WhatsApp New Feature: ವಾಟ್ಸ್​ಆ್ಯಪ್ ಪ್ರಿಯರಿಗೆ ಬಂಪರ್ ಸುದ್ದಿ: 21 ಹೊಸ ಎಮೋಜಿ ಸೇರ್ಪಡೆ

WhatsApp Update: ಎರಡು ದಿನಗಳ ಹಿಂದೆಯಷ್ಟೆ ಎಕ್ಸ್​ಪೇರಿಂಗ್ ಗ್ರೂಪ್ ಫೀಚರ್ಸ್ ನೀಡುವುದಾಗಿ ಘೋಷಣೆ ಮಾಡಿದ್ದ ವಾಟ್ಸ್​ಆ್ಯಪ್ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಿದೆ. ಇದೀಗ ಬಳಕೆದಾರರಿಗೆ ಹೊಸದಾಗಿ 21 ಎಮೋಜಿಗಳನ್ನು ಪರಿಚಯಿಸಿದೆ.

WhatsApp New Feature: ವಾಟ್ಸ್​ಆ್ಯಪ್ ಪ್ರಿಯರಿಗೆ ಬಂಪರ್ ಸುದ್ದಿ: 21 ಹೊಸ ಎಮೋಜಿ ಸೇರ್ಪಡೆ
WhatsApp emojis
Follow us
|

Updated on: Mar 13, 2023 | 12:18 PM

ವಾಟ್ಸ್​ಆ್ಯಪ್ (WhatsApp) ಪ್ರತಿ ದಿನ ಒಂದಲ್ಲ ಒಂದು ಹೊಸ ಫೀಚರ್​ಗಳ ಘೋಷಣೆ ಮಾಡುತ್ತಲೇ ಇದೆ. ಈಗಾಗಲೇ ತನ್ನ ಬಳಕೆದಾರರನ್ನು 2000 ಮಿಲಿಯನ್​ಗೆ ತಲುಪಿಸಿರುವ ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಅಗತ್ಯವಿರುವ ಎಲ್ಲ ಆಯ್ಕೆಗಳನ್ನು ಒಂದೊಂದಾಗಿ ನೀಡುತ್ತಿರುವ ಇದರಲ್ಲಿ ಆಂಡ್ರಾಯ್ಡ್ (Android), ಐಒಎಸ್, ಟ್ಯಾಬ್ಲೆಟ್ ಹಾಗೂ ವೆಬ್ ಬಳಕೆದಾರರಿಗೆ ನೂತನ ಫೀಚರ್ಸ್ ನೀಡುವಲ್ಲಿ ನಿರತವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಎಕ್ಸ್​ಪೇರಿಂಗ್ ಗ್ರೂಪ್ ಫೀಚರ್ಸ್ ನೀಡುವುದಾಗಿ ಘೋಷಣೆ ಮಾಡಿದ್ದ ಕಂಪನಿ ಮತ್ತೊಂದು ಉಪಯುಕ್ತ ಆಯ್ಕೆಯನ್ನು ನೀಡಿದೆ. ಇದೀಗ ಬಳಕೆದಾರರಿಗೆ ಹೊಸದಾಗಿ 21 ಎಮೋಜಿಗಳನ್ನು ಪರಿಚಯಿಸಿದೆ.

ಈ ಹೊಸ ಎಮೋಜಿಗಳನ್ನು ವಾಟ್ಸ್​ಆ್ಯಪ್​ ಕೀಬೋರ್ಡ್‌ನಿಂದ ನೇರವಾಗಿ ಸೆಂಡ್‌ ಮಾಡಬಹುದಾಗಿದೆ. ವಾಬೇಟಾಇನ್ಫೋ ಪ್ರಕಾರ ಯುನಿಕೋಡ್ 15.0 ನಿಂದ ಈ 21 ಎಮೋಜಿಗಳನ್ನು ಕಳುಹಿಸಲು ಬೇರೆ ಕೀಬೋರ್ಡ್ ಅನ್ನು ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಸದ್ಯದ ಮಾಹಿತಿಯ ಪ್ರಕಾರ, ಕೆಲವು ಬಳಕೆದಾರರಿಗೆ ಈಗಾಗಲೇ ಅಧಿಕೃತ ವಾಟ್ಸ್​ಆ್ಯಪ್​ ಕೀಬೋರ್ಡ್‌ ಮೂಲಕ ಈ ಹೊಸ ಎಮೋಜಿಗಳನ್ನು ಉಪಯೋಗಿಸಬಹುದಾಗಿದೆ. ಇದರ ಮೂಲಕ ಬಳಕೆದಾರರು ಸಂದೇಶದ ಮೂಲಕ ವ್ಯಕ್ತಪಡಿಸಬಹುದಾದ ಭಾವನೆಗಳನ್ನು ಕೆಲವೇ ಎಮೋಜಿಗಳಲ್ಲಿ ತಿಳಿಸಬಹುದು. ನಿಮಗೂ ಆಯ್ಕೆ ಬೇಕು ಎಂದಾದಲ್ಲಿ ವಾಟ್ಸ್​ಆ್ಯಪ್​ ಖಾತೆಯಲ್ಲಿಯೂ ನೂತನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕು.

Redmi 12C: ಶವೋಮಿಯಿಂದ ಅತಿ ಕಡಿಮೆ ಬೆಲೆಗೆ ರೆಡ್ಮಿ 12C ಸ್ಮಾರ್ಟ್‌ಫೋನ್‌ ಬಿಡುಗಡೆ: ಎಷ್ಟು ರೂ. ಗೊತ್ತೇ?

ಇದನ್ನೂ ಓದಿ
Image
Moto G72: ನೀವು ಫೋಟೋಗ್ರಫಿ ಮಾಡ್ತೀರಾ?: 108MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
Image
Tech Tips: ಆನ್​ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?: ಇಲ್ಲಿದೆ ಟಿಪ್ಸ್
Image
Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಯಿತು ಬಿಗ್ ಸೇವಿಂಗ್ ಡೇಸ್: ಈ ಬಾರಿಯ ಆಫರ್ ಕೇಳಿದ್ರೆ ದಂಗಾಗ್ತೀರ
Image
Oppo Reno 7 Pro 5G: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ ರೆನೋ 7 ಪ್ರೊ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಅತಿ ಕಡಿಮೆ ಬೆಲೆಗೆ ಲಭ್ಯ

ಎಕ್ಸ್​ಪೇರಿಂಗ್ ಗ್ರೂಪ್:

ಎಕ್ಸ್​ಪೇರಿಂಗ್ ಗ್ರೂಪ್ ಎಂಬ ಫೀಚರ್ ಮೇಲೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ಐಒಎಸ್​​ನಲ್ಲಿ ಹೊಸ ಫೀಚರ್:

ವಾಟ್ಸ್​ಆ್ಯಪ್ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಚಾಟ್‌ ಪಟ್ಟಿಯೊಳಗೆ ಪುಶ್‌ ಹೆಸರು (“Push name within the chat list”) ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದು ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣಿಸುತ್ತದೆ. ಇದರಿಂದ ಪ್ರತಿ ಭಾರಿಯು ಮೆಸೇಜ್ ಕಳುಹಿಸಿದ ಸಂದೇಶವನ್ನು ಕಾಣುವ ಬದಲಿಗೆ ಪುಶ್‌ ನೇಮ್‌ ನಿಮಗೆ ಕಾಣಿಸಲಿದೆ. ಈ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್‌ ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದು. ಅಲ್ಲದೆ ನೀವು ಪ್ರತಿ ಭಾರಿ ಸಂದೇಶ ಕಳುಹಿಸುವ ಸಂಖ್ಯೆಯನ್ನು ಸೇವ್‌ ಮಾಡಬೇಕಾದ ಅನಿವಾರ್ಯತೆ ಕೂಡ ಬರುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್