WhatsApp Features: ಸೈಲೆಂಟ್ ಆಗಿರುವ ವಾಟ್ಸ್​ಆ್ಯಪ್ ಗ್ರೂಪ್​ಗಳಿಗೆ ಶಾಕ್: ಬರುತ್ತಿದೆ ಹುಬ್ಬೇರಿಸುವ ಫೀಚರ್

WhatsApp Group: ಬರ್ತ್ ಡೇ ಪಾರ್ಟಿ, ಮದುವೆಗೆ ಸಂಬಂಧಿಸಿದ ಗ್ರೂಪ್ ಅಥವಾ ಕಾಲೇಜು ಸ್ನೇಹಿತರ ಗ್ರೂಪ್​ ಕ್ರಿಯೆಟ್ ಆಗಿರುತ್ತದೆ. ಆದರೆ, ಅದು ಕೆಲವು ದಿನಗಳ ವರೆಗೆ ಮಾತ್ರ ನಂತರ ಆ್ಯಕ್ಟಿವ್ ಇರುವುದಿಲ್ಲ. ಇದಕ್ಕೀಗ ವಾಟ್ಸ್​ಆ್ಯಪ್ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

WhatsApp Features: ಸೈಲೆಂಟ್ ಆಗಿರುವ ವಾಟ್ಸ್​ಆ್ಯಪ್ ಗ್ರೂಪ್​ಗಳಿಗೆ ಶಾಕ್: ಬರುತ್ತಿದೆ ಹುಬ್ಬೇರಿಸುವ ಫೀಚರ್
WhatsApp
Follow us
ವಿವೇಕ ಬಿರಾದಾರ
| Updated By: Vinay Bhat

Updated on:Mar 10, 2023 | 1:02 PM

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಇಂದು ವಿನೂತನ ಫೀಚರ್​ಗಳನ್ನು ಪರಿಚಯಿಸಿ ತನ್ನ ತೆಕ್ಕೆಗೆ ಕೋಟ್ಯಾಂತರ ಬಳಕೆದಾರರನ್ನು ಸೇರಿಸಿಕೊಂಡಿದೆ. ದಿನಕ್ಕೊಂದರಂತೆ ಹೊಸ ಹೊಸ ಆಯ್ಕೆಗಳ ಬಗ್ಗೆ ಘೋಷಣೆ ಮಾಡುವ ವಾಟ್ಸ್​ಆ್ಯಪ್ ಇದೀಗ ಬಳಕೆದಾರರಿಗೆ ಉಪಯುಕ್ತ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ವಾಟ್ಸ್​ಆ್ಯಪ್​ನಲ್ಲಿ ನೀವು ಗ್ರೂಪ್ (WhatsApp Group) ಕ್ರಿಯೆಟ್ ಮಾಡಿರುತ್ತೀರಿ ಅಥವಾ ಗ್ರೂಪ್​ನ ಸದಸ್ಯರಾಗಿರುತ್ತೀರಿ. ಬರ್ತ್ ಡೇ ಪಾರ್ಟಿ, ಮದುವೆಗೆ ಸಂಬಂಧಿಸಿದ ಗ್ರೂಪ್ ಅಥವಾ ಕಾಲೇಜು ಸ್ನೇಹಿತರ ಗ್ರೂಪ್​ ಕ್ರಿಯೆಟ್ ಆಗಿರುತ್ತದೆ. ಆದರೆ, ಅದು ಕೆಲವು ದಿನಗಳ ವರೆಗೆ ಮಾತ್ರ ನಂತರ ಆ್ಯಕ್ಟಿವ್ ಇರುವುದಿಲ್ಲ. ಇದು ನಿಮ್ಮ ಸ್ಟೋರೇಜ್ (Storage) ಅನ್ನು ಭರ್ತಿ ಮಾಡುತ್ತಿರುತ್ತದೆ. ಇದಕ್ಕೀಗ ವಾಟ್ಸ್​ಆ್ಯಪ್ ಹೊಸ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.

ಎಕ್ಸ್​ಪೇರಿಂಗ್ ಗ್ರೂಪ್ ಎಂಬ ಫೀಚರ್ ಮೇಲೆ ವಾಟ್ಸ್​ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ಗೆ ಮುಕ್ತಾಯದ ದಿನಾಂಕ ಎಂಬುದನ್ನು ನಿಗದಿ ಮಾಡಿರಲಾಗುತ್ತದೆ. ಆ ಸಮಯ ಬಂದ ನಂತರ ವಾಟ್ಸ್​ಆ್ಯಪ್ ನಿಮಗೆ ಆ ಗ್ರೂಪ್​ನಿಂದ ಹಿಂದೆ ಸರಿಯಲು ಮತ್ತು ಅಡ್ಮಿನ್​ಗೆ ಗ್ರೂಪ್ ಡಿಲೀಟ್ ಮಾಡಲು ಅಲರ್ಟ್ ಮಾಡುತ್ತಾ ಇರುತ್ತದೆ. ಈ ಆಯ್ಕೆ ವಾಟ್ಸ್​ಆ್ಯಪ್ ಗ್ರೂಪ್ ಇನ್​ಫೋ ದಲ್ಲಿ ಇರುತ್ತದೆ. ಅಂತೆಯೆ ಈ ಮುಕ್ತಾಯದ ದಿನಾಂಕವನ್ನು ಬದಲಾವಣೆ ಮಾಡುವ ಅವಕಾಶ ಕೂಡ ಇರುತ್ತದಂತೆ. ಇದರ ಮೂಲಕ ಆ್ಯಕ್ಟಿವ್ ಇಲ್ಲದ ಗ್ರೂಪ್​ನಿಂದ ನೀವು ಹಿಂದೆ ಸರಿದು ಮೆಮೋರಿಯನ್ನು ಉಳಿತಾಯ ಮಾಡಬಹುದು.

ಐಒಎಸ್​​ನಲ್ಲಿ ಹೊಸ ಫೀಚರ್:

ಇದನ್ನೂ ಓದಿ
Image
Moto G73 5G: ಭಾರತೀಯ ಮಾರುಕಟ್ಟೆಗೆ ಇಂದು ಅಪ್ಪಳಿಸಲಿದೆ ಮೋಟೋ ಕಂಪನಿಯ ಹೊಸ ಸ್ಮಾರ್ಟ್​ಫೋನ್: ಯಾವುದು ನೋಡಿ
Image
Poco X5 5G: ದೇಶದ ಗ್ಯಾಜೆಟ್ ಲೋಕಕ್ಕೆ ಲೇಟೆಸ್ಟ್ ಎಂಟ್ರಿ ಪೋಕೊ ಫೋನ್
Image
iPhone 14: ಐಫೋನ್ ಪ್ರಿಯರಿಗೆ ಸಂತಸದ ಸುದ್ದಿ: ಹೊಸ ಕಲರ್​ನಲ್ಲಿ ಬಂತು ಐಫೋನ್ 14, ಐಫೋನ್ 14 ಪ್ಲಸ್
Image
Samsung Galaxy M14 5G: ಸ್ಯಾಮ್​ಸಂಗ್​ನಿಂದ 6000mAh ಸಾಮರ್ಥ್ಯದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?

