ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ: ಹೊಸ ಅಪ್ಡೇಟ್ನಲ್ಲಿ ಅಚ್ಚರಿಯ ಫೀಚರ್
ನಿಮಗೆ ತೊಂದರೆ ನೀಡುವ ಹಾಗೂ ಹಾನಿಕಾರಕ ಸಂದೇಶಗಳನ್ನು ಕಳುಹಿಸುವ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಆಟೋ ಬ್ಲಾಕ್ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ಯಾವುದೇ ವಿಚಾರವಾದರೂ ಸಾಮಾಜಿಕ ಜಾಲತಾಣಗಳಲ್ಲಿ ಥಟ್ ಅಂತ ವೈರಲ್ ಆಗಿ ಬಿಡುತ್ತದೆ. ಅದರಲ್ಲೂ ಹೆಚ್ಚಿನ ಜನರು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ (Twitter) ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟ್ವಿಟ್ಟರ್ ಕೂಡ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಆದರೆ ಈಗೀಗ ಟ್ವಿಟ್ಟರ್ ಅನ್ನು ದುರ್ಬಳಕೆ ಮಾಡಿಕೊಂಡು ದುರದ್ದೇಶಪೂರಿತ ಹೇಳಿಕೆಗಳು, ಅಸಂಬದ್ದ ಎನಿಸುವ ಟೀಕೆ ಟಿಪ್ಪಣಿಗಳು ಹೆಚ್ಚಾಗುತ್ತಿವೆ. ಇದನ್ನ ಮನಗಂಡು ಟ್ವಿಟ್ಟರ್ ಇದೀದ ಹೊಸ ಫೀಚರ್ಸ್ ಒಂದನ್ನು ಪರಿಚಯಿಸಲು ಮುಂದಾಗಿದೆ.
ಟ್ವಿಟ್ಟರ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಬಳಕೆದಾರರಿಗೆ ಹೊಸ ‘ಸೇಫ್ಟಿ ಮೋಡ್’ ಫೀಚರ್ಸ್ ಅನ್ನು ಪರಿಚಯಿಸಲಿದೆ. ಇದರ ಮೂಲಕ ನಿಮಗೆ ತೊಂದರೆ ನೀಡುವ ಹಾಗೂ ಹಾನಿಕಾರಕ ಸಂದೇಶಗಳನ್ನು ಕಳುಹಿಸುವ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ಆಟೋ ಬ್ಲಾಕ್ ಮಾಡಬಹುದು. ಈ ಫೀಚರ್ಸ್ ಅನ್ನು ಆನ್‌ಲೈನ್ ಸುರಕ್ಷತೆ, ಮಾನಸಿಕ ಆರೋಗ್ಯ ಮತ್ತು ಮಾನವ ಹಕ್ಕುಗಳಲ್ಲಿ ಪರಿಣತಿ ಹೊಂದಿರುವ ವಿಶ್ವಾಸಾರ್ಹ ಪಾಲುದಾರರಿಗಾಗಿ ಪರೀಕ್ಷಿಸಲಾಗಿದೆ.
Now testing: Safety Mode to help reduce disruptive interactions on Twitter.
