AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G

ರಿಲಯನ್ಸ್ ಜಿಯೋ ವಿವಿಧ ಆಫರ್ ಮತ್ತು ಡಿಸ್ಕೌಂಟ್ ಪ್ಲ್ಯಾನ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಅದರಲ್ಲೂ ಇತರ ನೆಟ್​ವರ್ಕ್​ಗಳಿಂದ ಹೆಚ್ಚಿನ ಸಂಖ್ಯೆಯ ಬಳಕೆದಾರರು ಜಿಯೋ ನೆಟ್​ವರ್ಕ್ ಸೇರಿಕೊಂಡಿದ್ದಾರೆ. ಈ ಬಾರಿ ರಿಲಯನ್ಸ್ ಜಿಯೋ ಆಕರ್ಷಕ, ವಾರ್ಷಿಕ ಪ್ಲ್ಯಾನ್ ಪರಿಚಯಿಸಿದೆ.

Jio 5G Recharge Offer: ರಿಲಯನ್ಸ್ ಜಿಯೋ ₹2,999 ರೀಚಾರ್ಜ್, 1 ವರ್ಷ ವ್ಯಾಲಿಡಿಟಿ, ಪ್ರತಿದಿನ 2.5GB 5G
ರಿಲಯನ್ಸ್ ಜಿಯೋ
ಕಿರಣ್​ ಐಜಿ
|

Updated on:Mar 16, 2023 | 7:02 PM

Share

ರಿಲಯನ್ಸ್ ಜಿಯೋ (Reliance Jio), ವಿವಿಧ ಕೊಡುಗೆಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿದೆ. ಅದರಲ್ಲೂ Jio 5G ಬಂದ ಮೇಲೆ, ಹೆಚ್ಚಿನ ಪ್ರದೇಶಗಳಲ್ಲಿ ಜಿಯೋ ಕವರೇಜ್ ಇದ್ದು, ಆಕರ್ಷಕ ಆಫರ್ ನೀಡುವ ಮೂಲಕ ಪ್ರತಿಸ್ಪರ್ಧಿ ಕಂಪನಿಗಳಿಗಿಂತಲೂ ಅಧಿಕ ಸಂಖ್ಯೆಯ ಬಳಕೆದಾರರನ್ನು ಸೆಳೆಯುತ್ತಿದೆ. ಈ ಬಾರಿ ಜಿಯೋ, ಪ್ರಿಪೇಯ್ಡ್ ಹೊಸ ಪ್ಲ್ಯಾನ್ ಪರಿಚಯಿಸಿದೆ. ಜಿಯೋ ₹2,999 ರೀಚಾರ್ಜ್ ಮಾಡಿದರೆ, 1 ವರ್ಷ ವ್ಯಾಲಿಡಿಟಿ ದೊರೆಯುತ್ತದೆ. ಅಲ್ಲದೆ, ಪ್ರತಿದಿನ 2.5 ಜಿಬಿ Jio 5G ಡೇಟಾ ದೊರೆಯಲಿದೆ. ಆಗಾಗ ರೀಚಾರ್ಜ್ ಮಾಡುವ ಬದಲು, ಒಮ್ಮೆಲೆ ವಾರ್ಷಿಕ ಪ್ಲ್ಯಾನ್ ರೀಚಾರ್ಜ್ ಮಾಡಿದರೆ, ಅದರಿಂದ ಉಳಿತಾಯವೂ, ಅನುಕೂಲವೂ ಆಗಲಿದೆ.

ರಿಲಯನ್ಸ್ ಜಿಯೋ ರಿಚಾರ್ಜ್ ಪ್ಲ್ಯಾನ್

ವಾರ್ಷಿಕ ಪ್ಲ್ಯಾನ್ ಬಯಸುವವರನ್ನು ಗಮನದಲ್ಲಿರಿಸಿಕೊಂಡು, ರಿಲಯನ್ಸ್ ಜಿಯೋ ಪರಿಚಯಿಸಿದೆ ಹೊಸ ರಿಚಾರ್ಜ್ ಪ್ಲ್ಯಾನ್. ಭಾರತದಲ್ಲಿನ ಪ್ರಿಪೇಯ್ಡ್ ಗ್ರಾಹಕರು ₹2,999 ಪ್ರಿಪೇಯ್ಡ್ ರೀಚಾರ್ಜ್ ಮಾಡಿದರೆ 1 ವರ್ಷ ವ್ಯಾಲಿಡಿಟಿ ದೊರೆಯಲಿದೆ. ಅಲ್ಲದೆ, ಈ ಪ್ಲ್ಯಾನ್​ನಲ್ಲಿ ಪ್ರತಿದಿನ 2.5 ಜಿಬಿ Jio 5G ಡೇಟಾ ಕೊಡುಗೆ ದೊರೆಯಲಿದೆ. ಅಂದರೆ, ಗ್ರಾಹಕರು ಈ ದೀರ್ಘಾವಧಿಯ ಪ್ಲ್ಯಾನ್ ರಿಚಾರ್ಜ್ ಮಾಡಿದರೆ, ವಾರ್ಷಿಕ 912.5GB ಡೇಟಾ ಅಂದರೆ ದಿನಕ್ಕೆ 2.5GB ಡೇಟಾ ಮಿತಿಯಂತೆ ದೊರೆಯಲಿದೆ.

ಇನ್ನಷ್ಟು ಜಿಯೋ ಕೊಡುಗೆಗಳು

ಜಿಯೋ ₹2,999 ಪ್ಲ್ಯಾನ್ ರಿಚಾರ್ಜ್ ಮಾಡುವ ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಸಿನಿಮಾ ಕೊಡುಗೆ ದೊರೆಯಲಿದೆ. ಈ ಬಗ್ಗೆ ಕಂಪನಿ ಪೋರ್ಟಲ್​ನಲ್ಲಿ ಹೊಸ ಆಫರ್ ವಿವರವನ್ನು ರಿಲಯನ್ಸ್ ಜಿಯೋ 5G ಪ್ರಕಟಿಸಿದೆ. ರಿಲಯನ್ಸ್ ಜಿಯೋ, ಈಗಾಗಲೇ 335 ನಗರಗಳಲ್ಲಿ ಜಿಯೋ 5G ನೆಟ್​ವರ್ಕ್ ಸ್ಥಾಪಿಸಿದೆ. 2023ರ ಕೊನೆಗೆ ದೇಶದ ಎಲ್ಲ ಪ್ರಮುಖ ನಗರಗಳಿಗೆ ಜಿಯೋ 5G ವಿಸ್ತರಣೆ ಮಾಡುವುದಾಗಿ ಕಂಪನಿ ಹೇಳಿದೆ. ಅಲ್ಲದೆ, ವಾರ್ಷಿಕ ಪ್ಲ್ಯಾನ್ ಬೇಡವಾದರೆ ಇತರ ಕಿರು ಅವಧಿಯ ಪ್ಲ್ಯಾನ್ ಲಭ್ಯವಿದೆ. ಪ್ರಿಪೇಯ್ಡ್ ಮತ್ತು ಪೋಸ್ಟ್​ಪೇಯ್ಡ್ ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ವಿವಿಧ ಪ್ರಿಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 pm, Thu, 16 March 23

ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು