Samsung Galaxy M14 5G: ಸ್ಯಾಮ್ಸಂಗ್ನಿಂದ 6000mAh ಸಾಮರ್ಥ್ಯದ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ: ಯಾವುದು?, ಬೆಲೆ ಎಷ್ಟು?
ದಕ್ಷಿಣ ಕೊರಿಯಾ ಮೂಲದ ಕಂಪನಿ ಸ್ಯಾಮ್‌ಸಂಗ್ ತನ್ನ M ಸರಣಿಯಲ್ಲಿ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಅದುವೇ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್14 5ಜಿ (Samsung Galaxy M14 5G).
ಸ್ಯಾಮ್‌ಸಂಗ್ (Samsung) ಕಂಪನಿ ಗ್ಯಾಲಕ್ಸಿ M ಸರಣಿಯ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಬೇಡಿಕೆ ಇದೆ. ಈ ಸರಣಿಯ ಫೋನ್ಗಳು ಬಿಡುಗಡೆ ಆಯಿತು ಎಂದಾದರೆ ಅದು ಬೊಂಬಾಟ್ ಆಗಿ ಸೇಲ್ ಕಾಣುತ್ತದೆ. ಇದಕ್ಕಾಗಿಯೆ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್ಫೋನ್ಗಳ ಪೈಕಿ ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದೆ. ಇದೀಗ ದಕ್ಷಿಣ ಕೊರಿಯಾ ಮೂಲದ ಕಂಪನಿ ತನ್ನ M ಸರಣಿಯಲ್ಲಿ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಅದುವೇ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್14 5ಜಿ (Samsung Galaxy M14 5G). ಇದೊಂದು ಮಧ್ಯಮ ಬೆಲೆ ಸ್ಮಾರ್ಟ್‌ಫೋನ್ ಆಗಿದ್ದು, ಬಲಿಷ್ಠ ಬ್ಯಾಟರ್ ಲೈಫ್, ಅತ್ಯುತ್ತಮ ಪ್ರೊಸೆಸರ್, ಕ್ಯಾಮೆರಾವನ್ನು ಒಳಗೊಂಡಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ ಸದ್ಯಕ್ಕೆ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಉಕ್ರೇನ್‌ನಲ್ಲಷ್ಟೆ ರಿಲೀಸ್ ಆಗಿದೆ. ಕೆಲವು ದಿನಗಳ ನಂತರ ಇದು ಭಾರತಕ್ಕೂ ಕಾಲಿಡಲಿದೆ. ಇದರ 4GB RAM + 64GB ರೂಪಾಂತರದ ಆಯ್ಕೆಗೆ UAH 8,299, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 18,300ರೂ. ಇರಬಹುದು. 4GB RAM + 128GB ಆಯ್ಕೆಯು UAH 8,999 ಭಾರತದಲ್ಲಿ 19,900ರೂ. ಇರಬಹುದು. ಬ್ಲೂ, ಗಾಢ ನೀಲಿ ಮತ್ತು ಬೆಳ್ಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.
Tecno Spark 10 Pro: ಥೇಟ್ ಐಫೋನ್ನಂತೆ ಕಾಣುವ ಹೊಸ ಸ್ಮಾರ್ಟ್‌ಫೋನ್ ರಿಲೀಸ್: ಇದರ ಬೆಲೆ 10,000 ಗಿಂತಲೂ ಕಡಿಮೆ
ಏನು ಫೀಚರ್ಸ್?:
ಈ ಸ್ಮಾರ್ಟ್‌ಫೋನ್ M14 5G ಸ್ಮಾರ್ಟ್‌ಫೋನ್ 2408×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಫುಲ್ ಹೆಚ್‌ಡಿ PLS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. ಆಕ್ಟಾ-ಕೋರ್ Exynos 1330 ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ M14 5G ಸ್ಮಾರ್ಟ್‌ಫೋನ್ ಟ್ರಿಪಲ್-ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಈ ಸ್ಮಾರ್ಟ್ಫೋನ್ನ ಪ್ರಮುಖ ಹೈಲೇಟ್ ಆಗಿರುವ ಬ್ಯಾಟರಿಯು 6000mAh ಸಾಮರ್ಥ್ಯದಿಂದ ಕೂಡಿದೆ. 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದ್ದು, 5G, 4G, Wi-Fi, ಬ್ಲೂಟೂತ್ 5.2, NFC ಮತ್ತು GPS ಕನೆಕ್ಟಿವಿಟಿ ಆಯ್ಕೆಯನ್ನು ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