AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mozilla Firefox: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಮೊಝಿಲ್ಲಾ ಫೈರ್​ಫಾಕ್ಸ್ ಬಳಸುತ್ತಿದ್ದೀರಾ? ಎಚ್ಚರಿಕೆ!

ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಇಂಟರ್​ನೆಟ್ ಬ್ರೌಸಿಂಗ್ ಮಾಡಲು ಮೊಝಿಲ್ಲಾ ಫೈರ್​ಫಾಕ್ಸ್ ಬಳಸುತ್ತಿರುವವರಿಗೆ ಸರ್ಟ್-ಇನ್ ಪ್ರಮುಖ ಎಚ್ಚರಿಕೆ ನೀಡಿದೆ. ಬಳಕೆದಾರರು ಕೂಡಲೇ ಗೂಗಲ್ ಪ್ಲೇ ಸ್ಟೋರ್ ಮೂಲಕ ತಮ್ಮ ಅಪ್ಲಿಕೇಶನ್ ಅನ್ನು ಅಪ್​ಡೇಟ್ ಮಾಡಿಕೊಳ್ಳುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮವೆನಿಸಿದೆ.

Mozilla Firefox: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಮೊಝಿಲ್ಲಾ ಫೈರ್​ಫಾಕ್ಸ್ ಬಳಸುತ್ತಿದ್ದೀರಾ? ಎಚ್ಚರಿಕೆ!
ಮೊಝಿಲ್ಲಾ ಫೈರ್​ಫಾಕ್ಸ್
Follow us
ಕಿರಣ್​ ಐಜಿ
|

Updated on:Mar 15, 2023 | 12:42 PM

ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸರ್ಟ್​-ಇನ್) ಮೊಝಿಲ್ಲಾ ಫೈರ್​ಫಾಕ್ಸ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದು, ಕೂಡಲೇ ಆ್ಯಪ್​ ಅಪ್​ಡೇಟ್ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ. ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿರುವ ಮೊಝಿಲ್ಲಾ ಫೈರ್​ಫಾಕ್ಸ್(Mozilla Firefox) ಅಪ್ಲಿಕೇಶನ್​ನಲ್ಲಿ ದೋಷ ಕಾಣಿಸಿಕೊಂಡಿದೆ. ಹೀಗಾಗಿ, ಸೈಬರ್ ದಾಳಿಯನ್ನು ತಡೆಯಲು ಆ್ಯಪ್ ಅಪ್​ಡೇಟ್ ಮಾಡುವುದು ಕಡ್ಡಾಯವಾಗಿದೆ.

ಏನಾಯ್ತು ಮೊಝಿಲ್ಲಾ ಫೈರ್​ಫಾಕ್ಸ್​ಗೆ?

ಮೊಝಿಲ್ಲಾ ಫೈರ್​ಫಾಕ್ಸ್ ಬ್ರೌಸರ್​ನಲ್ಲಿ ಇರುವ ದೋಷವೊಂದು, ಹ್ಯಾಕರ್ಸ್ ನೇರವಾಗಿ ಆ್ಯಪ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಅದರ ಮೂಲಕ ಕುಳಿತಲ್ಲಿಂದಲೇ ನಿಮ್ಮ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾಗಿದೆ. ಜತೆಗೆ, ಸ್ಮಾರ್ಟ್​ಫೋನ್​ನಲ್ಲಿ ಇರುವ ವೈಯಕ್ತಿಕ, ಬ್ಯಾಂಕಿಂಗ್ ವಿವರವನ್ನು ಕದಿಯಬಹುದಾಗಿದೆ. ಹೀಗೆ, ಕಳ್ಳಮಾರ್ಗದ ಮೂಲಕ ಹ್ಯಾಕರ್ಸ್ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್ (Android Smartphone) ಅನ್ನು ಪ್ರವೇಶಿಸಿ, ಅಲ್ಲಿ ಸಮಸ್ಯೆ ಸೃಷ್ಟಿಸಲು ಅನುವು ಮಾಡಿಕೊಡುತ್ತದೆ.

ಯಾವೆಲ್ಲಾ ಮೊಝಿಲ್ಲಾ ಫೈರ್​ಫಾಕ್ಸ್ ಆವೃತ್ತಿಗೆ ಸಮಸ್ಯೆ?

ಸರ್ಟ್-ಇನ್ ಸೂಚನೆಯ ಪ್ರಕಾರ, ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿನ ಮೊಝಿಲ್ಲಾ ಫೈರ್​ಫಾಕ್ಸ್ ಬಳಕೆದಾರರು ಮಾತ್ರ ಈ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ, ಕೂಡಲೇ ಗೂಗಲ್ ಪ್ಲೇ ಸ್ಟೋರ್ ಮೂಲಕ ಪರಿಷ್ಕೃತ ಆವೃತ್ತಿ ಅಪ್​ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಉಳಿದಂತೆ, ಐಓಎಸ್, ವಿಂಡೋಸ್, ಮ್ಯಾಕ್ ಆವೃತ್ತಿಯ ಮೊಝಿಲ್ಲಾ ಫೈರ್​ಫಾಕ್ಸ್ ಯಾವುದೇ ಸಮಸ್ಯೆಗೆ ಸಿಲುಕಿಲ್ಲ.

ಆ್ಯಂಡ್ರಾಯ್ಡ್ ಬಳಕೆದಾರರು ಏನು ಮಾಡಬೇಕು?

ನಿಮ್ಮ ಸ್ಮಾರ್ಟ್​ಫೋನ್​ನಲ್ಲಿರುವ ಮೊಝಿಲ್ಲಾ ಫೈರ್​ಫಾಕ್ಸ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್​​ಗೆ ಹೋಗಿ, ಅಲ್ಲಿಂದ ಅಪ್​ಡೇಟ್ ಮಾಡಿಕೊಳ್ಳಿ. ಮೊಝಿಲ್ಲಾ ಫೈರ್​ಫಾಕ್ಸ್ 110.1.0 ಆ್ಯಂಡ್ರಾಯ್ಡ್ ಆವೃತ್ತಿಗಿಂತ ಮುಂಚಿನದ್ದಾಗಿದ್ದರೆ, ಕೂಡಲೇ ಅಪ್​ಡೇಟ್ ಮಾಡಿಕೊಳ್ಳುವುದು ಉತ್ತಮ ಮತ್ತು ಸುರಕ್ಷಿತ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Wed, 15 March 23

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