WhatsApp New Feature: ವಾಟ್ಸ್​ಆ್ಯಪ್​ನಿಂದ ಅಚ್ಚರಿಯ ಅಪ್ಡೇಟ್: ಇನ್ಮುಂದೆ ಮೆಸೇಜ್ ಬಂದರೆ ನಂಬರ್ ಕಾಣಿಸುವುದಿಲ್ಲ

ಸಾಲು ಸಾಲು ಆಯ್ಕೆಗಳು ಪರೀಕ್ಷೆ ಹಂತದಲ್ಲಿ ಇರುವಾಗಲೇ ಮತ್ತೊಂದು ಹೊಸ ಫೀಚರ್ ಬಗ್ಗೆ ವಾಟ್ಸ್​ಆ್ಯಪ್ ಘೋಷಣೆ ಮಾಡಿದೆ. ಅದುವೇ ಗ್ರೂಪ್​ನಲ್ಲಿ (WhatsApp Group) ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ.

WhatsApp New Feature: ವಾಟ್ಸ್​ಆ್ಯಪ್​ನಿಂದ ಅಚ್ಚರಿಯ ಅಪ್ಡೇಟ್: ಇನ್ಮುಂದೆ ಮೆಸೇಜ್ ಬಂದರೆ ನಂಬರ್ ಕಾಣಿಸುವುದಿಲ್ಲ
WhatsApp
Follow us
Vinay Bhat
|

Updated on:Mar 17, 2023 | 12:25 PM

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ದಿನಕ್ಕೊಂದು ಹೊಸ ಹೊಸ ಅಪ್ಡೇಟ್ ಅನ್ನು ಘೋಷಣೆ ಮಾಡುತ್ತಿದೆ. ಆಂಡ್ರಾಯ್ಡ್, ಐಒಎಸ್​ಗೆ ಮಾತ್ರವಲ್ಲದೆ ಈಗೀಗ ವೆಬ್ ಬಳಕೆದಾರರಿಗೆ, ಟ್ಯಾಬ್ಲೆಟ್​ನವರಿಗೆ ಕೂಡ ವಿನೂತನ ಫೀಚರ್​ಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೆ ತನ್ನ ಬಳಕೆದಾರರಿಗೆ 21 ಹೊಸ ಎಮೋಜಿಗಳನ್ನು ನೀಡಿ ಅಚ್ಚರಿಗೊಳಿಸಿತ್ತು. ಇದರ ನಡುವೆ ಸಾಲು ಸಾಲು ಆಯ್ಕೆಗಳು ಪರೀಕ್ಷೆ ಹಂತದಲ್ಲಿ ಇರುವಾಗಲೇ ಮತ್ತೊಂದು ಹೊಸ ಫೀಚರ್ ಬಗ್ಗೆ ವಾಟ್ಸ್​ಆ್ಯಪ್ ಘೋಷಣೆ ಮಾಡಿದೆ. ಅದುವೇ ಗ್ರೂಪ್​ನಲ್ಲಿ (WhatsApp Group) ಫೋನ್ ನಂಬರ್ ಬದಲಿಗೆ ಹೆಸರು ಕಾಣಿಸುವಂತಹ ಆಯ್ಕೆ.

ಅಂದರೆ ಬಳಕೆದಾರರು ವಾಟ್ಸ್​ಆ್ಯಪ್​ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೆ ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್‌ ಸಂಖ್ಯೆ ಬದಲಿಗೆ ಹೆಸರುಗಳನ್ನು ತೋರಿಸುತ್ತದೆ. ಈ ಮೂಲಕ ನಂಬರ್ ಸೇವ್ ಮಾಡದೆ ಮೆಸೇಜ್ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಈ ಫೀಚರ್​ನ ಮತ್ತೊಂದು ಉಪಯೋಗ ಎಂದರೆ ದೊಡ್ಡ ಗ್ರೂಪ್‌ ಇದ್ದಾಗ ಅದರಲ್ಲಿ ಅನೇಕ ಸದಸ್ಯರು ಇರುತ್ತರೆ. ಆದರೆ, ಈ ಎಲ್ಲರ ಹೆಸರುಗಳನ್ನು ನೆನಪಿನಲ್ಲಿ ಇಡುವುದು ಅಥವಾ ಎಲ್ಲರ ಸಂಖ್ಯೆಗಳನ್ನು ಸೇವ್‌ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೀಗ ವಾಟ್ಸ್​ಆ್ಯಪ್ ಪರಿಚಯಿಸಲಿರುವ ಈ ಹೊಸ ಫೀಚರ್​ನಲ್ಲಿ ಸಂಖ್ಯೆಯ ಬದಲಿಗೆ ಹೆಸರನ್ನು ತೋರಿಸಲಾಗುವುದರಿಂದ ಯಾರು ಮೆಸೆಜ್‌ ಕಳುಹಿಸಿದ್ದಾರೆ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು.

