Instagram Down: ಭಾರತ ಸೇರಿದಂತೆ ಕೆಲ ದೇಶಗಳಲ್ಲಿ ಇನ್ಸ್ಟಾಗ್ರಾಮ್ ಡೌನ್
ಭಾರತದಲ್ಲಿ ಡೆಲ್ಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ ಇನ್ಸ್ಟಾಗ್ರಾಮ್ ಡೌನ್ ಆಗಿದೆ.
ಭಾರತ ಸೇರಿದಂತೆ ವಿಶ್ವದ ಇತರ ಕೆಲವು ಭಾಗಗಳಲ್ಲಿ ಇನ್ಸ್ಟಾಗ್ರಾಮ್ (Instagram) ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದಲ್ಲಿ ಇಂದು ಮಧ್ಯಾಹ್ನ ಸುಮಾರು 12:15ರ ಹೊತ್ತಿಗೆ ಇನ್ಸ್ಟಾಗ್ರಾಮ್ ಡೌನ್ ಆಗಿದೆ ಎಂದು ವರದಿಯಾಗಿದೆ. ಡೌನ್ ಡಿಟೆಕ್ಟರ್ ವೆಬ್ ಸೈಟ್ ಪ್ರಕಾರ, ಇನ್ ಸ್ಟಾಗ್ರಾಮ್ ಸೆಪ್ಟೆಂಬರ್ 2, 2021 ರಂದು ಮಧ್ಯಾಹ್ನ 12:15 ರ ಸುಮಾರಿಗೆ ಭಾರತದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಸುಮಾರು 45 ಪ್ರತಿಶತ ಇನ್ಸ್ಟಾಗ್ರಾಮ್ಬಳಕೆದಾರರು ಅಪ್ಲಿಕೇಶನ್ ಬಗ್ಗೆ ದೂರು ನೀಡಿದ್ದಾರೆ. ಆದರೆ 33 ಪ್ರತಿಶತ ಬಳಕೆದಾರರು ಇನ್ಸ್ಟಾಗ್ರಾಮ್ವೆಬ್ ಸೈಟ್ ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉಳಿದ 22 ಪ್ರತಿಶತ ಬಳಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಡೆಲ್ಲಿ, ಮುಂಬೈ, ಬೆಂಗಳೂರು ಮತ್ತು ಚೆನ್ನೈನಲ್ಲಿ ಇನ್ಸ್ಟಾಗ್ರಾಮ್ ಡೌನ್ ಆಗಿದೆ. ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಅಪ್ಲಿಕೇಶನ್ ಅನ್ನು ಮರುಸ್ಥಾಪಿಸದಂತೆ ಸೂಚಿಸಲಾಗಿದೆ. ಇದರ ಹಿಂದಿನ ಕಾರಣ ಏನು ಎಂಬೂದು ಇನ್ನೂ ಬಹಿರಂಗವಾಗಿಲ್ಲ. ಬೇರೆಯವರಿಗೆ ಮೆಸೇಜ್ ಮಾಡಲು ಮತ್ತು ಫೀಡ್ ಅನ್ನು ಪರೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕ ಬಳಕೆದಾರರು ದೂರಿದ್ದಾರೆ.
ಭಾರತದಲ್ಲಿ ಮಧ್ಯಾಹ್ನ 12:30ರ ಹೊತ್ತಿಗೆ ಸುಮಾರು 3000 ಬಳಕೆದಾರರು ಇನ್ಸ್ಟಾಗ್ರಾಮ್ ಬಗ್ಗೆ ದೂರು ನೀಡಿದ್ದಾರೆ. ಬೇರೆಯವರಿಗೆ ಮೆಸೇಜ್ ಮಾಡಲು ಮತ್ತು ಫೀಡ್ ಅನ್ನು ಪರೀಕ್ಷಿಸಲು ಮಾತ್ರವಲ್ಲದೆ ರಿಫ್ರೆಶ್ ಮಾಡಲೂ ಆಗುತ್ತಿಲ್ಲ ಎಂದು ದೂರು ನೀಡಿದ್ದಾರೆ.
ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ: ಹೊಸ ಅಪ್ಡೇಟ್ನಲ್ಲಿ ಅಚ್ಚರಿಯ ಫೀಚರ್
(Instagram down globally photo feed and DMs not working for many)
Published On - 1:55 pm, Thu, 2 September 21