Automatically block accounts that add unwelcome replies, Quote Tweets, and mentions to your convos. If you’re in the test, you can turn on Safety Mode in your “Privacy and safety” settings. https://t.co/n6zlO6fhK3
— Twitter Support (@TwitterSupport) September 1, 2021
ಟ್ವಿಟ್ಟರ್ನ ಬ್ಲಾಗ್ ಪೋಸ್ಟ್ ಪ್ರಕಾರ, ಹಾನಿಕಾರಕ ಭಾಷೆಯಲ್ಲಿ ಅವಮಾನ, ದ್ವೇಷದ ಟೀಕೆಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಪುನರಾವರ್ತಿತ ಮತ್ತು ಆಹ್ವಾನಿಸದ ಪ್ರತ್ಯುತ್ತರಗಳನ್ನು ಅಥವಾ ಉಲ್ಲೇಖಗಳನ್ನು ಕಳುಹಿಸುವವರನ್ನು ನಿರ್ಬಂಧಿಸುತ್ತದೆ. ಇನ್ನು ಈ ಟ್ವಿಟ್ಟರ್ ಬ್ಲಾಗ್ ಪೋಸ್ಟ್ ಹಾನಿಕಾರಕ ಭಾಷೆ ಯಾವುದು ಎಂಬುದರ ಬಗ್ಗೆ ವಿವರಣೆಯನ್ನು ನೀಡಿಲ್ಲ. ಬದಲಿಗೆ ಇಂಗ್ಲಿಷ್ ಭಾಷೆಯ ಸೆಟ್ಟಿಂಗ್‌ಗಳನ್ನು ಸಕ್ರಿಯಗೊಳಿಸಿದವರಿಗೆ ಇದು ಅನ್ವಯಿಸುತ್ತದೆ. ಅಂದರೆ ಇಂಗ್ಲಿಷ್ ಭಾಷೆಯಲ್ಲಿ ಹಾನಿಕಾರಕ ಪದಗಳನ್ನು ಬಳಸಿದರೆ ಮಾತ್ರ ಆ ಅಕೌಂಟ್ ಅನ್ನು ಬ್ಲಾಕ್ ಮಾಡಲಿದೆ.
ಅಷ್ಟೇ ಅಲ್ಲದೆ ಟ್ವಿಟ್ಟರ್ನ ಸಿಸ್ಟಂಗಳು ಯಾರೊಬ್ಬರ ಟ್ವೀಟ್‌ಗಳು ಹಾನಿಕಾರಕ ಅನ್ನೊದನ್ನ ಕಂಡುಕೊಂಡರೆ, ಅವರ ಖಾತೆಯನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲಾಗುತ್ತದೆ. ಅಲ್ಲದೆ ಟ್ವೀಟ್ ಕಳುಹಿಸಿದ ವ್ಯಕ್ತಿಗೆ ಅವರ ಅಕೌಂಟ್ ಕಾಣದಂತೆ ಮಾಡುತ್ತದೆ. ತನ್ನ ಖಾತೆಯನ್ನು ಆಟೋಬ್ಲಾಕ್ ಮಾಡಿದ ಬಳಕೆದಾರರು ಇನ್ನೊಂದು ಖಾತೆಯನ್ನು ಫಾಲೋ ಮಾಡಲು ಕೂಡ ಸಾಧ್ಯವಾಗುವುದಿಲ್ಲ.
ಇತ್ತೀಚೆಗಷ್ಟೆ ಟ್ವಿಟ್ಟರ್ ತನ್ನ ಬಳಕೆದಾರರಿಗೆ ಏಕಕಾಲದಲ್ಲಿ ಅನೇಕ ಖಾತೆಗಳಿಗೆ ನೇರ ಸಂದೇಶಗಳನ್ನು ಕಳುಹಿಸಬಹುದಾದ ಹೊಸ ಆಯ್ಕೆಯನ್ನು ನೀಡಿತ್ತು. ಈ ಮೂಲಕ ನೀವು ಒಂದೇ ಮೆಸೇಜ್ ಅನ್ನು ಒಂದು ಬಾರಿಗೆ 20 ಬೇರೆ ಬೇರೆ ಅಕೌಂಟ್ಗೆ ಕಳುಹಿಸಬಹುದಾಗಿದೆ.
ಮೊಬೈಲ್ ಬಳಕೆದಾರರ ಗಮನಕ್ಕೆ! ಸೆ. 1 ರಿಂದ ಬದಲಾದ 5 ವಿಷಯಗಳ ಬಗ್ಗೆ ಗೊತ್ತಿರಲಿ
(Twitter Update Twitter is testing a new Safety Mode feature)