇಟಸ್ ಎಂಬ ಹೊಸ ಫೀಚರ್ ಮೂಲಕ ಬಳಕೆದಾರರು ಸ್ಟೇಟಸ್​ನಲ್ಲಿ ವಾಯ್ಸ್ ನೋಟ್ ಅಥವಾ ವಾಯ್ಸ್ ಕ್ಲಿಪ್​ಗಳನ್ನು ಶೇರ್ ಮಾಡಬಹುದಾಗಿದೆ.

ವಾಯ್ಸ್ ಸ್ಟೇಟಸ್ ಬಳಕೆದಾರರಿಗೆ 30 ಸೆಕೆಂಡ್​ಗಳ ಕಾಲ ಇರಲಿದೆ. ಇದಕ್ಕಾಗಿ ಬರಹಗಳನ್ನು ಹಂಚಿಕೊಳ್ಳಬಹುದಾದ ಜಾಗದಲ್ಲಿ ಮೈಕ್ರೊ ಫೋನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಇಲ್ಲಿ ಮೈಕ್ರೊ ಫೋನ್ ಮೇಲೆ ಕ್ಲಿಕ್ ಮಾಡುವ ಮೂಲಕ ವಾಯ್ಸ್ ಸ್ಟೇಟಸ್ ಶೇರ್ ಮಾಡಬಹುದು. ಇದು ಎಂಡ್-ಟು-ಎಂಡ್ ಎನ್​ಕ್ರಿಪ್ಟೆಡ್ ಆಗಿದೆ.

ಇದನ್ನೂ ಓದಿ

Poco X5 5G: 22 ನಿಮಿಷಗಳಲ್ಲಿ ಚಾರ್ಜ್ ಫುಲ್: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಪೋಕೋ X5 5G ಸ್ಮಾರ್ಟ್​ಫೋನ್ ಬಿಡುಗಡೆ

ವಾಟ್ಸ್​ಆ್ಯಪ್​ನಲ್ಲಿ ಇನ್ನಷ್ಟು ಅನೇಕ ಅಪ್ಡೇಟ್​ಗಳು ಬರಲಿಕ್ಕಿದೆ. ಇದರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವ ಎಕ್ಸ್​ಪೇರಿಂಗ್ ಗ್ರೂಪ್ ಫೀಚರ್ ಕೂಡ ಒಂದು. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ವಾಟ್ಸ್​ಆ್ಯಪ್ ಗ್ರೂಪ್​ನಲ್ಲಿ ಬದಲಾವಣೆ:

ವಾಟ್ಸ್​ಆ್ಯಪ್ ಮತ್ತೊಂದು ಹೊಸ ಫೀಚರ್ ಬಗ್ಗೆ ಘೋಷಣೆ ಮಾಡಿದೆ. ಅದುವೇ ಗ್ರೂಪ್​ನಲ್ಲಿ ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ. ಅಂದರೆ ಬಳಕೆದಾರರು ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್‌ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada