Instagram Down: ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಇನ್​ಸ್ಟಾಗ್ರಾಮ್ ಡೌನ್

Instagram: ಡೌನ್ ಡಿಟೆಕ್ಟರ್ ವೆಬ್ ಸೈಟ್ ಪ್ರಕಾರ, ಇನ್​ಸ್ಟಾಗ್ರಾಮ್ ಮಾರ್ಚ್ 09, 2023 ಮುಂಜಾನೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿಶ್ವದಲ್ಲಿ ಸುಮಾರು 81 ಪ್ರತಿಶತ ಇನ್​ಸ್ಟಾಗ್ರಾಮ್​ಬಳಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ.

Instagram Down: ಭಾರತ ಸೇರಿದಂತೆ ವಿಶ್ವದ ಅನೇಕ ಭಾಗಗಳಲ್ಲಿ ಇನ್​ಸ್ಟಾಗ್ರಾಮ್ ಡೌನ್
Instagram Down
Follow us
Vinay Bhat
|

Updated on:Mar 09, 2023 | 10:48 AM

ಭಾರತ ಸೇರಿದಂತೆ ವಿಶ್ವದ ಇತರ ಕೆಲವು ಭಾಗಗಳಲ್ಲಿ ಮೆಟಾ ಒಡೆತನದ ಪ್ರಸಿದ್ಧ ಅಪ್ಲಿಕೇಷನ್ ಇನ್​ಸ್ಟಾಗ್ರಾಮ್​ (Instagram) ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತೀಯ ಕಾಲ ಮಾನದ ಪ್ರಕಾರ ಇಂದು ಬೆಳಗ್ಗೆ ಸುಮಾರು 07 ಗಂಟೆ ಹೊತ್ತಿಗೆ ಇನ್​ಸ್ಟಾಗ್ರಾಮ್​ ಡೌನ್ (Instagram Down) ಆಗಿದೆ ಎಂದು ವರದಿಯಾಗಿದೆ. ಡೌನ್ ಡಿಟೆಕ್ಟರ್ ವೆಬ್ ಸೈಟ್ ಪ್ರಕಾರ, ಇನ್​ಸ್ಟಾಗ್ರಾಮ್ ಮಾರ್ಚ್ 09, 2023 ಮುಂಜಾನೆಯಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿಶ್ವದಲ್ಲಿ ಸುಮಾರು 81 ಪ್ರತಿಶತ ಇನ್​ಸ್ಟಾಗ್ರಾಮ್​ಬಳಕೆದಾರರು ತೊಂದರೆ ಅನುಭವಿಸುತ್ತಿದ್ದಾರೆ. 15 ಪ್ರತಿಶತ ಬಳಕೆದಾರರು ಇನ್​ಸ್ಟಾಗ್ರಾಮ್​ವೆಬ್ ಸೈಟ್ ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 5 ಪ್ರತಿಶತ ಬಳಕೆದಾರರು ಲಾಗಿನ್ (Login) ಆಗಲು ಪರದಾಡುತ್ತಿದ್ದಾರಂತೆ.

ಡೌನ್‌ಡೆಕ್ಟರ್ ಹೇಳಿರುವ ಪ್ರಕಾರ, ಅಮೆರಿಕಾದಲ್ಲಿ ಸುಮಾರು 2,000 ಬಳಕೆದಾರರು ಮತ್ತು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಸುಮಾರು 1,000 ಬಳಕೆದಾರರು ಈ ಸಮಸ್ಯೆಗೆ ಒಳಗಾಗಿದ್ದಾರೆ. ಇದರ ಬಗ್ಗೆ ಇನ್​ಸ್ಟಾಗ್ರಾಮ್ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ, ಆದರೆ ಟ್ವಿಟ್ಟರ್​ನಲ್ಲಿ Instagram ಡೌನ್ ಟ್ರೆಂಡ್ ಆಗಿದೆ.

ಇದನ್ನೂ ಓದಿ
Image
Apple Watch Series 8: ₹20,900 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8
Image
Tech Tips: ಬ್ಯಾಂಕ್ ಅಕೌಂಟ್​ನಲ್ಲಿ ಎಷ್ಟು ಹಣವಿದೆ ಎಂದು ವಾಟ್ಸ್​ಆ್ಯಪ್​ನಲ್ಲಿ ನೋಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
Tech Tips: ನೀವು ಕಂಪ್ಯೂಟರ್​ನಲ್ಲಿ ವಾಟ್ಸ್​ಆ್ಯಪ್ ಉಪಯೋಗಿಸ್ತೀರಾ?: ಈ ಟ್ರಿಕ್ ಒಮ್ಮೆ ನೋಡಿ
Image
Tecno Spark 10 Pro: ಥೇಟ್ ಐಫೋನ್​ನಂತೆ ಕಾಣುವ ಹೊಸ ಸ್ಮಾರ್ಟ್​ಫೋನ್ ರಿಲೀಸ್: ಇದರ ಬೆಲೆ 10,000 ಗಿಂತಲೂ ಕಡಿಮೆ

ಇನ್​ಸ್ಟಾ ತೆರೆಯಲು ಪ್ರಯತ್ನಿಸಿದಾಗ ಪ್ಲಾಟ್‌ಫಾರ್ಮ್ ಕ್ರ್ಯಾಶ್ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಜನರು ಲಾಗಿನ್ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ಪ್ರಪಂಚದ ಹಲವಾರು ಭಾಗಗಳಲ್ಲಿ ಇನ್​ಸ್ಟಾಗ್ರಾಮ್ ಡೌನ್ ಆಗುತ್ತಿದ್ದಂತೆ, ಜನರು ಟ್ವಿಟ್ಟರ್​ನಲ್ಲಿ ಮೇಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:03 am, Thu, 9 March 23