ವಾಟ್ಸ್​ಆ್ಯಪ್ ಐಒಎಸ್‌ ಬೀಟಾ ವರ್ಷನ್‌ನಲ್ಲಿ ಚಾಟ್‌ ಪಟ್ಟಿಯೊಳಗೆ ಪುಶ್‌ ಹೆಸರು (“Push name within the chat list”) ಫೀಚರ್ಸ್‌ ಸೇರ್ಪಡೆ ಮಾಡಲು ಮುಂದಾಗಿದೆ. ಇದು ವಾಟ್ಸ್​ಆ್ಯಪ್​ನಲ್ಲಿ ಅಪರಿಚಿತ ಗುಂಪಿನ ಸದಸ್ಯರಿಂದ ಯಾವುದೇ ಸಂದೇಶ ಬಂದರೆ ಚಾಟ್‌ ಲಿಸ್ಟ್‌ನಲ್ಲಿ ಪುಶ್‌ ನೇಮ್‌ಗಳನ್ನು ಕಾಣಿಸುತ್ತದೆ. ಇದರಿಂದ ಪ್ರತಿ ಭಾರಿಯು ಮೆಸೇಜ್ ಕಳುಹಿಸಿದ ಸಂದೇಶವನ್ನು ಕಾಣುವ ಬದಲಿಗೆ ಪುಶ್‌ ನೇಮ್‌ ನಿಮಗೆ ಕಾಣಿಸಲಿದೆ. ಈ ಮೂಲಕ ಬಳಕೆದಾರರು ಅಪರಿಚಿತ ಕಂಟ್ಯಾಕ್ಟ್‌ ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದು. ಅಲ್ಲದೆ ನೀವು ಪ್ರತಿ ಭಾರಿ ಸಂದೇಶ ಕಳುಹಿಸುವ ಸಂಖ್ಯೆಯನ್ನು ಸೇವ್‌ ಮಾಡಬೇಕಾದ ಅನಿವಾರ್ಯತೆ ಕೂಡ ಬರುವುದಿಲ್ಲ.

ಅಪರಿಚಿತ ಕರೆಗಳನ್ನು ಮ್ಯೂಟ್ ಮಾಡಿ:

ಅಪರಿಚಿತ ಕರೆಗಳನ್ನು ಮ್ಯೂಟ್ ಮಾಡುವಂತಹ ಆಯ್ಕೆಯನ್ನು ವಾಟ್ಸ್​ಆ್ಯಪ್ ನೀಡಲು ಮುಂದಾಗಿದೆ. ಅಂದರೆ ಎಲ್ಲ ಅಪರಿಚಿತ ಸಂಖ್ಯೆಗಳು ಅಥವಾ ಸೇವ್‌ ಮಾಡಿರದ ಕಾಂಟೆಕ್ಟ್​ಗಳಿಂದ ಬರುವ ಕರೆಗಳ ವಿರುದ್ಧ ಇದು ಕ್ರಮ ಕೈಗೊಳ್ಳುತ್ತದೆ. ಆರಂಭದಲ್ಲಿ ಆಂಡ್ರಾಯ್ಡ್‌ ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ. ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನ ವಾಟ್ಸ್​ಆ್ಯಪ್ ಸೆಟ್ಟಿಂಗ್‌ ವಿಭಾಗದಲ್ಲಿ ‘ಅನಾಮಿಕ ಕರೆ ಮಾಡುವವರನ್ನು ಮ್ಯೂಟ್‌ ಮಾಡು’ ಎಂಬ ಫೀಚರ್ಸ್‌ ಕಾಣಿಸಲಿದೆ. ಇದರಲ್ಲಿ ಆನ್‌ ಹಾಗೂ ಆಫ್‌ ಎಂಬ ಆಯ್ಕೆಯನ್ನು ನೀಡಲಾಗಿದ್ದು, ನೀವು ಇದನ್ನು ಆಫ್‌ ಮಾಡಿದಾಗ ಅಪರಿಚಿತ ನಂಬರ್​ನಿಂದ ವಾಟ್ಸ್​ಆ್ಯಪ್ ಕಾಲ್‌ ಬರುವುದಿಲ್ಲ. ಆದರೆ, ನೋಟಿಫಿಕೇಶನ್‌ ಬಾರ್‌ನಲ್ಲಿ ಈ ಕರೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಶೀಘ್ರದಲ್ಲೇ ಪರೀಕ್ಷೆ ಉದ್ದೇಶಕ್ಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Fri, 10 March 23