ಇದನ್ನೂ ಓದಿ
Image
JIO True 5G: ಕರ್ನಾಟಕದ ಈ ಮೂರು ನಗರಗಳಲ್ಲಿ ಜಿಯೋ ಟ್ರೂ 5G ಸೇವೆ ಆರಂಭ: ಎಲ್ಲಿ ನೋಡಿ
Image
ಡೈವರ್​​ ಇಲ್ಲದೇ ಕಾರು ಓಡಿಸಬಹುದು, ಮಹೀಂದ್ರಾ XUV700 ನ ವೀಡಿಯೊ ವೈರಲ್
Image
Mozilla Firefox: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಮೊಝಿಲ್ಲಾ ಫೈರ್​ಫಾಕ್ಸ್ ಬಳಸುತ್ತಿದ್ದೀರಾ? ಎಚ್ಚರಿಕೆ!
Image
Flipkart Big Saving Days Sale: ಇಂದು ಕೊನೇ ದಿನ: ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ಗಳನ್ನು ಕಡಿಮೆಗೆ ಖರೀದಿಸಿ

Meta Layoff: ಮೆಟಾದಿಂದ ಎರಡನೇ ಸುತ್ತಿನ ಉದ್ಯೋಗ ಕಡಿತ ಘೋಷಣೆ; ಕೆಲಸ ಕಳೆದುಕೊಳ್ಳಲಿದ್ದಾರೆ 10 ಸಾವಿರ ಮಂದಿ

ವಾಟ್ಸ್​ಆ್ಯಪ್​ನ ಈ ಫೀಚರ್ ಆಂಡ್ರಾಯ್ಡ್ ಬಳಕೆದಾರರಿಗೆ ಇತ್ತೀಚಿನ ವಾಟ್ಸಾಪ್‌ 2.23.5.12 ಅಪ್‌ಡೇಟ್‌ನಲ್ಲಿ ಮತ್ತು iOS ಬಳಕೆದಾರರಿಗೆ ಇತ್ತೀಚಿನ 23.5.0.73 ಅಪ್‌ಡೇಟ್‌ನಲ್ಲಿ ಲಭ್ಯವಾಗಲಿದ್ದು, ಪರೀಕ್ಷೆಯ ನಂತರ ಎಲ್ಲಾ ಬಳಕೆದಾರರಿಗೂ ಲಭ್ಯವಿರುತ್ತದೆ ಎಂದು ಮೆಟಾ ಹೇಳಿದೆ.

ವಾಟ್ಸ್​ಆ್ಯಪ್​ನಲ್ಲಿ 21 ಹೊಸ ಎಮೋಜಿ:

ಈ ಹೊಸ ಎಮೋಜಿಗಳನ್ನು ವಾಟ್ಸ್​ಆ್ಯಪ್​ ಕೀಬೋರ್ಡ್‌ನಿಂದ ನೇರವಾಗಿ ಸೆಂಡ್‌ ಮಾಡಬಹುದಾಗಿದೆ. ವಾಬೇಟಾಇನ್ಫೋ ಪ್ರಕಾರ ಯುನಿಕೋಡ್ 15.0 ನಿಂದ ಈ 21 ಎಮೋಜಿಗಳನ್ನು ಕಳುಹಿಸಲು ಬೇರೆ ಕೀಬೋರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಸದ್ಯದ ಮಾಹಿತಿಯ ಪ್ರಕಾರ, ಕೆಲವು ಬಳಕೆದಾರರಿಗೆ ಈಗಾಗಲೇ ಅಧಿಕೃತ ವಾಟ್ಸ್​ಆ್ಯಪ್​ ಕೀಬೋರ್ಡ್‌ ಮೂಲಕ ಈ ಹೊಸ ಎಮೋಜಿಗಳನ್ನು ಉಪಯೋಗಿಸಬಹುದಾಗಿದೆ. ಇದರ ಮೂಲಕ ಬಳಕೆದಾರರು ಸಂದೇಶದ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳನ್ನು ಕೆಲವೇ ಎಮೋಜಿಗಳಲ್ಲಿ ತಿಳಿಸಬಹುದು. ನಿಮಗೂ ಆಯ್ಕೆ ಬೇಕು ಎಂದಾದಲ್ಲಿ ವಾಟ್ಸ್​ಆ್ಯಪ್​ ಖಾತೆಯಲ್ಲಿಯೂ ನೂತನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕು.

ಎಕ್ಸ್​ಪೇರಿಂಗ್ ಗ್ರೂಪ್:

ಎಕ್ಸ್​ಪೇರಿಂಗ್ ಗ್ರೂಪ್ ಎಂಬ ಫೀಚರ್ ಮೇಲೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:44 pm, Thu, 16 March 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್